Kannada News Now

1.8M Followers

ರಾಜ್ಯ ಸರ್ಕಾರದಿಂದ `SC-ST' ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ಅರ್ಜಿ ಆಹ್ವಾನ

18 Sep 2021.10:38 AM

ಬೆಂಗಳೂರು : ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SC-ST)ದ ಅಭ್ಯರ್ಥಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಿದೆ.

BREAKING NEWS : ದೇಶದಲ್ಲಿ ಕೊರೋನಾ 3.65% ಹೆಚ್ಚಳ : ಒಂದೇ ದಿನದಲ್ಲಿ 35,662 ಹೊಸ ಪ್ರಕರಣ ದಾಖಲು

ಯುಪಿಎಸ್ ಸಿ, ಕೆಎಎಸ್, ಬ್ಯಾಕಿಂಗ್, ಎಸ್‌ಎಸ್‌ಎಸ್ ಸಿ, ಆರ್, ಆರ್ ಬಿ ಮತ್ತು ಗ್ರೂಪ್ ಸಿ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಕೋವಿಡ್ ಲಸಿಕೆ ವಿತರಣೆ : ದೇಶದ ನಗರಗಳ ಪೈಕಿ ಬೆಂಗಳೂರು ನಗರಕ್ಕೆ ಮೊದಲ ಸ್ಥಾನ

2020 ರ ಡಿಸೆಂಬರ್ ತಿಂಗಳಲ್ಲಿ ಇಲಾಖೆಯಿಂದ ಅರ್ಜಿ ಆಹ್ವಾನಿಸಿದ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಆದರೆ ಕೆಇಎ ಯಿಂದ ನಡೆಸಲಾಗುವ ಪ್ರವೇಶ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಬೇಕು. ಸಾಮಾನ್ಯ ಪ್ರವೇಶ ಪರೀಕ್ಷೆಯು ಅಕ್ಟೋಬರ್ ಅಥವಾ ನವೆಂಬರ್ 2021 ಮಾಹೆಯಲ್ಲಿ ಏರ್ಪಡಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್ ಸೈಟ್ sw.kar.nic.in ಗೆ ಭೇಟಿ ನೀಡಬಹುದು.

ಇಂದಿನಿಂದ ಚಾರ್ ಧಾಮ್ ಯಾತ್ರೆ 2021 ಪ್ರಾರಂಭ : ವಾರ್ಷಿಕ ತೀರ್ಥಯಾತ್ರೆಗೆ ಹೋಗುವಂತವರು ಈ ಮಾರ್ಗಸೂಚಿ ಪಾಲಿಸೋದು ಕಡ್ಡಾಯ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags