ವಿಜಯವಾಣಿ

505k Followers

ದ್ವಿತೀಯ ಪಿಯುಸಿ ರಿಸಲ್ಟ್‌- ಚಾಲೆಂಜ್ ಮಾಡಿ ಪರೀಕ್ಷೆ ತೆಗೆದುಕೊಂಡವರಲ್ಲಿ 36 ವಿದ್ಯಾರ್ಥಿಗಳು ಫೇಲ್!

20 Sep 2021.11:25 AM

ಬೆಂಗಳೂರು: ಇದೇ‌ ಆಗಸ್ಟ್/ಸೆಪ್ಟೆಂಬರ್ ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೋಮವಾರ ಪ್ರಕಟಿಸಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು 18,413 ವಿದ್ಯಾರ್ಥಿಗಳಲ್ಲಿ 5,507 ( ಶೇಕಡ 29.91) ತೇರ್ಗಡೆಯಾಗಿದ್ದಾರೆ.

ಒಟ್ಟು ವಿದ್ಯಾರ್ಥಿಗಳ ಪೈಕಿ ಬಾಲಕಿಯರು ಮೇಲುಗೈ ಸಾಧಿಸಿದ್ದು, ಶೇ.36.72ರಷ್ಟು ಉತ್ತೀರ್ಣರಾಗಿದ್ದರೆ, ಬಾಲಕರು ಶೇ.26.06ರಷ್ಟು ತೇರ್ಗಡೆಯಾಗಿದ್ದಾರೆ.

ಚಾಲೆಂಜ್ ಗೆಲ್ಲದವರು
ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಎಲ್ಲ ವಿದ್ಯಾರ್ಥಿಗಳನ್ನು ಸರ್ಕಾರ ಪಾಸ್ ಮಾಡಿತ್ತು.

ಆದರೆ, ಇದನ್ನು ಚಾಲೆಂಜ್ ಮಾಡಿದ 592 ವಿದ್ಯಾರ್ಥಿಗಳು ಪರೀಕ್ಷೆ ಬರೆದೇ ಇನ್ನೂ ಉತ್ತಮ ಅಂಕ ಗಳಿಸುತ್ತೇವೆ ಎಂದು ಪರೀಕ್ಷೆಗೆ ಹಾಜರಾಗಿದ್ದರು.

ಪರೀಕ್ಷೆ ಬರೆದ ಒಟ್ಟು 592 ಹೊಸಬರಲ್ಲಿ 556 ತೇರ್ಗಡೆ (93.92%) ಹೊಂದಿದ್ದು, 36 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಪುನರಾವರ್ತಿತ 351 ರಲ್ಲಿ 183 ಪಾಸ್ (52.29%), 168. ಫೇಲ್, ಖಾಸಗಿ 17,470 ರಲ್ಲಿ 4,768 ಉತ್ತೀರ್ಣ (27.29%), 12,906 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಶೇ.70.83, ವಾಣಿಜ್ಯ- ಶೇ.24.98, ಕಲೆ ವಿಭಾಗದಲ್ಲಿ ಶೇ.32.06 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ತೇರ್ಗಡೆಯಾದವರಲ್ಲಿ ಗ್ರಾಮೀಣ ಶೇ.32.59, ನಗರ ಶೇ.28.62ರಷ್ಟು ವಿದ್ಯಾರ್ಥಿಗಳಿದ್ದಾರೆ.

ಅತ್ಯಧಿಕ ಅಂಕ ಗಳಿಕೆ
ಒಟ್ಟು 600ಕ್ಕೆ ಸೈನ್ಸ್- 573, ವಾಣಿಜ್ಯ- 594 ಮತ್ತು ಕಲೆ- 592. ಸ್ಕ್ಯಾನಿಂಗ್ ಪ್ರತಿ ಪಡೆಯಲು 530. ರೂ, ಮರು ಮೌಲ್ಯಮಾಪನಕ್ಕೆ 1,670 ರೂ ಶುಲ್ಕ ನಿಗದಿಪಡಿಸಿದ್ದು, 5-10-2021ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬಿ.ಸಿ.ನಾಗೇಶ್ ವಿವರಿಸಿದರು. ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಪಿಯು ಮಂಡಳಿ ನಿರ್ದೇಶಕಿ ಆರ್.ಸ್ನೇಹಲ್ ಇದ್ದರು.

ಗಣೇಶನ ವಿಸರ್ಜನೆ ವೇಳೆ ಭಾರಿ ದುರಂತ: ಹಸುಗೂಸು ಸೇರಿ 10 ಮಕ್ಕಳು ನೀರು ಪಾಲು!

ಪತ್ನಿ, ಮೂವರು ಮಕ್ಕಳು, ಮೊಮ್ಮಗುವಿನ ಸಾವಿಗೆ ಕಾರಣವಾದ್ರಾ ಈ ಸಂಪಾದಕ? ಡೆತ್‌ನೋಟ್‌ನಲ್ಲಿ ಸಿಕ್ಕಿವೆ ಮಹತ್ವದ ಸುಳಿವು!

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags