News18 ಕನ್ನಡ

400k Followers

UPSC: 247 ಹುದ್ದೆಗಳು ಖಾಲಿ, ಎಂಜಿನಿಯರಿಂಗ್ ಸೇವಾ ಪರೀಕ್ಷೆಗೆ ದಿನಾಂಕ ಪ್ರಕಟ; ಅರ್ಜಿ ಸಲ್ಲಿಸಲು ಹೀಗೆ ಮಾಡಿ

24 Sep 2021.08:24 AM

ನವದೆಹಲಿ(ಸೆ.24): ಕೇಂದ್ರ ಲೋಕಸೇವಾ ಆಯೋಗವು (The Union Public Service Commission-UPSC) ಸೆಪ್ಟೆಂಬರ್ 22, 2021ರಂದು ಎಂಜಿನಿಯರಿಂಗ್ ಸೇವಾ ಪರೀಕ್ಷೆ-2022(Engineering Service Examination -ESE)ರ ಅಧಿಸೂಚನೆಯನ್ನು ಪ್ರಕಟ ಮಾಡಿದೆ. ಅದರಂತೆ ಕೇಂದ್ರ ಲೋಕಾಸೇವಾ ಆಯೋಗ ನಡೆಸುವ ಎಂಜಿನಿಯರಿಂಗ್ ಸೇವಾ ಪರೀಕ್ಷೆ-2022(ESE)ರ ಪ್ರಿಲಿಮಿನರಿ/ಸ್ಟೇಜ್-1 ಪರೀಕ್ಷೆ 2022ರ ಫೆಬ್ರವರಿ 20ರಂದು(ಭಾನುವಾರ) ನಡೆಯಲಿದೆ. ಖಾಲಿ ಇರುವ ಹುದ್ದೆಗಳ ಸಂಖ್ಯೆ:

ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಭರ್ತಿ ಮಾಡಬೇಕಿರುವ ಖಾಲಿ ಹುದ್ದೆಗಳ ಸಂಖ್ಯೆ ಸರಿಸುಮಾರು 247 ಎಂದು ನಿರೀಕ್ಷಿಸಲಾಗಿದೆ.

ಈ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಈ ಕೆಳಗಿನ ವರ್ಗಗಳ ಅಡಿಯಲ್ಲಿ
ಹುದ್ದೆಗಳ ನೇಮಕಾತಿ ಮಾಡಲಾಗುತ್ತದೆ.

ವರ್ಗ I - ಸಿವಿಲ್ ಎಂಜಿನಿಯರಿಂಗ್ (Civil Engineering)

ವರ್ಗ II - ಯಾಂತ್ರಿಕ ಎಂಜಿನಿಯರಿಂಗ್ (Mechanical Engineering)

ವರ್ಗ III - ವಿದ್ಯುತ್ ಇಂಜಿನಿಯರಿಂಗ್ (Electrical Engineering)

ವರ್ಗ IV - ಎಲೆಕ್ಟ್ರಾನಿಕ್ಸ್ ಮತ್ತು ದೂರ ಸಂಪರ್ಕ ಎಂಜಿನಿಯರಿಂಗ್(Electronics & Telecommunication Engineering)

ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಭರ್ತಿ ಮಾಡಬೇಕಾಗಿರುವ 247 ಖಾಲಿ ಹುದ್ದೆಗಳ ಜೊತೆಗೆ ಇನ್ನೂ 8 ಹುದ್ದೆಗಳು ಖಾಲಿ ಇವೆ. ಬೆಂಚ್ ಮಾರ್ಕ್​ ವಿಕಲಾಂಗ ವ್ಯಕ್ತಿಗಳಿಗೆ(ಪಿಡಬ್ಲ್ಯೂಡಿ) 6 ಹುದ್ದೆಗಳು, ಹಾರ್ಡ್​ ಆಫ್ ಹಿಯರಿಂಗ್ ವ್ಯಕ್ತಿಗಳಿಗೆ 2 ಹುದ್ದೆಗಳಿವೆ.

:BEL Recruitment 2021: ತಿಂಗಳಿಗೆ 1.20 ಲಕ್ಷ ಸಂಬಳದ ಹುದ್ದೆಗಳಿಗೆ ಅರ್ಜಿ ಆಹ್ವಾನ; ಈ ವಿದ್ಯಾರ್ಹತೆ ಉಳ್ಳವರು ಅರ್ಜಿ ಹಾಕಿ

ಪ್ರಮುಖ ದಿನಾಂಕಗಳು:

ಎಂಜಿನಿಯರಿಂಗ್ ಸೇವಾ ಪರೀಕ್ಷೆ-2022ಕ್ಕೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಸೆಪ್ಟೆಂಬರ್ 22, 2021 ರಿಂದ ಅಕ್ಟೋಬರ್ 12, 2021ರವರೆಗೆ ಅರ್ಜಿ ಹಾಕಬಹುದು. ಅಕ್ಟೋಬರ್ 12 ಸಂಜೆ 6 ಗಂಟೆಯ ಬಳಿಕ ಅರ್ಜಿ ಸಲ್ಲಿಸುವ ಲಿಂಕ್​ನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಆನ್​​​ಲೈನ್​ ಅರ್ಜಿಗಳನ್ನು ಅಕ್ಟೋಬರ್ 20ರಿಂದ ಅ.26ವರೆಗೆ(ಸಂಜೆ 6 ಗಂಟೆಯೊಳಗೆ) ಹಿಂಪಡೆಯಬಹುದು. ಬಳಿಕ ಲಿಂಕ್​ನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಎಂಜಿನಿಯರಿಂಗ್ ಸೇವಾ ಪರೀಕ್ಷೆ-2022ರ ಪ್ರಿಲಿಮಿನರಿ ಪರೀಕ್ಷೆ ಫೆಬ್ರವರಿ 20, 2022(ಭಾನುವಾರ ನಡೆಯಲಿದೆ.)



ವಿದ್ಯಾರ್ಹತೆ:

ಪರೀಕ್ಷೆಗೆ ಪ್ರವೇಶ ಪಡೆಯಲು ಅಭ್ಯರ್ಥಿಯು ಈ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಗಳಿಂದ ಎಂಜಿನಿಯರಿಂಗ್​​ ಪದವಿ ಪಡೆದಿರಬೇಕು.

ಭಾರತೀಯ ನೌಕಾ ಶಸ್ತ್ರಾಸ್ತ್ರ ಸೇವೆ(ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್ ಹುದ್ದೆಗಳು) ಮತ್ತು ರೇಡಿಯೋ ನಿಯಂತ್ರಕ ಸೇವಾ ಗುಂಪು 'A' ಹುದ್ದೆಗೆ ಅಭ್ಯರ್ಥಿಯು ಮೇಲಿನ ಯಾವುದೇ ಅರ್ಹತೆ ಅಥವಾ ಕೆಳಗೆ ಉಲ್ಲೇಖಿಸಿರುವ ಅರ್ಹತೆಯನ್ನು ಹೊಂದಿರಬೇಕು.

ಭಾರತೀಯ ನೌಕಾ ಶಸ್ತ್ರಾಸ್ತ್ರ ಸೇವೆಗಾಗಿ (ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಹುದ್ದೆಗಳು) - ಎಂ.ಎಸ್ಸಿ ಪದವಿ ಅಥವಾ ವೈರ್‌ಲೆಸ್ ಕಮ್ಯುನಿಕೇಶನ್ ಎಲೆಕ್ಟ್ರಾನಿಕ್ಸ್, ರೇಡಿಯೋ ಭೌತಶಾಸ್ತ್ರ ಅಥವಾ ರೇಡಿಯೋ ಎಂಜಿನಿಯರಿಂಗ್​ನ್ನು ವಿಶೇಷ ವಿಷಯವನ್ನಾಗಿ ರಬೇಕು.

ಭಾರತೀಯ ರೇಡಿಯೋ ರೆಗ್ಯುಲೇಟರಿ ಸರ್ವೀಸ್ ಗ್ರೂಪ್ 'A' ಗೆ - ಎಂ.ಎಸ್ಸಿ ಪದವಿ ಅಥವಾ ವೈರ್‌ಲೆಸ್ ಕಮ್ಯುನಿಕೇಶನ್ ಎಲೆಕ್ಟ್ರಾನಿಕ್ಸ್, ರೇಡಿಯೋ ಭೌತಶಾಸ್ತ್ರ ಅಥವಾ ರೇಡಿಯೋ ಎಂಜಿನಿಯರಿಂಗ್‌ನೊಂದಿಗೆ ಒಂದು ವಿಷಯ ಅಥವಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಭೌತಶಾಸ್ತ್ರ ಮತ್ತು ರೇಡಿಯೋ ಸಂವಹನ ಅಥವಾ ಎಲೆಕ್ಟ್ರಾನಿಕ್ಸ್ ಅಥವಾ ದೂರಸಂಪರ್ಕವನ್ನು ವಿಶೇಷ ವಿಷಯವನ್ನಾಗಿ ರಬೇಕು.

:IISc Bangalore Recruitment: ಮಾಸಿಕ ವೇತನ 1,66,541 ರೂ; ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ

ಅರ್ಹತಾ ಷರತ್ತುಗಳು, ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಇತರ ವಿವರಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ನೇಮಕಾತಿ ಅಧಿಸೂಚನೆಯನ್ನು ನೋಡಬೇಕು.

https://www.upsc.gov.in/examination/active-exams
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags