News18 ಕನ್ನಡ

398k Followers

ದೀಪಾವಳಿ ಉಡುಗೊರೆ : EPFO ಮೇಲಿನ ಬಡ್ಡಿದರವನ್ನು 8.5% ಕ್ಕೆ ಕೇಂದ್ರ ಅನುಮೋದನೆ; 6 ಕೋಟಿ ಜನರಿಗೆ ಲಾಭ

29 Oct 2021.5:51 PM

2020-21ನೇ ಸಾಲಿಗನ ಭವಿಷ್ಯ ನಿಧಿ ಠೇವಣಿಗಳ ಮೇಲೆ 8.5% ಬಡ್ಡಿದರವನ್ನು ಹಣಕಾಸು ಸಚಿವಾಲಯ ಅನುಮೋದಿಸಿದೆ. ಈ ಅನುಮೋದನೆಯಿಂದ ದೀಪಾವಳಿಗೂ ಮುಂಚಿತವಾಗಿ ಉದ್ಯೋಗಿ ಭವಿಷ್ಯ ನಿಧಿ (Provident Fund- EPFO) ಸುಮಾರು 6 ಕೋಟಿಗೂ ಹೆಚ್ಚಿನ ಫಲಾನುಭವಿಗಳಿಗೆ ಸಂತೋಷವುಂಟಾಗುವುದು ಖಚಿತವಾಗಿದೆ. ನಿವೃತ್ತಿ ಸಂಸ್ಥೆಯು ಶೀಘ್ರದಲ್ಲೇ ಆ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಆರಂಭಿಸುತ್ತದೆ.

EPFO ನ ಟ್ರಸ್ಟಿಗಳ ಕೇಂದ್ರ ಮಂಡಳಿಯು 2020-21ನೇ ಹಣಕಾಸು ವರ್ಷದಲ್ಲಿ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಬದಲಾಯಿಸದೆಯೇ 8.5% ಕ್ಕೆ ಇರಿಸಿದೆ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಸದಸ್ಯರಿಂದ ಹೆಚ್ಚಿನ ಹಿಂಪಡೆಯುವಿಕೆ (ವಿದ್‌ಡ್ರಾಲ್) ಮತ್ತು ಕಡಿಮೆ ಕೊಡುಗೆಯ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಬಡ್ಡಿದರ ಚಂದಾದಾರರ ಖಾತೆಗೆ ಜಮಾ

2020-21ರ ಹಣಕಾಸು ವರ್ಷದಲ್ಲಿ ಸದಸ್ಯರ ಖಾತೆಗಳಲ್ಲಿ ಇಪಿಎಫ್ ಸಂಗ್ರಹಣೆಯಲ್ಲಿ 8.50% ವಾರ್ಷಿಕ ಬಡ್ಡಿಯನ್ನು ಜಮೆ ಮಾಡಲು ಕೇಂದ್ರೀಯ ಮಂಡಳಿ ಶಿಫಾರಸು ಮಾಡಿದೆ. ಬಡ್ಡಿದರವನ್ನು ಸರ್ಕಾರಿ ಗೆಜೆಟ್‌ನಲ್ಲಿ ಅಧಿಕೃತವಾಗಿ ತಿಳಿಸಲಾಗುವುದು, ನಂತರ ಇಪಿಎಫ್‌ಒ ಬಡ್ಡಿದರವನ್ನು ಚಂದಾದಾರರ ಖಾತೆಗಳಿಗೆ ಜಮಾ ಮಾಡುತ್ತದೆ" ಎಂದು ಮಂಡಳಿಯು ಮಾರ್ಚ್‌ನಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.

ಹಣಕಾಸು ಸಚಿವಾಲಯದಿಂದ ಅನುಮೋದನೆ

ಪ್ರಸ್ತಾವಿತ ಬಡ್ಡಿದರಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವಾಲಯವು ಹಣಕಾಸು ಸಚಿವಾಲಯದಿಂದ ಅನುಮೋದನೆ ಪಡೆಯಬೇಕು. ಈ ತಿಂಗಳ ಆರಂಭದಲ್ಲಿಯೇ ಕಾರ್ಮಿಕ ಸಚಿವಾಲಯದ ಉನ್ನತ ಅಧಿಕಾರಿಗಳು ಹಣಕಾಸು ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿದ್ದು ಅನುಮೋದನೆಯನ್ನು ಅಂಗೀಕರಿಸುವಂತೆ ವಿನಂತಿಸಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.

ಇದನ್ನು : ದೀಪಾವಳಿ ಹಬ್ಬದ ಸಮಯದಲ್ಲಿ ಕಾರು, ಮೊಬೈಲ್ ಖರೀದಿಸುವವರು ಓದಲೇಬೇಕಾದ ಸುದ್ದಿ ಇಲ್ಲಿದೆ!

ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಉಂಟಾಗಿರುವ ಭಾರೀ ಆರ್ಥಿಕ ಕುಸಿತದ ನಡುವೆಯೂ 2020-21 ರ ಬಡ್ಡಿದರವನ್ನು ಸರಕಾರ ಉಳಿಸಿಕೊಂಡಿರುವುದಕ್ಕೆ ಜನರು ಪ್ರಶಂಸಿಸಬೇಕೆಂದು EPFO ಮಂಡಳಿಯ ಸದಸ್ಯ ಹಾಗೂ ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ವಿರ್ಜೇಶ್ ಉಪಾಧ್ಯಾಯ ಈ ಹಿಂದೆ ಮನಿ ಕಂಟ್ರೋಲ್‌ಗೆ ತಿಳಿಸಿದ್ದರು.

ಇದನ್ನು : ದೀಪಾವಳಿಗೆ ಮತ್ತೆ ಏರಿಕೆ ಬಿಸಿ; 1000 ರೂ ಗಡಿ ದಾಟಲಿರುವ ಗ್ಯಾಸ್​​ ಸಿಲಿಂಡರ್

ಇಪಿಎಫ್ ಮೇಲೆ ತೆರಿಗೆಯು ಹೇಗೆ ಕಾರ್ಯನಿರ್ವಹಿಸುತ್ತದೆ

2021 ರ ಕೇಂದ್ರ ಬಜೆಟ್‌ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಾರ್ಷಿಕ 2.5 ಲಕ್ಷಕ್ಕಿಂತ ಹೆಚ್ಚಿನ ಭವಿಷ್ಯ ನಿಧಿ ಉದ್ಯೋಗಿ ಕೊಡುಗೆಗಳ ಮೇಲಿನ ಬಡ್ಡಿಗೆ ಏಪ್ರಿಲ್ 1 ರಿಂದ ತೆರಿಗೆ ವಿಧಿಸಲಾಗುವುದು ಎಂದು ಘೋಷಿಸಿದರು. 2.5 ಲಕ್ಷದವರೆಗೆ ಡಿಪಾಸಿಟ್ ಮಿತಿಯಂತೆ ಇರಿಸಲಾಗಿರುವ ಮೊತ್ತಕ್ಕೆ ತೆರಿಗೆ ವಿನಾಯಿತಿ ಇದೆ ಎಂದು ಸಚಿವರು ತಿಳಿಸಿದ್ದಾರೆ. ಹೆಚ್ಚಿನ ಆದಾಯ ಹೊಂದಿರುವ ಉದ್ಯೋಗಿಗಳು ಗಳಿಸುವ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನು ನ್ಯಾಯೋಚಿತಗೊಳಿಸುವ ಸಲುವಾಗಿ, ವಿವಿಧ ಭವಿಷ್ಯ ನಿಧಿಗಳಿಗೆ ಉದ್ಯೋಗಿ ಕೊಡುಗೆಯ ಮೇಲೆ ಗಳಿಸಿದ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನು ವಾರ್ಷಿಕ 2.5 ಲಕ್ಷಕ್ಕೆ ನಿರ್ಬಂಧಿಸಲು ಪ್ರಸ್ತಾಪಿಸಲಾಗಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.

ಪ್ರಸ್ತುತ EPFO 6 ಕೋಟಿ ಸಕ್ರಿಯ ಸದಸ್ಯರನ್ನು ಒಳಗೊಂಡಿದೆ. ನಿವೃತ್ತಿ ಸಂಸ್ಥೆಯು ತನ್ನ ವಾರ್ಷಿಕ ಶೇಕಡಾವಾರು ಮೊತ್ತವನ್ನು ಈಕ್ವಿಟಿಯಲ್ಲಿ ಹಾಗೂ ಉಳಿದ ಮೊತ್ತವನ್ನು ಸಾಲ ಹೂಡಿಕೆಗಳಲ್ಲಿ ಹೂಡಿಕೆ ಮಾಡುತ್ತದೆ. ಹಣಕಾಸು ವರ್ಷದ ಮೊದಲ ಐದು ತಿಂಗಳ ನಿವ್ವಳ ವೇತನದಾರರ ಬೆಳವಣಿಗೆಯ ಪ್ರವೃತ್ತಿಯನ್ನು ಪ್ರತಿಬಿಂಬಿಸುವಂತೆ ಆಗಸ್ಟ್ 2021 ರಲ್ಲಿ ಇದು 14.81 ಲಕ್ಷ ನಿವ್ವಳ ಚಂದಾದಾರನ್ನು ಸೇರಿಸಿದೆ.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags