Kannada News Now

1.8M Followers

Aadhaar Card Update : 'ಆಧಾರ್ ಕಾರ್ಡ್‌'ನಲ್ಲಿ 'ಮೊಬೈಲ್ ಸಂಖ್ಯೆ' ನವೀಕರಿಸುವುದು ಹೇಗೆ.? ಇಲ್ಲಿದೆ ಮಾಹಿತಿ

29 Sep 2021.12:36 PM

ಡಿಜಿಟಲ್‌ ಡೆಸ್ಕ್ :‌ ಇಂದಿನ ಕಾಲದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಆಧಾರ್ (Aadhar ) ಒಂದು ಪ್ರಮುಖ ದಾಖಲೆಯಾಗಿದೆ. ಆಧಾರ್ ಇಲ್ಲದೆ, ನಿಮ್ಮ ಹೆಚ್ಚಿನ ಕೆಲಸವನ್ನ ಮಾಡಲು ಸಾಧ್ಯವಿಲ್ಲ. ಈಗ ಪ್ರತಿ ಸಣ್ಣ ಮತ್ತು ದೊಡ್ಡ ಕೆಲಸಗಳಿಗೆ ಆಧಾರ್ ಕಾರ್ಡ್ ಅಗತ್ಯವಿದೆ.

ಹೇಗಾದರೂ, ನಿಮ್ಮ ಸಂಖ್ಯೆಯನ್ನ ಆಧಾರ್‌ನಲ್ಲಿ ನೋಂದಾಯಿಸದಿದ್ದರೆ, ನೀವು ಅನೇಕ ಅನಾನುಕೂಲತೆಗಳನ್ನ ಎದುರಿಸಬೇಕಾಗಬಹುದು. ಅದಕ್ಕೆ ಸಂಬಂಧಿಸಿದ ಎಲ್ಲಾ ಒಟಿಪಿಗಳನ್ನ(OTP) ಒಂದೇ ಸಂಖ್ಯೆಯಲ್ಲಿ ಸ್ವೀಕರಿಸಲಾಗಿದೆಯೆಂದ್ರೆ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನ ನವೀಕರಿಸುವುದು ಅವಶ್ಯಕ.

ಮೊಬೈಲ್ ಸಂಖ್ಯೆ ( Mobile Number ) ನವೀಕರಣವಿಲ್ಲದೆ, ಆಧಾರ್‌ನ ಹಲವು ಸೌಲಭ್ಯಗಳ ಲಾಭವನ್ನ ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಇನ್ನು ನಿಮ್ಮ ಆಧಾರ್‌ ಕಾರ್ಡ್ ಗೆ ( Aadhar Card ) ನೀಡಿದ ಸಂಖ್ಯೆ ಕ್ಲೋಸ್‌ ಆಗಿದ್ರೆ ಚಿಂತಿಸ್ಮೇಡಿ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನಲ್ಲಿ ಹೇಗೆ ಸುಲಭವಾಗಿ ನವೀಕರಿಸಬಹುದು ಅನ್ನೋದನ್ನ ಟ್ವೀಟ್ ಮಾಡುವ ಮೂಲಕ ಯುಐಡಿಎಐ ತಿಳಿಸಿದೆ. ಇನ್ನು ಈ ಮೊಬೈಲ್ ಸಂಖ್ಯೆಯನ್ನ ನವೀಕರಿಸಲು ಯಾವುದೇ ದಾಖಲೆಗಳ ಅಗತ್ಯವಿಲ್ಲ ಎಂದು ಅದು ಹೇಳಿದೆ.

>> ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು, ನೀವು ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಬೇಕು.

>> ನಿಮ್ಮ ಆಧಾರ್ ಕಾರ್ಡ್ʼನ್ನ ನಿಮ್ಮೊಂದಿಗೆ ಆಧಾರ್ ಕೇಂದ್ರಕ್ಕೆ ತೆಗೆದುಕೊಳ್ಳಬೇಕು. ಅಲ್ಲಿಗೆ ಹೋದ ನಂತರ, ನೀವು ಮೊಬೈಲ್ ಸಂಖ್ಯೆಯನ್ನ ಸೇರಿಸಿ ಮತ್ತು ನವೀಕರಿಸಿ ಆಯ್ಕೆಯನ್ನ ಆರಿಸಬೇಕಾಗುತ್ತದೆ. ಇದಕ್ಕಾಗಿ ನೀವು 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
>> ಇದರ ನಂತರ, ಕಾರ್ಯನಿರ್ವಾಹಕರಿಂದ ನಿಮಗೆ ರಶೀದಿ ನೀಡಲಾಗುತ್ತೆ. ಅಮೇಲೆ ನೀವು ವಿನಂತಿಯ ಸಂಖ್ಯೆಯನ್ನ ಪಡೆಯುತ್ತೀರಿ ಅಂದರೆ ಯುಆರ್‌ಎನ್(URN).
>> ಯುಆರ್‌ಎನ್‌ ಬಳಸಿ ನಿಮ್ಮ ನವೀಕರಣ ಸ್ಥಿತಿಯನ್ನ ಸಹ ನೀವು ಪರಿಶೀಲಿಸಬಹುದು.

* ಇನ್ನು ನೀವು ನಿಮ್ಮ ಹತ್ತಿರದ ಆಧಾರ್ ಕೇಂದ್ರದ ಮಾಹಿತಿಗಾಗಿ ನೀವು 1947 ಗೆ ಕರೆ ಮಾಡಬಹುದು. ಇನ್ನು ಸಂಖ್ಯೆ ನವೀಕರಣಕ್ಕಾಗಿ ನೀವು ಕಳುಹಿಸಿದ ವಿನಂತಿಯ ಸ್ಥಿತಿ ಏನು ಅನ್ನೋದನ್ನ ಸಹ ನೀವು ತಿಳಿಯಬಹುದು.

* ಇದಲ್ಲದೆ, ಈ ಲಿಂಕ್ https://resident.uidai.gov.in/ ಕ್ಲಿಕ್ ಮಾಡುವ ಮೂಲಕ ನೀವು ಸ್ಥಿತಿ ಮಾಹಿತಿಯನ್ನು ಪಡೆಯಬಹುದು.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags