Kannada News Now

1.8M Followers

BIG NEWS : ರಾಜ್ಯದಲ್ಲಿ ಮೊದಲು 6ರಿಂದ 8ನೇ ತರಗತಿ ಆರಂಭ, ನಂತ್ರ 1 ರಿಂದ 5ನೇ ತರಗತಿ ಶಾಲೆಗಳ ಪ್ರಾರಂಭ - ಸಚಿವ ಬಿ.ಸಿ.ನಾಗೇಶ್

29 Aug 2021.6:09 PM

ಚಿಕ್ಕಮಗಳೂರು : ರಾಜ್ಯದಲ್ಲಿ ಹಂತ ಹಂತವಾಗಿ ಶಾಲಾ ಆರಂಭಕ್ಕೆ ತಜ್ಞರು ಸೂಚಿಸಿದ್ದಾರೆ. ಮೊದಲು 6ರಿಂದ 8ನೇ ತರಗತಿ ಆರಂಭಿಸಲಾಗುತ್ತದೆ. ಆನಂತ್ರ 1 ರಿಂದ 5ನೇ ತರಗತಿ ಶಾಲೆಗಳ ಪ್ರಾರಂಭ ಮಾಡಲಾಗುತ್ತದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಕೋಲಾರದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಕೊರೋನಾ : 15 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಶಿಕ್ಷಣ ತಜ್ಞರು ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡೋದನ್ನೇ ಕಾಯ್ತಾ ಇದ್ದೇವೆ. ಅವರು ಅನುಮತಿ ನೀಡಿದ್ರೇ ರಾಜ್ಯದಲ್ಲಿ ಇನ್ನುಳಿದಂತ ತರಗತಿಗಳನ್ನು ಆರಂಭಿಸಲಾಗುತ್ತದೆ ಎಂಬುದಾಗಿ ಹೇಳಿದರು.

BIG BREAKING NEWS : 'ಟೋಕಿಯೋ ಪ್ಯಾರಾ ಒಲಂಪಿಕ್ಸ್'ನಲ್ಲಿ 'ಹೈ ಜಂಪ್'ನಲ್ಲಿ ಬೆಳ್ಳಿಗೆದ್ದ 'ನಿಶಾದ್ ಕುಮಾರ್'

ಮೊದಲು 6 ರಿಂದ 8ನೇ ತರಗತಿಗಳನ್ನು ಪ್ರಾರಂಭಿಸಲಾಗುತ್ತದೆ. ಈ ನಂತ್ರ 1 ರಿಂದ 5ನೇ ತರಗತಿಗಳನ್ನು ಭೌತಿಕವಾಗಿ ಆರಂಭಿಸಲಾಗುತ್ತದೆ. ಶಿಕ್ಷಣ ಇಲಾಖೆ ಕೂಡ ಈ ನಿಟ್ಟಿನಲ್ಲಿ ಸಿದ್ಧತೆಯನ್ನು ಕೈಗೊಂಡಿದೆ. ಆದ್ರೇ.. ತಜ್ಞರೊಂದಿಗೆ ಸಭೆ ನಡೆಸಿ, ಚರ್ಚಿಸಿದ ನಂತ್ರವೇ ಅಂತಿಮವಾಗಿ ತೀರ್ಮಾನವನ್ನು ಪ್ರಕಟಿಸಲಾಗುತ್ತದೆ ಎಂದರು.

BIG BREAKING NEWS : 2ನೇ ಹಂತದ ಮೆಟ್ರೋ ಕಾಮಗಾರಿ 2025ಕ್ಕೆ ಪೂರ್ಣ : ಕೆಂಗೇರಿಯವರೆಗೆ ಮೆಟ್ರೋ ಸಂಚಾರ ವಿಸ್ತರಣೆ - ಸಿಎಂ ಬೊಮ್ಮಾಯಿ ಘೋಷಣೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags