AIN Live News

265k Followers

ತನ್ನ ಗಂಡನನ್ನೇ ಕೊಂದು ಸೂಟ್‍ಕೇಸ್‍ನಲ್ಲಿರಿಸಿ ಸಾಗಿಸಿದಳು ಪತ್ನಿ!: ಸಿಕ್ಕಿಬಿದ್ದಿದ್ದು ಹೇಗೆ

16 Oct 2021.06:21 AM

ಬ್ರೆಸಿಲಿಯಾ : ಗಂಡನನ್ನೇ ಕೊಂದು ಮೃತ ದೇಹವನ್ನು ಸೂಟ್‍ಕೇಸ್‍ನಲ್ಲಿರಿಸಿ ಸಾಗಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ. ಮಹಿಳೆಯು ತನ್ನ ಪತಿಯ ಮೇಲಿನ ಸಿಟ್ಟು ತೀರಿಸಲು ಕೊಲೆ ಮಾಡಿದ್ದಾಳೆ.

ನಂತರ ಸೂಟ್‍ಕೇಸ್‍ನಲ್ಲಿ ಪತಿಯ ತುಂಡಾದ ದೇಹವನ್ನು ಸಾಗಿಸುತ್ತಿರುವ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ.

ಗಂಡ ಬೇರೊಬ್ಬ ಯುವತಿ ಜೊತೆಗೆ ಅಕ್ರಮ ಹೊಂದಿದ್ದಾನೆ ಎಂಬ ಕಾರಣಕ್ಕೆ ನೊಂದ ಎಲೀಟ್ ತನ್ನ ಪತಿಯನ್ನೇ ಮುಗಿಸಲು ಪ್ಲಾನ್ ಮಾಡಿಕೊಂಡಿದ್ದಾಳೆ. ಒಂದು ದಿನ ರೂಮಿನಲ್ಲಿದ್ದ ಪಿಸ್ತೂಲ್ ತೆಗೆದುಕೊಂಡು ಗಂಡನಿಗೆ ಶೂಟ್ ಮಾಡುತ್ತಾಳೆ. ಸತ್ತ ಗಂಡನ ಶವನನ್ನು ಮನೆಯಿಂದ ಹೊರ ಹಾಕಲು ತುಂಡು ತುಂಡಾಗಿ ಕತ್ತರಿಸುತ್ತಾಳೆ.

ನಂತರ 3 ಸೂಟ್‍ಕೇಸ್‍ನಲ್ಲಿ ತುಂಬಿಸಿ ಬೇರೆ ಕಡೆಗೆ ಸಾಗಿಸುತ್ತಿರುತ್ತಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಅನುಮಾನಗೊಂಡು ಪೊಲೀಸರು ವಿಚಾರಿಸಿದಾಗ ಸೂಟ್‍ಕೇಸ್‍ನಲ್ಲಿ ಶವ ಇರುವುದು ಪತ್ತೆಯಾಗಿದೆ.

Share

Continue Reading

Disclaimer

Disclaimer

This story is auto-aggregated by a computer program and has not been created or edited by Dailyhunt Publisher: AIN Live News

#Hashtags