Kannada News Now

1.8M Followers

BIG NEWS : 'ಸಾರಿಗೆ ನೌಕರ'ರಿಗೆ ಭರ್ಜರಿ ಸಿಹಿಸುದ್ದಿ : 'ಗಳಿಕೆ ರಜೆ ನಗದೀಕರಣ'ಕ್ಕೆ ಅವಕಾಶ

28 Sep 2021.10:03 AM

ಬೆಂಗಳೂರು : ರಾಜ್ಯದ ಸಾರಿಗೆ ನೌಕರರಿಗೆ ( KSRTC Employees ) 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ಗಳಿಕೆ ರಜೆಯನ್ನು ಆಧ್ಯರ್ಪಿಸಿ, ನಗದೀಕರಣ ಪಡೆಯಲು ಅವಕಾಶ ನೀಡಲಾಗಿದೆ. ಈ ಮೂಲಕ ಸಾರಿಗೆ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ.

ನಿಮ್ಮ ಬಳಿ ಹರಿದ ನೋಟುಗಳಿವ್ಯಾ? ಚಿಂತಿಸ್ಬೇಡಿ, ಈ ರೀತಿ ಇಲ್ಲಿ ಬದಲಾಯಿಸಿ

ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ( KSRTC ) ಮುಖ್ಯ ಲೆಕ್ಕಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು ಕರ್ನಾಟಕ ಸರ್ಕಾರದಲ್ಲಿ ಹೊರಡಿಸಿರುವ ಆದೇಶದನ್ವಯ ನಿಗಮದ ಎಲ್ಲಾ ಅರ್ಹ ಅಧಿಕಾರಿ, ನೌಕರರಿಗೆ 2021-22ರ ಆರ್ಥಿಕ ವರ್ಷದ 15 ದಿವಸಗಳ ಗಳಿಕೆ ರಜೆ ಆಧ್ಯರ್ಪಿಸಿ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ವಿಸ್ತರಿಸಲು ಸಕ್ಷಮ ಪ್ರಾಧಿಕಾರಿಯವರಾದ ವ್ಯವಸ್ಥಾಪಕ ನಿರ್ದೇಶಕರು ಅನುಮೋದಿಸಿರುತ್ತಾರೆ.

BIG NEWS : ಜನರ ಜೀವಿತಾವಧಿಯನ್ನು ಕಡಿಮೆ ಮಾಡಿದೆಯಂತೆ ಕೊರೊನಾ ವೈರಸ್ : ಆಕ್ಸ್ ಫರ್ಡ್ ವಿವಿ ಅಧ್ಯಯನ

ಈ ಹಿನ್ನಲೆಯಲ್ಲಿ ನಿಗಮದ ಅರ್ಹ ಅಧಿಕಾರಿ, ನೌಕರರಿಗೆ 2021-22ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ವಿಸ್ತರಿಸಿ, ಪಾವತಿಯನ್ನು ಮುಂದಿನ ಆದೇಶದವರೆಗೆ ಕಾಯ್ದಿರಿಸಿ ಹೊಣೆಗಾರಿಕೆ ( Liability ) ಕಲ್ಪಿಸಿಕೊಳ್ಳುವುದು.

ರಾಜ್ಯದ SC/ST ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಲು ಅ.31 ಕೊನೆಯ ದಿನಾಂಕ

ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ರಜೆ ನಗದೀಕರಣ ಮಂಜೂರಾತಿ, ಶಿಫಾರಸ್ಸು ಆದೇಶಗಳೊಂದಿಗೆ ಸಂಬಂಧಿಸಿದ ಅಧಿಕಾರಿಗಳ ಹಿಂದಿನ ಒಂದು ವರ್ಷದ ಹಾಜರಾತಿ ವಿವರಗಳನ್ನು ಕಳುಹಿಸುವಂತೆ ಸೂಚಿಸಿದ್ದಾರೆ.

50 paise coin : ನಿಮ್ಮ ಬಳಿ ಹಳೆಯ 50 ಪೈಸೆ ನಾಣ್ಯ ಇದೆಯಾ? ಹಾಗದ್ರೆ 1 ಲಕ್ಷ ರೂ. ಪಡೆಯಬಹುದು ! ಹೇಗೆ ಗೊತ್ತೇ?



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags