Kannada News Now

1.8M Followers

ರಾಜ್ಯದ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಹಿಸುದ್ದಿ : ಶೇ.5ರಷ್ಟು ವೇತನ ಹೆಚ್ಚಳ, ಎಕ್ಸ್ ಪೀರಿಯನ್ಸ್ ಬೋನಸ್ ಬಿಡುಗಡೆ

22 Sep 2021.10:29 AM

ವರದಿ : ವಸಂತ ಬಿ ಈಶ್ವರಗೆರೆ

ಬೆಂಗಳೂರು : ರಾಜ್ಯ ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಶೇ.5ರಷ್ಟು ಹೆಚ್ಚುವರಿ ವೇತನ, ಎಕ್ಸ್ ಪೀರಿಯನ್ಸ್ ಬೋನಸ್ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಮೂಲಕ ಆರೋಗ್ಯ ಇಲಾಖೆಯ ಗುತ್ತಿಗೆ ಹೊರಗುತ್ತಿಗೆ ನೌಕರರಿಗೆ ಸಿಹಿಸುದ್ದಿ ನೀಡಿದೆ.

Aadhar Card Download: ಮೊಬೈಲ್ ನಂಬರ್ ಇಲ್ಲದೆ ಇದ್ದರೂ ಹೀಗೆ ಡೌನ್ ಲೋಡ್ ಮಾಡಿ ಆಧಾರ್ ಕಾರ್ಡ್

ಈ ಕುರಿತಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕರು ಮಾರ್ಗಸೂಚಿ ಹೊರಡಿಸಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯ, ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮದಡಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ 2021-22ನೇ ಸಾಲಿನ ಆರ್ ಓಪಿಯಲ್ಲಿ ಶೇ.5ರಷ್ಟು ಹೆಚ್ಚುವರಿ ಮೊತ್ತವು ಅನುಮೋದನೆಯಾಗಿದ್ದು, ಒಂದು ವರ್ಷ ಪೂರೈಸಿದ ಸಿಬ್ಬಂದಿಗಳಿಗೆ ಮಾತ್ರ ಮಾಸಿಕ ಶೇ.5ರಷ್ಟು ಹೆಚ್ಚುವರಿ ವೇತನ ನೀಡುವುದು.

BIG NEWS : ವಿಶ್ವಸಂಸ್ಥೆಗೆ ಅಫ್ಘಾನಿಸ್ತಾನದ ರಾಯಭಾರಿಯನ್ನು ಘೋಷಿಸಿದ ತಾಲಿಬಾನ್

2020-21ನೇ ಸಾಲಿನಲ್ಲಿ ರೂ.15,000ಗಳಿಗಿಂತ ಕಡಿಮೆ ಮಾಸಿಕ ವೇತನ ಪಡೆಯುತ್ತಿರುವ ಸಿಬ್ಬಂದಿಗಳಿಗೆ ಶೇ.15ರಷ್ಟು ಹೆಚ್ಚುವರಿ ಮೊತ್ತವು ಅನುಮೋದನೆಯಾಗಿದ್ದು, ಸದರಿ ಸಿಬ್ಬಂದಿಗಳಿಗೆ 2021-22ನೇ ಸಾಲಿನ ವಾರ್ಷಿಕ ಸಂಭಾವನೆ ಹೆಚ್ಚಳ ನೀಡಲು ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.

ಸೋನಿ ಇಂಡಿಯಾ ಜೊತೆ ವಿಲೀನವಾಗಲಿದೆ ಜೀ ಎಂಟರ್ ಟೈನ್ ಮೆಂಟ್

ಇನ್ನೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯ, ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿರುವ ಅರ್ಹ ಸಿಬ್ಬಂದಿಗಳಿಗೆ 2021-22ನೇ ಸಾಲಿನ ಆರ್ ಓಪಿಯಲ್ಲಿ ಪ್ರಸ್ತುತ ರಾಜ್ಯಕ್ಕೆ ಸಂಬಂಧಿಸಂದೆತ ಕಾರ್ಯಕ್ರಮಾಧಿಕಾರಿಗಳಿಂದ ಹಾಗೂ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಗಳಿಂದ ಪಡೆದ ಮಾಹಿತಿಯನುಸಾರ 2021 ಮಾರ್ಚ್ 31ರ ಮಾಹೆಗೆ 3 ವರ್ಷ ಸೇವಾ ಅವಧಿಯನ್ನು ಪೂರೈಸಿದವರಿಗೆ ಶೇ.10 ಮತ್ತು 5 ವರ್ಷ ಪೂರೈಸಿದವರಿಗೆ ಶೇ.5 ( ಈಗಾಗಲೇ ಸದರಿಯವರಿಗೆ 3 ವರ್ಷ ಪೂರೈಸಿದಾಗ ಶೇ.10 ನಿಡಿದ್ದರಿಂದ, ಸದರಿ ಸಾಲಿನಲ್ಲಿ ಶೇ.5ರಷ್ಟು ನೀಡಲಾಗಿರುತ್ತದೆ ). ಅದರಂತೆ ಏಪ್ರಿಲ್ 2021ರಿಂದ ಅನ್ವಯಾವುಗುವಂತೆ ಎಕ್ಸ್ ಪೀರಿಯನ್ಸ್ ಬೋನಸ್ ಅನ್ನು ಸ್ಯಾಲರಿ ಅನೆಕ್ಸ್ ರಂತೆ ಹಂಚಿಕೆ ಮಾಡಬಹುದಾಗಿ ತಿಳಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಂಬಳಿಯೊಳಗೆ ಅಡಗಿಸಿಟ್ಟಿದ್ದ 13. 8 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

ಇದಷ್ಟೇ ಅಲ್ಲದೇ ಗುತ್ತಿಗೆ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಇಪಿಎಫ್ ಶೇ.13ರಷ್ಟು ಮೊತ್ತವನ್ನು ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಭರಿಸುವಂತೆ ಅನುಮೋದನೆಯನ್ನು ರಾಜ್ಯ ಸರ್ಕಾರ ನೀಡಿದೆ. ಈ ಮೂಲಕ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags