ಕನ್ನಡ ಪ್ರಭ

1.2M Followers

ಶಾಲೆ-ಕಾಲೇಜು ಬಂದ್ ಸಾಧ್ಯವಿಲ್ಲ, ಹಸಿರು ಪಟ್ಟಿ ಧರಿಸಿ ರೈತರಿಗೆ ನೈತಿಕ ಬೆಂಬಲ ನೀಡುತ್ತೇವೆ: ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟ

26 Sep 2021.09:13 AM

ಬೆಂಗಳೂರು: ಒಂದು ವರ್ಷದ ಬಳಿಕ ಮಕ್ಕಳು ಶಾಲೆ ಮುಖ ನೋಡುತ್ತಿವೆ. ಹೀಗಾಗಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲಾ ಕಾಲೇಜುಗಳನ್ನು ಬಂದ್ ಮಾಡಲು ಸಾಧ್ಯವಿಲ್ಲ. ಹಸಿರು ಬಟ್ಟೆ ಅಥವಾ ಹಸಿರು ಪಟ್ಟಿಯನ್ನು ಧರಿಸಿ ಈ ಮೂಲಕ ಭಾರತ್ ಬಂದ್​​ಗೆ ನೈತಿಕ ಬೆಂಬಲ ಸೂಚಿಸಲಾಗುವುದು ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟ ಶನಿವಾರ ಹೇಳಿದೆ.

ಭಾರತ್ ಬಂದ್ ಕುರಿತು ಹೇಳಿಕೆ ನೀಡಿರುವ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಅವರು, ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಸೆ.27ರಂದು ಭಾರತ್ ಬಂದ್‌ಗೆ ಕರೆ ನೀಡಿವೆ.‌ ಈ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಸಂಘಟನೆಗಳು ಬಂದ್​​ಗೆ ನೈತಿಕ ಬೆಂಬಲವಷ್ಟೇ ನೀಡಲು ತೀರ್ಮಾನಿಸಿವೆ ಎಂದು ಹೇಳಿದ್ದಾರೆ.

ಆ ದಿನದಂದು ಶಾಲಾ-ಕಾಲೇಜುಗಳನ್ನ ಮುಚ್ಚುವುದಿಲ್ಲ.‌ ಕೋವಿಡ್‌ನಿಂದಾಗಿ ಈಗಷ್ಟೇ ಶಾಲಾ-ಕಾಲೇಜು ಆರಂಭವಾಗಿವೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆಗಳನ್ನ ಬಂದ್ ಮಾಡಲು ಆಗುವುದಿಲ್ಲ. ಹಸಿರು ಬಟ್ಟೆ ಅಥವಾ ಹಸಿರು ಪಟ್ಟಿಯನ್ನು ಧರಿಸಿ ಈ ಮೂಲಕ ಭಾರತ್ ಬಂದ್​​ಗೆ ನೈತಿಕ ಬೆಂಬಲ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.

ರೂಪ್ಸಾ ಬಣದ ಸದಸ್ಯರು ಕೂಡ ರೈತರಿಗೆ ನೈತಿಕ ಬೆಂಬಲ ನೀಡುತ್ತೇವೆಯೇ ವಿನಃ ಶಾಲೆಗಳನ್ನ ಬಂದ್ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ತರಗತಿ ನಡೆಯುತ್ತಿರುವುದೇ 4-5 ದಿನ. ಈ ಮಧ್ಯೆ ಬಂದ್ ಅಂದರೆ ವಿದ್ಯಾರ್ಥಿಗಳ ಓದಿಗೆ ಕಷ್ಟವಾಗಲಿದೆ ಎಂದು ಹಾಲನೂರು ಎಸ್ ಲೇಪಾಕ್ಷಿ ಹೇಳಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Prabha

#Hashtags