Kannada News Now

1.8M Followers

BIG BREAKING NEWS : ರಾಜ್ಯ ಸರ್ಕಾರದಿಂದ ಸೆ.3ರ 'ನಗರ ಸ್ಥಳೀಯ ಸಂಸ್ಥೆ'ಗಳ ಚುನಾವಣೆಯಂದು ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ

31 Aug 2021.2:45 PM

ಬೆಂಗಳೂರು : ಸೆಪ್ಟೆಂಬರ್ 3ರಂದು ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಟ್ಟಣ ಪಂಚಾಯ್ತಿಗಳಿಗೆ ಸಾರ್ವತ್ರಿಕ ಚುನಾವಣೆ, ಉಪ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗವು ಘೋಷಿಸಿದೆ. ಮತದಾನದ ದಿನದಂದು ನಗರ ಸ್ಥಳೀಯ ಸಂಸ್ಥೆಯ ಆಯಾ ವಾರ್ಡಿನ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಿ, ಸರ್ಕಾರ ಆದೇಶಿಸಿದೆ.

ಸಿಎಂ ಬಸವರಾಜ ಬೊಮ್ಮಾಯಿ, ನೆರೆ, ಕೊರೋನಾ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಕೋಡಿ ಮಠ ಶ್ರೀಗಳು.!

ಈ ಕುರಿತಂತೆ ರಾಜ್ಯ ಸರ್ಕಾರದ ಆಡಳಿತ ಮತ್ತು ಸುಧಾರಣಾ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ರಾಜ್ಯ ಚುನಾವಣಾ ಆಯೋಗವು ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಟ್ಟಣ ಪಂಚಾಯ್ತಿಗಳಿಗೆ ಸಾರ್ವತ್ರಿಕ ಚುನಾವಣೆ, ಉಪ ಚುನಾವಣೆಯನ್ನು ನಡೆಸಲು ಆದೇಶಿಸಿದೆ. ಚುನಾವಣಾ ವೇಳಾಪಟ್ಟಿಯಂತೆ ದಿನಾಂಕ 03-09-2021ರ ಶುಕ್ರವಾರದಂದು ಮತದಾನ ನಡೆಯಲಿದೆ.

BIG BREAKING NEWS : ಗೋವಿಂದರಾಜಪುರ ಡ್ರಗ್ ಕೇಸ್ ಪ್ರಕರಣ : ಸೋನಿಯಾ ಅಗರ್ವಾಲ್, ದಿಲೀಪ್ ಡ್ರಗ್ಸ್ ಸೇವನೆ ವರದಿಯಲ್ಲಿ ದೃಢ

ಮತದಾರರಿಗೆ ಮತದಾನ ಮಾಡಲು ಅವಕಾಶವಾಗುವಂತೆ ಸಾರ್ವತ್ರಿಕ ಚುನಾವಣೆ ನಡೆಯುವ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಹಾಗೂ ಉಪ ಚುನಾವಣೆ ನಡೆಯುವ ಆಯಾಯ ನಗರ ಸ್ಥಳೀಯ ಸಂಸ್ಥೆಯ ಆಯಾ ವರ್ಡಿನ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ( ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ ) ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ದಿನಾಂಕ 03-09-2021ರಂದು ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.

ಚುನಾವಣೆ ನಡೆಯುವ ವಾರ್ಡಿನ ವ್ಯಾಪ್ತಿಯಲ್ಲಿರುವ ಎಲ್ಲಾ ಸಾರ್ವಜನಿಕ ಉದ್ದಿಮೆಗಳು ವ್ಯವಹಾರಿಕ ಸಂಸ್ಥೆಗಳು, ಖಾಸಗಿ ಕಂಪನಿಗಳು ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ದಿನಾಂಕ 03-09-2021ರ ಶುಕ್ರವಾರದಂದು ಕರ್ನಾಟಕ ಪೌರಸಭೆಗಳ ನಿಯಮಗಳ ಅಡಿಯಲ್ಲಿ ವೇತನ ಸಹಿತ ರಜೆಯನ್ನು ನೀಡಲು ಆದೇಶಿಸಿದೆ.

BIG BREAKING NEWS : ಕರಾವಳಿಯಲ್ಲಿ ಶ್ರೀಲಂಕಾ ಉಗ್ರರ ಸುಳಿವು : ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಜಿಲ್ಲೆಯಲ್ಲಿ ಹೈ ಅಲರ್ಟ್.!

ಚುನಾವಣೆ ನಡೆಯುವ ವಾರ್ಡ್ ಗಳ ವ್ಯಾಪ್ತಿಯ ಹೊರಗಡೆ ಕೆಲಸ ನಿರ್ವಹಿಸುತ್ತಿದ್ದು, ಆದ್ರೇ ಚುನಾವಣೆ ನಡೆಯುತ್ತಿರುವ ವಾರ್ಡ್ ನ ವ್ಯಾಪ್ತಿಯಲ್ಲಿ ನೋಂದಾಯಿತ ಮತದಾರರಾಗಿರುವವರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ದಿನಾಂಕ 03-09-2021ರಂದು ವೇತನ ಸಹಿತ ರಜೆಯನ್ನು ನೀಡಲು ಆದೇಶಿಸಿದೆ.

ನನ್ನ ಕೊನೆ ಉಸಿರಿರೋವರೆಗೆ ನನ್ನ ಹಾಗೂ ಸಿದ್ದರಾಮಯ್ಯ ಸಂಬಂಧ ಹೀಗೆ ಇರುತ್ತೆ - ಶಾಸಕ ಜಮೀರ್ ಅಹ್ಮದ್ ಖಾನ್

ಹೀಗಿದೆ ಚುನಾವಣೆ ಘೋಷಣೆಯಾಗಿರುವಂತ ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಟ್ಟಣ ಪಂಚಾಯ್ತಿಗಳ ಪಟ್ಟಿ

ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಮಹಾನಗರ ಪಾಲಿಕೆಗಳು

  • ಬೆಳಗಾವಿ
  • ಹುಬ್ಬಳ್ಳಿ - ಧಾರವಾಡ
  • ಕಲಬುರ್ಗಿ

ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳು

  • ಬೆಂಗಳೂರು ಗ್ರಾಮಾಂತರ - ದೊಡ್ಡಬಳ್ಳಾಪುರ ನಗರಸಭೆ
  • ಚಿಕ್ಕಮಗಳೂರು - ತರೀಕೆರೆ ಪುರಸಭೆ
  • ಬೀದರ್ - ಬೀದರ್ ನಗರಸಭೆ
  • ಶಿವಮೊಗ್ಗ - ಭದ್ರಾವತಿ ನಗರಸಭೆ

ಉಪ ಚುನಾವಣೆ ನಡೆಯುವ ಮಹಾನಗರ ಪಾಲಿಕೆ

  • ಮೈಸೂರು - ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂ.36

ಉಪ ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳು

  • ಬಾಗಲಕೋಟೆ - ಮುಧೋಳ ನಗರಸಭೆ, ಬೀಳಗಿ ಪಟ್ಟಣ ಪಂಚಾಯ್ತಿ, ಮಹಾಲಿಂಗಪುರ ಪುರಸಭೆ, ತೇರದಾಳ ಪುರಸಭೆ
  • ಕೊಡಗು - ವಿರಾಜಪೇಟೆ, ಸೋಮವಾರ ಪೇಟೆ 01, ಸೋಮವಾರಪೇಟೆ 03 ಪಟ್ಟಣ ಪಂಚಾಯ್ತಿ
  • ಉತ್ತರ ಕನ್ನಡ - ದಾಂಡೇಲಿ ನಗರಸಭೆ
  • ಕಲಬುರ್ಗಿ - ವಾಡಿ 04, ವಾಡಿ 23 ಪುರಸಭೆ
  • ಬೀದರ್ - ಬಸವಕಲ್ಯಾಣ 11, ಬಸವಕಲ್ಯಾಣ 23 ನಗರಸಭೆ
  • ಕೋಲಾರ - ಕೆಜಿಎಫ್ ನಗರಸಭೆ
  • ದಾವಣಗೆರೆ - ಹರಿಹರ ನಗರಸಭೆ
  • ಬೆಳಗಾವಿ - ರಾಯಬಾಗ್ ಪಟ್ಟಣ ಪಂಚಾಯ್ತಿ
  • ಕೊಪ್ಪಳ - ಸವದತ್ತಿ ಪುರಸಭೆ, ಕುಷ್ಟಗಿ ಪುರಸಭೆ
  • ಗದಗ - ಮುಳುಗುಂದ ಪಟ್ಟಣ ಪಂಚಾಯ್ತಿ
  • ರಾಮನಗರ - ರಾಮನಗರ ನಗರಸಭೆ
  • ವಿಜಯಪುರ - ಬಸವನಬಾಗೇವಾಡಿ ಪುರಸಭೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags