News18 ಕನ್ನಡ

400k Followers

Indian Navy Recruitment 2021: ತಿಂಗಳಿಗೆ ₹69,100 ಸಂಬಳ, 10ನೇ ತರಗತಿ ಪಾಸಾದವರಿಗೆ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ

28 Oct 2021.09:06 AM

Indian Navy Recruitment 2021: ಭಾರತೀಯ ನೌಕಾಪಡೆ(Indian Navy) ಖಾಲಿ ಇರುವ ಅನೇಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಉದ್ಯೋಗ(Central Government Jobs) ಅರಸುತ್ತಿರುವವರು ಹಾಗೂ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡಲು ಬಯಸುತ್ತಿರುವವರು ಕೂಡಲೇ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಭಾರತೀಯ ನೌಕಾಪಡೆಯು 300 ನಾವಿಕ(Sailors)​ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, 10ನೇ ತರಗತಿ(SSLC Pass) ಪಾಸಾದವರಿಗೆ ಇದು ಸುವರ್ಣಾವಕಾಶವಾಗಿದೆ.

ಅರ್ಹ ಮತ್ತು ಆಸಕ್ತ ಆಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇದೇ ಅಕ್ಟೋಬರ್ 29ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ನವೆಂಬರ್ 2ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕೆಲಸ ಅರಸುತ್ತಿರುವ ಉದ್ಯೋಗಾಂಕ್ಷಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್​ಸೈಟ್ www.indiannavy.nic.inಗೆ ಭೇಟಿ ನೀಡಿ ನೇರವಾಗಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಭಾರತೀಯ ನೌಕಾಪಡೆ
ಹುದ್ದೆಯ ಹೆಸರು ನಾವಿಕ
ಒಟ್ಟು ಹುದ್ದೆಗಳು 300
ವಿದ್ಯಾರ್ಹತೆ 10ನೇ ತರಗತಿ ಉತ್ತೀರ್ಣ
ಕೆಲಸದ ಸ್ಥಳ ಭಾರತದ ಯಾವುದೇ ಸ್ಥಳ
ಸಂಬಳ ಮಾಸಿಕ ₹ 14,600-69,100
ಅರ್ಜಿ ಸಲ್ಲಿಸುವ ಬಗೆ ಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ 29/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 02/11/2021

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ: 29/10/2021


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:02/11/2021

ಖಾಲಿ ಇರುವ ನಾವಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಕಡ್ಡಾಯವಾಗಿ 10ನೇ ತರಗತಿ/ಮೆಟ್ರಿಕ್ಯುಲೇಷನ್ ಪಾಸಾಗಿರಬೇಕು.

ವಯೋಮಿತಿ:

ಅಭ್ಯರ್ಥಿಗಳು ಏಪ್ರಿಲ್​ 1, 2022 ರಿಂದ ಮಾರ್ಚ್​ 31, 2005ರೊಳಗೆ ಜನಿಸಿರಬೇಕು.

:Indian Navy Recruitment 2021: ನೌಕಾಪಡೆಯಲ್ಲಿ 300 ಹುದ್ದೆಗಳು ಖಾಲಿ, 10ನೇ ತರಗತಿ ಪಾಸಾಗಿದ್ದರೆ ಸಾಕು, ತಿಂಗಳ ಸಂಬಳ ₹ 69,100

ಸಂಬಳ:

ಪ್ರಾಥಮಿಕ ತರಬೇತಿ ಅವಧಿಯಲ್ಲಿ ಸ್ಟೇಫಂಡ್​ ಆಗಿ ತಿಂಗಳಿಗೆ 14,600 ರೂ. ನೀಡಲಾಗುತ್ತದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ, ಡಿಫೆನ್ಸ್​ ಪೇ ಮ್ಯಾಟ್ರಿಕ್ಸ್​ನ 3ನೇ ಲೆವೆಲ್​ಗೆ ಆಯ್ಕೆ ಮಾಡಲಾಗುತ್ತದೆ. ಆಗ ಅವರ ಸಂಬಳ ₹ 21,700-69,100 ರೂ.ವರೆಗೆ ಇರುತ್ತದೆ. ಇದರೊಂದಿಗೆ ₹5,200 DA ಅನ್ನು ಪ್ರತೀ ತಿಂಗಳು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ

  • ದೈಹಿಕ ಸಾಮರ್ಥ್ಯದ ಪರೀಕ್ಷೆ

  • ಲಿಖಿತ ಪರೀಕ್ಷೆ

  • ಸಂದರ್ಶನ


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags