Oneindia

1.1M Followers

ತವರು ಜಿಲ್ಲೆಗೆ ಶಿಕ್ಷಕರ ವರ್ಗಾವಣೆ: ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ

27 Sep 2021.2:17 PM

ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರನ್ನು ಅವರ ಸೇವಾವಧಿಯಲ್ಲಿ ಒಂದು ಬಾರಿ ಅವರ ತವರು ಜಿಲ್ಲೆಗೆ ನೇಮಿಸಲು ಮುಂದಾಗಿರುವ ಶಿಕ್ಷಣ ಇಲಾಖೆ, ಈ ಬಗ್ಗೆ ಅಭಿಪ್ರಾಯ ಕ್ರೋಢೀಕರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ.

ಕೋವಿಡ್ ಕಾರಣದಿಂದಾಗಿ ಕಳೆದ 18 ತಿಂಗಳಿನಿಂದ ಬಹುತೇಕ ಶಾಲೆಗಳು ಮುಚ್ಚಿದ್ದು, ಈ ಮಧ್ಯೆ ಎರಡು ವರ್ಷಗಳಿಂದ ವರ್ಗಾವಣೆ ಪ್ರಕ್ರಿಯೆಯೂ ನಡೆಯದೆ ಶಿಕ್ಷಕರು ಗೊಂದಲಕ್ಕೆ ಬಿದ್ದಿದ್ದಾರೆ.

ಈ ಮಧ್ಯೆ ಶಿಕ್ಷಣ ಇಲಾಖೆ ಹೊರಡಿಸಿರುವ ಈ ನೂತನ ಆದೇಶದಿಂದ ಶಿಕ್ಷಕರಲ್ಲಿ ಸ್ವಲ್ಪ ಮಟ್ಟಿನ ಆಶಾದಾಯಕ ಮೂಡಿದೆ.

ಪ್ರಾಥಮಿಕ ಶಾಲೆಗಳಲ್ಲಿ 35 ಲಕ್ಷ ಮಕ್ಕಳು: ಅವರ ಭವಿಷ್ಯವೇನು?

"ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಒಂದು ಬಾರಿ ಅವರು ಬಯಸುವ ಜಿಲ್ಲೆಗೆ ಹಂತಹಂತವಾಗಿ ವರ್ಗಾಯಿಸುವ ಬಗ್ಗೆ ಶಿಕ್ಷಕರ ಅಭಿಮತ ಕ್ರೋಢೀಕರಿಸಬೇಕು. ಈ ಬಗ್ಗೆ ಶೈಕ್ಷಣಿಕ ತಾಲ್ಲೂಕು ಮಟ್ಟದಲ್ಲಿ ಇರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಓ) ಶಿಕ್ಷಕರ ಅಭಿಪ್ರಾಯಗಳನ್ನು ಪಡೆದು ವರದಿ ನೀಡಬೇಕು'' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸಚಿವರಿಗೆ ಪತ್ರ ಬರೆದು ಮನವಿ ಮಾಡಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈಗಾಗಲೇ ಆಯ್ದ ಶಿಕ್ಷಕರು ಮತ್ತು ಶಿಕ್ಷಕರ ಪ್ರತಿನಿಧಿ ಸಂಘಟನೆಗಳ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಈ ಸಂಬಂಧ ಶೀಘ್ರದಲ್ಲಿಯೇ ವರದಿ ತಯಾರಿಸಿ ಇಲಾಖೆಗೆ ಸಲ್ಲಿಸುವ ಸಾಧ್ಯತೆ ಇದೆ.

ಪಶ್ಚಿಮ ಬಂಗಾಳ ಮಾದರಿ:

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಶಿಕ್ಷಕರ ಕುರಿತು ಭರವಸೆಯೊಂದನ್ನು ನೀಡಲಾಗಿತ್ತು. ಶಾಲಾ ಶಿಕ್ಷಕರನ್ನು ಜೀವಮಾನದಲ್ಲಿ ಒಂದು ಬಾರಿ ಅವರ ತವರು ಜಿಲ್ಲೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು. ಹೀಗೆ ಕೆಲವು ವರ್ಷಗಳ ಕಾಲವಾದರೂ ಶಿಕ್ಷಕರು ಸ್ಥಳೀಯವಾಗಿಯೇ ಕೆಲಸ ಮಾಡುವುದರಿಂಧ ವೈಯಕ್ತಿಕವಾಗಿ ಅವರ ಕುಟುಂಬದ ಬಗ್ಗೆಯೂ ಗಮನವಹಿಸಲು ಸಾಧ್ಯವಾಗುತ್ತದೆ ಎಂಬುದು ಇದರ ಉದ್ದೇಶ. ಇದೇ ಮಾದರಿಯನ್ನು ರಾಜ್ಯದಲ್ಲಿಯೂ ಸಹ ಜಾರಿ ಮಾಡಲು ಮುಂದಾಗಿದೆ.

ಮಾನದಂಡ ಏನು?:

ಶಿಕ್ಷಕರನ್ನು ಯಾವ ಮಾನದಂಡದ ಮೇಲೆ ವರ್ಗಾವಣೆಗೆ ಆಯ್ಕೆ ಮಾಡಬೇಕು ಎಂಬ ಜಿಜ್ಞಾಸೆ ಉಂಟಾಗಿದೆ. ಹೊರಗಿನ ಜಿಲ್ಲೆಗಳಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿದ್ದಾರೆ, ಇತರೆ ಯಾವ ಕಾರಣಗಳನ್ನು ಪರಿಶೀಲಿಸಬೇಕು ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ತವರು ಜಿಲ್ಲೆಯಿಂದ ಹೊರಗೆ 15 ವರ್ಷಗಳ ಕಾಲ ಸೇವೆ ಸಲ್ಲಿಸಿದವರನ್ನು ಮಾತ್ರ ಈ ನಿಯಮದಡಿ ತರಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಶಿಕ್ಷಕರ ಸಂಘಟನೆಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ನಿಯಮಾವಳಿಗಳ ಪ್ರಕಾರ 10 ವರ್ಷದ ಸೇವೆಯನ್ನು ಮಾತ್ರ ಪರಿಗಣಿಸಬೇಕು. ಯಾರು ಹೊರ ಜಿಲ್ಲೆಗಳಲ್ಲಿ 10 ವರ್ಷ ಸೇವೆ ಪೂರ್ಣಗೊಳಿಸಿರುತ್ತಾರೋ ಅಂತಹವರನ್ನು ಒಂದು ಬಾರಿ ಅವರ ತವರು ಜಿಲ್ಲೆಗೆ ನೇಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

"ಎಲ್ಲಾ ಶಿಕ್ಷಕರಿಗೂ ಒಂದೇ ಬಾರಿ ವರ್ಗಾವಣೆ ಮಾಡುವ ಅಗತ್ಯ ಇಲ್ಲ. ಹೊರ ಜಿಲ್ಲೆಗಳಲ್ಲಿ 10 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿ ವರ್ಗಾವಣೆಗೆ ಆಯ್ಕೆಯಾದ ಅರ್ಹ ಶಿಕ್ಷಕರ ಪಟ್ಟಿ ತಯಾರಿಸಿ. ಅದರಲ್ಲಿ ಆದ್ಯತೆ ಮೇರೆಗೆ ಹಂತಹಂತವಾಗಿ ವರ್ಗಾವಣೆ ಮಾಡಬಹುದು. ಆದರೆ, ಸರ್ಕಾರಗಳು ಬೇರೆ ಬೇರೆ ಕಾರಣಗಳನ್ನು ನೀಡಿ ವರ್ಗಾವಣೆ ಪ್ರಕ್ರಿಯೆಯನ್ನು ತಡೆಹಿಡಿಯುವುದು ಸರಿಯಲ್ಲ" ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಒತ್ತಾಯಿಸಿದ್ದಾರೆ.

"ಅನ್ಯ ಜಿಲ್ಲೆಯ ಶಿಕ್ಷಕರನ್ನು ವರ್ಗಾವಣೆ ಮಾಡಿದರೆ ಯಾವುದೇ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಕಾಡಬಹುದು ಎಂಬ ಅಭಿಪ್ರಾಯವನ್ನೂ ಒಪ್ಪುತ್ತೇವೆ. ಮೊದಲು ವರ್ಗಾವಣೆಗೆ ಅರ್ಹವಾದವರ ಪಟ್ಟಿ ತಯಾರಿಸಿ ಅವರಿಗೆ ವರ್ಗಾವಣೆ ನೀಡಿ. ಹೊಸದಾಗಿ ಶಿಕ್ಷಕರ ನೇಮಕ ಮಾಡಿಕೊಂಡು ಆ ಸ್ಥಾನ ತುಂಬಿದ ಬಳಿಕ ಅವರನ್ನು ಆ ಜಿಲ್ಲೆಯಿಂದ ಬಿಡುಗಡೆಗೊಳಿಸಿ ಎಂಬ ಮನವಿಯನ್ನೂ ಮಾಡಿದ್ದೇವೆ" ಎಂದು ಪಾಟೀಲ ವಿವರಿಸಿದರು.

ABD ಔಟ್ ಆದಾಗ ಅತ್ಯಂತ ನೊಂದ ಅಭಿಮಾನಿ ಇವನೇ | Oneindia Kannada

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags