Kannada News Now

1.8M Followers

BIG BREAKING NEWS: ರಾಜ್ಯದ 'ಸಾರಿಗೆ ನೌಕರ'ರಿಗೆ ಭರ್ಜರಿ ಸಿಹಿಸುದ್ದಿ: ತುಟ್ಟಿಭತ್ಯೆ(DA) ಶೇ.24.50ಕ್ಕೆ ಹೆಚ್ಚಿಸಿ 'ಸರ್ಕಾರ ಆದೇಶ'

30 Oct 2021.12:38 PM

ವರದಿ: ವಸಂತ ಲೀಲಾ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಇತ್ತೀಚೆಗೆ ರಾಜ್ಯ ಸರ್ಕಾರ ತುಟ್ಟಿಭತ್ಯೆ ಶೇ.21.50ರಿಂದ ಶೇ.24.50ಕ್ಕೆ ಹೆಚ್ಚಿಸಿ ಆದೇಶಿಸಿತ್ತು. ಇಂತಹ ತುಟ್ಟಿಭತ್ಯೆಯನ್ನು ( DA Hike ) ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೂ ಅನ್ವಯಿಸಿ, ಕೆ ಎಸ್ ಆರ್ ಟಿ ಸಿ ( KSRTC ) ಆದೇಶಿಸಿದೆ.

ಈ ಮೂಲಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.

ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು ಸುತ್ತೋಲೆ ಹೊರಡಿಸಿದ್ದು, ದಿನಾಂಕ 27-10-2021ರಂದು ರಾಜ್ಯ ಸರ್ಕಾರವು ದಿನಾಂಕ 01-07-2021ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆ ದರವನ್ನು ಶೇ.21.50ರಿಂದ ಶೇ.24.50ಕ್ಕೆ ಹೆಚ್ಚಿಸಿ ಆದೇಶಿಸಿರುತ್ತದೆ.

ಕೆ ಎಸ್ ಆರ್ ಟಿ ಸಿಯ ವ್ಯವಸ್ಥಾಪಕ ನಿರ್ದೇಶಕರು, ರಾಜ್ಯದ ಸಾರಿಗೆ ನಿಗಮದಗಳಲ್ಲಿ ಪರಿಷ್ಕೃತ ತುಟ್ಟಿಭತ್ಯೆ ದರವನ್ನು ಅನುಷ್ಠಾನಗೊಳಿಸಿ, ಪಾವತಿಸಲು ಆದೇಶಿಸಿರುವ ಪ್ರಯುಕ್ತ, ಈ ಕೆಳಕಂಡಂತೆ ಕ್ರಮ ಜರುಗಿಸುವಂತೆ ತಿಳಿಸಿದ್ದಾರೆ.

ನಾಲ್ಕೂ ಸಾರಿಗೆ ನಿಗಮಗಳಲ್ಲಿ ಅಕ್ಟೋಬರ್ 2021ರ ಮಾಹೆಯ ವೇತನದಲ್ಲಿ ಮತ್ತು ಮುಂದಕ್ಕೆ ತುಟ್ಟಿಭತ್ಯೆ ದರವನ್ನು ಶೇ.21.50ರಿಂದ ಶೇ.24.50ಕ್ಕೆ ಹೆಚ್ಚಿಸಿ ಅನುಷ್ಠಾನಗೊಳಿಸಿ ಪಾವತಿಸುವುದು.

ಜುಲೈ 2021ರಿಂದ ಸೆಪ್ಚೆಂಬರ್ 2021ರವರೆಗಿನ 3 ತಿಂಗಳ ತುಟ್ಟಿಭತ್ಯೆ ಹಿಂಬಾಕಿಯ ಒಂದೊಂದು ಕಂತನ್ನು ನವೆಂಬರ್ 2021ರಿಂದ ಜನವರಿ 2022ರ ಮಾಹೆಯ ವೇತನದಲ್ಲಿ ಸೇರಿಸಿ ಪಾವತಿಸುವುದು.

ಜುಲೈ 2021ರಿಂದ ಸೆಪ್ಟೆಂಬರ್ 2021ರ ಅವಧಿಯಲ್ಲಿ ಸೇವಾವಿಮುಕ್ತಿ ಹೊಂದಿದವರಿಗೆ ಲಭ್ಯವಿರುವ ತುಟ್ಟಿಭತ್ಯೆ ಹಿಂಬಾಕಿ ಮೊತ್ತವನ್ನು ( ಸಂಸ್ಥೆಗೆ ಬರಬೇಕಾದ ಬಾಕಿ ಮೊತ್ತ ಇದ್ದಲ್ಲಿ ಕಡಿತ ಮಾಡಿಕೊಂಡು ) ಧನಾದೇಶಗಳ ಮುಖಾಂತರ ದಿನಾಂಕ 25-11-2021ರಂದು ಪಾವತಿಸುವುದು.

ಅಕ್ಟೋಬರ್ 2021 ರಿಂದ ಡಿಸೆಂಬರ್ 2021ರವರೆಗಿನ ಮಾಹೆಗಳಲ್ಲಿ ಸೇವಾವಿಮುಕ್ತಿ ಹೊಂದುವವರಿಗೆ ಬಾಕಿ ಇರುವ ಪೂರ್ಣ ತುಟ್ಟಿಭತ್ಯೆ ಹಿಂಬಾಕಿ ಮೊತ್ತವನ್ನು ನಿವೃತ್ತಿ ಮಾಹೆಯ ವೇತನದಲ್ಲಿ ಸೇರಿಸಿ ಪಾವತಿಸಬಹುದಾಗಿ ಎಂದು ತಿಳಿಸಿದ್ದಾರೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags