Kannada News Now

1.8M Followers

Breaking : NEET UG 2021 ಮುಂದೂಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

06 Sep 2021.1:30 PM

ನವದೆಹಲಿ : 2021 ನೇ ವರ್ಷದ ಪದವಿಪೂರ್ವ ಕೋರ್ಸ್‌ಗಳಿಗೆ ನಡೆಸಲಾಗುವ ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರನ್ಸ್ ಟೆಸ್ಟ್ (NEET) ಪರೀಕ್ಷೆ ಸೆಪ್ಟೆಂಬರ್ 12 ರಂದು ನಿಗದಿಯಾದಂತೆ ನಡೆಯಲಿದೆ, ಸುಪ್ರೀಂ ಕೋರ್ಟ್ ಸೋಮವಾರ ಪರೀಕ್ಷೆಯನ್ನು ಮುಂದೂಡಲು/ ಮರುಹೊಂದಿಸಲು ಕೋರಿ ಸಲ್ಲಿಸಿದ ಅರ್ಜಿಗಳನ್ನು ವಜಾಗೊಳಿಸಿದೆ.

ಸಿಬಿಎಸ್‌ಇ ಬೋರ್ಡ್ ಸುಧಾರಣಾ ಪರೀಕ್ಷೆಗಳು, ಕಂಪಾರ್ಟ್ಮೆಂಟ್ ಪರೀಕ್ಷೆಗಳು, ಇತರ ಪ್ರವೇಶ ಪರೀಕ್ಷೆಗಳ ಮಧ್ಯದಲ್ಲಿ ನೀಟ್ ಅನ್ನು ಮರು ನಿಗದಿಪಡಿಸುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು.

ಅಬ್ಬಾ ! KG 'ಬೆಂಡೆಕಾಯಿ' ಗೆ 800 ರೂಪಾಯಿ : ಭೋಪಾಲ್ ರೈತ ಬೆಳೆಸಿದ್ದಾನೆ ದುಬಾರಿ ಕೆಂಪು ಬೆಂಡೆ

ಸಿಬಿಎಸ್‌ಇ 12 ನೇ ತರಗತಿಯ ವಿದ್ಯಾರ್ಥಿಗಳು ಸೆಪ್ಟೆಂಬರ್ 6 ರಂದು ಜೀವಶಾಸ್ತ್ರ ಪರೀಕ್ಷೆ, ಸೆಪ್ಟೆಂಬರ್ 9 ರಂದು ಭೌತಶಾಸ್ತ್ರ, ನೀಟ್ ಪರೀಕ್ಷೆಯ ಒಂದೇ ವಾರದಲ್ಲಿ ಎರಡು ಪ್ರಮುಖ ವಿಜ್ಞಾನ ಪತ್ರಿಕೆಗಳನ್ನು ಹೊಂದಿರುತ್ತಾರೆ ಎಂದು ವಕೀಲ ಸುಮಂತ್ ನೂಕಾಲಾ ಮೂಲಕ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರದ ಈ ವಿಶೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಮನೆಯಲ್ಲೇ ಕುಳಿತು 50,000 ರೂ. ಗೆಲ್ಲಬಹುದು! ಹೇಗೆ ಗೊತ್ತಾ?

ಆದಾಗ್ಯೂ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ.ರವಿಕುಮಾರ್ ಅವರ ಪೀಠವು ಕೆಲವು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಹು ಪರೀಕ್ಷೆಗಳಿಗೆ ಹಾಜರಾಗಲು, ನೀಟ್ ಅನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಹೇಳಿದೆ.

'ನೀವು ಬಹು ಪರೀಕ್ಷೆಗಳಿಗೆ ಹಾಜರಾಗಬೇಕಾದರೆ, ನೀವು ಆಯ್ಕೆ ಮಾಡಬೇಕು' ಎಂದು ಕೋರ್ಟ್ ಹೇಳಿದೆ.







Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags