Kannada News Now

1.8M Followers

ಶಾಲೆಯಲ್ಲೇ ಮಹಿಳೆಯಿಂದ ಮುಖ್ಯೋಪಾಧ್ಯಾಯ ಮಸಾಜ್ : ವೀಡಿಯೋ ವೈರಲ್ ನಂತ್ರ ಬಿಬಿಎಂಪಿಯಿಂದ ಅಮಾನತು

22 Sep 2021.4:35 PM

ಬೆಂಗಳೂರು : ನಗರದ ಕೋದಂಡರಾಮಪುರ ಪ್ರೌಢ ಶಾಲೆಯಲ್ಲಿ ಪ್ರಭಾರದ ಮೇಲೆ ಮುಖ್ಯ ಶಿಕ್ಷಕರಾಗಿದ್ದಂತ ಲೋಕೇಶಪ್ಪ ಎಂಬುವರು, ಮಗುವಿನ ದಾಖಲಾತಿಗೆಂದು ಶಾಲೆಗೆ ಬಂದಿದ್ದಂತ ಮಹಿಳೆಯಿಂದಲೇ, ಶಾಲೆಯಲ್ಲೇ ಮಸಾಜ್ ಮಾಡಿಸಿಕೊಂಡಿದ್ದರು. ಈ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಕೂಡ ಆಗಿತ್ತು.

ಮಾಧ್ಯಮಗಳಲ್ಲಿ ಮುಖ್ಯೋಪಾಧ್ಯಾಯನ ಮಸಾಜ್ ಚಲ್ ಕಲ್ ಪ್ರಸಾರವಾದ ನಂತ್ರ, ಇದೀಗ ಮುಖ್ಯೋಪಾಧ್ಯಾಯನನ್ನು ಇಲಾಖಾ ವಿಚಾರಣೆ ನಿರೀಕ್ಷಿಸಿ, ಸೇವೆಯಿಂದ ಅಮಾನತು ಮಾಡಿ, ಬಿಬಿಎಂಪಿಯ ವಿಶೇಷ ಆಯುಕ್ತರು(ಶಿಕ್ಷಣ) ಆದೇಶ ಹೊರಡಿಸಿದ್ದಾರೆ.

'ವೃತ್ತಿಪರ ಕೋರ್ಸ್' ವಿದ್ಯಾರ್ಥಿಗಳೇ ಗಮನಿಸಿ : 'ಬಾಲ್ಕ್' ಮೂಲಕ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಇಲ್ಲಿದೆ ಸುವರ್ಣಾವಕಾಶ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೋದಂಡರಾಮಪುರ ಪ್ರೌಢಶಾಲೆಯಲ್ಲಿ ಶ್ರೀ ಲೋಕೇಶಪ್ಪ ರವರು ಪ್ರಭಾರದ ಮೇಲೆ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಪಾಲಿಕೆಯ ಕೋದಂಡರಾಮಪುರ ಪ್ರೌಢಶಾಲೆಯಲ್ಲಿ ಮಗುವಿನ ದಾಖಲಾತಿಗೆಂದು ಮಹಿಳೆಯೊಬ್ಬರು ಶಾಲೆಗೆ ಬಂದಿರುತ್ತಾರೆ. ಈ ವೇಳೆ ಮಹಿಳೆಯಿಂದ ತಾವು ಪಾಲಿಕೆಯ ಕೋದಂಡರಾಮಪುರ ಪ್ರೌಢಶಾಲೆಯ ಕಟ್ಟಡದಲ್ಲಿ ಮಸಾಜ್ ಮಾಡಿಕೊಂಡಿರುವ ಸಂಬಂಧ ದೃಶ್ಯಾವಳಿಗಳು ದಿನಾಂಕ: 22-09-2021ರಂದು ಸಾರ್ವಜನಿಕ ಮಾಧ್ಯಮಗಳಲ್ಲಿ ಪ್ರಕಟವಾಗಿರುತ್ತದೆ. ಈ ಸಂಬಂಧ ಲೋಕೇಶಪ್ಪ ರವರನ್ನು ಖುದ್ದು ವಿಚಾರಿಸಿದ್ದು, ಮಸಾಜ್ ಮಾಡಿಸಿಕೊಂಡಿರುವುದಾಗಿ ಒಪ್ಪಿರುತ್ತಾರೆ.

ಕೆರೆ ಒತ್ತುವರಿದಾರರಿಗೆ ಬಿಗ್ ಶಾಕ್ : ಇನ್ಮುಂದೆ ಪ್ರತಿ ಶನಿವಾರ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ

ಪಾಲಿಕೆಯ ಕೋದಂಡರಾಮಪುರ ಪ್ರೌಢಶಾಲೆಯ ಸರ್ಕಾರಿ ಕಟ್ಟಡವನ್ನು ತಮ್ಮ ಖಾಸಗಿ ಕೆಲಸಕ್ಕೆ ಬಳಸಿಕೊಂಡಿರುವುದು ಸರ್ಕಾರಿ ಕೆಲಸದ ಸಮಯದಲ್ಲಿ ಕರ್ತವ್ಯ ಲೋಪ ಎಸಗಿರುವುದರಿಂದ ಕರ್ನಾಟಕ ನಾಗರೀಕ ನಿಯಮಾವಳಿಗಳನ್ವಯ ಈ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ನಿರೀಕ್ಷಿಸಿ, ಸೇವೆಯಿಂದ ಅಮಾನತ್ತುಪಡಿಸಲಾಗಿದೆ ಹಾಗೂ 1958ರ ಕೆ.ಸಿ.ಎಸ್‌.ಆರ್‌ ನಿಯಮ 98 ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ತಿಳಿಸಿದ್ದಾರೆ.

ಚರ್ಚೆ ವೇಳೆ ಸದನದಲ್ಲೇ ಬಿಚ್ಚಿಕೊಂಡ 'ವಿಪಕ್ಷ ನಾಯಕ ಸಿದ್ದರಾಮಯ್ಯ' ಪಂಚೆ : ಮುಂದೇನಾಯ್ತು.?



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags