Kannada News Now

1.8M Followers

BIGG NEWS: 'KPSC'ಯಿಂದ ಈ ಹುದ್ದೆಗಳ ಹೆಚ್ಚುವರಿ, ಅಂತಿಮ, ತಾತ್ಕಾಲಿಕ ಆಯ್ಕೆಪಟ್ಟಿ ರಿಲೀಸ್

14 Oct 2021.1:56 PM

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾಗಿದ್ದಂತ ವಿವಿಧ ಹುದ್ದೆಗಳ ನೇಮಕಾತಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ, ಹೆಚ್ಚುವರಿ ಆಯ್ಕೆ ಪಟ್ಟಿ ಹಾಗೂ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.

Karnataka Covid19 Case Update: ರಾಜ್ಯದಲ್ಲಿ ಮತ್ತಷ್ಟು ಇಳಿಕೆ ಕಂಡ ಕೊರೋನಾ : ಏರಿಕೆಯಾದ ಸಾವಿನ ಪ್ರಮಾಣ

ಈ ಕುರಿತಂತೆ ಕೆಪಿಎಸ್ಸಿಯ ಕಾರ್ಯದರ್ಶಿ ಜಿ.ಸತ್ಯವತಿಯವರು ಆಯೋಗದಿಂದ ಅಧಿಸೂಚಿಸಲಾದ ವಿವಿಧ ವೃಂದದ ಹುದ್ದೆಗಳ ನೇಮಕಾತಿಗಳ ಸಂಬಂಧ ಈ ಕೆಳಕಂಡ ತಾತ್ಕಾಲಿಕ ಆಯ್ಕೆ ಪಟ್ಟಿ, ಹೆಚ್ಚುವರಿ ಆಯ್ಕೆ ಪಟ್ಟಿ, ಅಂತಿಮ ಆಯ್ಕೆ ಪಟ್ಟಿ ಹಾಗೂ ಕಟ್ ಆಫ್ ಅಂಕಗಳನ್ನು ದಿನಾಂಕ 12-10-2021ರಂದು ಆಯೋಗದ ವೆಬ್ ಸೈಟ್ www.kpsc.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.

ಉದ್ಯೋಗಾಕಾಂಕ್ಷಿಗಳೇ ಗಮನಿಸಿ : KSRTCಯಿಂದ ಈ ಹುದ್ದೆಗಳಿಗೆ ಜಾಹೀರಾತು ನೀಡಿಲ್ಲ, ನಂಬಿ ಮೋಸ ಹೋಗಬೇಡಿ

  • ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಗಣತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್ - 55 ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.
  • ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿ ಡ್ರಾಫ್ಟ್ ಮನ್ ಮೆಕ್ಯಾನಿಕಲ್ ವೃತ್ತಿಯ ಹುದ್ದೆಗಳು - 09 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ.
  • ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಗ್ರಂಥಾಲಯ ಸಹಾಯಕರು - 29 ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
  • ಆಯುಷ್ ಇಲಾಖೆಯ ಸರ್ಕಾರಿ ಆಸ್ಪತ್ರೆಗಳಲ್ಲಿ, ಚಿಕಿತ್ಸಾಲಯಗಳಲ್ಲಿನ ವೈದ್ಯಾಧಿಕಾರಿ - 75 ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಈ ಮೇಲ್ಕಂಡ ತಾತ್ಕಾಲಿಕ ಆಯ್ಕೆ ಪಟ್ಟಿಗಳ ಕುರಿತಂತೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಪ್ರಕಟಿಸಿದ ದಿನಾಂಕದಿಂದ 7 ದಿನಗಳೊಳಗಾಗಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-01 ಇವರಿಗೆ ಸಂಬಂಧಿತ ಹುದ್ದೆ ಹೆಸರನ್ನು ಸ್ಪಷ್ಟವಾಗಿ ನಮೂದಿಸಿ, ಲಿಖಿತ ರೂಪದಲ್ಲಿ ಸಲ್ಲಿಸಲು ಸೂಚಿಸಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags