Kannada News Now

1.8M Followers

Second PU Marks Card : ಇನ್ಮುಂದೆ 'ದ್ವಿತೀಯ PUC ಅಂಕಪಟ್ಟಿ' ಕಳೆದು ಹೋದ್ರೆ, ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಪಡೆಯಲು ಅವಕಾಶ

22 Sep 2021.1:02 PM

ಬೆಂಗಳೂರು : ಇದುವರೆಗೆ ದ್ವಿತೀಯ ಪಿಯುಸಿ ಅಂಕಪಟ್ಟಿ ( Karnataka Second PU Marks Card ) ನಕಲು ಪಡೆಯೋದಕ್ಕೆ ಭೌತಿಕವಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿತ್ತು. ಇಂತಹ ಪ್ರಕ್ರಿಯೆಗೆ ಪಿಯು ಮಂಡಳಿ ( PU Board ) ತಿಲಾಂಜಲಿ ನೀಡಿದ್ದು, ಇನ್ಮುಂದೆ ಆನ್ ಲೈನ್ ಮೂಲಕವೇ ದ್ವಿತೀಯ, ತೃತೀಯ ಅಂಕಪಟ್ಟಿ ಪಡೆಯಲು ಅರ್ಜಿ ಸಲ್ಲಿಸೋದಕ್ಕೆ ಆರಂಭಿಸಿದೆ.

'ವೃತ್ತಿಪರ ಕೋರ್ಸ್' ವಿದ್ಯಾರ್ಥಿಗಳೇ ಗಮನಿಸಿ : 'ಬಾಲ್ಕ್' ಮೂಲಕ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಇಲ್ಲಿದೆ ಸುವರ್ಣಾವಕಾಶ

ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ತಮ್ಮ ಮೂಲ ಅಂಕಪಟ್ಟಿಯನ್ನು ಕಳೆದುಕೊಂಡಲ್ಲಿ ಅಂತಹ ವಿದ್ಯಾರ್ಥಿಗಳು ದ್ವಿತೀಯ, ತೃತೀಯ ಅಂಕಪಟ್ಟಿ, ಪ್ರಮಾಣ ಪತ್ರ ಪಡೆಯಲು ಪ್ರಸ್ತುತ ಅರ್ಜಿಯನ್ನು ಭೌತಿಕವಾಗಿ ಸ್ವೀಕರಿಸಿ, ಇತ್ಯರ್ಥಪಡಿಸಲಾಗುತ್ತಿದೆ.

ಬಿಜೆಪಿ ತನ್ನ ಸಂಕುಚಿತ ಮನೋಭಾವ ತೊರೆದು ದೊಡ್ಡತನ ಪ್ರದರ್ಶಿಸಬೇಕು - ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಸದರಿ ಸೇವೆಯನ್ನು ದಿನಾಂಕ 22-09-2021ರಿಂದ ಆನ್ ಲೈನ್ ಮುಖಾಂತರ ನಿರ್ವಹಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಈ ಬಗ್ಗೆ ವಿವರಗಳಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಾಲತಾಣ http://www.pue.kar.nic.in ನಲ್ಲಿ ನೋಡಬಹುದಾಗಿ ಎಂದು ತಿಳಿಸಿದೆ.

Cheque Rule Change : ಮುಂದಿನ ತಿಂಗಳಿನಿಂದ ಈ ಬ್ಯಾಂಕುಗಳ ಚೆಕ್ ಬುಕ್ ಅಮಾನ್ಯ, ಮಿಸ್ ಮಾಡದೆ ಹೊಸ ಚೆಕ್ ಬುಕ್ ತಗೊಳ್ಳಿ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags