ಕನ್ನಡದುನಿಯಾ

1.6M Followers

BIG NEWS: 'ಮಾವನ ಆಸ್ತಿಯ ಮೇಲೆ ಅಳಿಯನಿಗೆ ಹಕ್ಕಿಲ್ಲ' - ಹೈಕೋರ್ಟ್​ ಮಹತ್ವದ ತೀರ್ಪು

04 Oct 2021.6:42 PM

ಮಾವನ ಆಸ್ತಿಯ ಮೇಲೆ ಅಳಿಯನಿಗೆ ಯಾವುದೇ ರೀತಿಯ ಕಾನೂನು ಹಕ್ಕು ಇರುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

ಮಾವ ಹೆಂಡ್ರಿ ಥಾಮಸ್​​ ಆಸ್ತಿಯ ಮೇಲೆ ಹಕ್ಕನ್ನು ನಿರಾಕರಿಸಿದ ಪಯ್ಯನ್ನೂರು ಉಪ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದ್ದ ತಲಿಪರಂಬದ ಡೇವಿಸ್​ ರಾಫೆಲ್​ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಧೀಶ ಎನ್​ ಅನಿಲ್​ ಕುಮಾರ್​​​ ವಜಾಗೊಳಿಸುವ ಮೂಲಕ ಉಪ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದ್ದಾರೆ.

ಪ್ರತಿ ತಿಂಗಳು 10 ಸಾವಿರ ಪಿಂಚಣಿ ಬಯಸುವವರಿಗೆ ಇಲ್ಲಿದೆ ʼಗುಡ್ ನ್ಯೂಸ್ʼ

ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಮಾವ ಥಾಮಸ್​​ ತಮ್ಮ ಆಸ್ತಿಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಹಾಗೂ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿರುವ ಡೇವಿಸ್​ ಪ್ರಯತ್ನಕ್ಕೆ ತಡೆ ನೀಡಬೇಕು ಎಂದು ಕೋರಿದ್ದರು. ಸೇಂಟ್​ ಪಾಲ್ಸ್​ ಚರ್ಚ್​ ಪರವಾಗಿ ಫ್ರಾಸ್​ ಜೇಮ್ಸ್​ ನಸ್ರತ್​​ ಅವರು ಉಡುಗೊರೆ ಪತ್ರದ ಮೂಲಕ ಆಸ್ತಿ ನೀಡಿದ್ದಾರೆ. ಇಲ್ಲಿ ನಾನು ಸ್ವಂತ ಹಣದಿಂದ ಮನೆ ನಿರ್ಮಾಣ ಮಾಡಿದ್ದೇನೆ. ಈ ಆಸ್ತಿಯ ಮೇಲೆ ನನ್ನ ಅಳಿಯನಿಗೆ ಯಾವುದೇ ರೀತಿಯ ಹಕ್ಕಿಲ್ಲ ಎಂದು ವಾದಿಸಿದ್ದರು.

ಈ ಆಸ್ತಿಯನ್ನು ಕುಟುಂಬಕ್ಕೆ ಚರ್ಚ್​ ಉಡುಗೊರೆಯಾಗಿ ನೀಡಿರುವುದರಿಂದ ಆಸ್ತಿಯ ಶೀರ್ಷಿಕೆಯೇ ವಿವಾದಾತ್ಮಕವಾಗಿದೆ. ಹೆಂಡ್ರಿಯ ಏಕೈಕ ಪುತ್ರಿಯನ್ನು ನಾನು ವರಿಸಿದ್ದೇನೆ. ಮದುವೆಯ ನಂತರ ನಾನು ಇದೇ ಕುಟುಂಬಕ್ಕೆ ಸೇರಿದ್ದೇನೆ. ಆದ್ದರಿಂದ ಈ ಮನೆಯಲ್ಲಿ ವಾಸಿಸುವ ಹಕ್ಕನ್ನು ನಾನು ಹೊಂದಿದ್ದೇನೆ ಎಂದು ಅಳಿಯ ಡೇವಿಸ್​ ವಾದಿಸಿದ್ದರು. ಈ ವಾದ ವಿವಾದ ಆಲಿಸಿದ್ದ ವಿಚಾರಣಾ ನ್ಯಾಯಾಲಯ ಅಳಿಯನಿಗೆ ಆಸ್ತಿಯ ಮೇಲೆ ಹಕ್ಕಿಲ್ಲ ಎಂದು ಹೇಳಿತ್ತು.

ಬೇಡಿಕೆಯಿರುವ ಈ ವ್ಯವಹಾರ ಶುರು ಮಾಡಿ ಕೈತುಂಬ ಗಳಿಸಿ ಹಣ

ಎರಡೂ ಕಡೆಯ ವಾದ ಆಲಿಸಿದ ಹೈಕೋರ್ಟ್, ಅಳಿಯನನ್ನು ಮಾವನ ಮನೆಯ ಸದಸ್ಯ ಎಂದು ಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ವಿವಾಹದ ನಂತರ ತನ್ನನ್ನು ಕುಟುಂಬ ಸದಸ್ಯನಾಗಿ ದತ್ತು ತೆಗೆದುಕೊಳ್ಳಲಾಗಿದೆ ಎಂಬ ಅಳಿಯನ ವಾದವೇ ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಛೀಮಾರಿ ಹಾಕಿದೆ. ಈ ಮೂಲಕ ಅಳಿಯನಿಗೆ ಮಾವನ ಆಸ್ತಿಯ ಮೇಲೆ ಯಾವುದೇ ಹಕ್ಕಿಲ್ಲ ಎಂದಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags