Kannada News Now

1.8M Followers

Karnataka Covid19 Update: ರಾಜ್ಯದ ಜನರಿಗೆ ನೆಮ್ಮದಿಯ ಸುದ್ದಿ: ಇಂದು 188 ಜನರಿಗೆ ಕೊರೋನಾ, ಸೋಂಕಿನಿಂದ ಇಬ್ಬರು ಸಾವು

01 Nov 2021.6:50 PM

ಬೆಂಗಳೂರು: ರಾಜ್ಯದ ಜನರಿಗೆ ನೆಮ್ಮದಿಯ ಸುದ್ದಿ ಎನ್ನುವಂತೆ ಇಂದು ಕೊರೋನಾ ಸೋಂಕು ( Corona Virus ) ಹಾಗೂ ಸಾವಿನ ಸಂಖ್ಯೆಯಲ್ಲೆ ದಾಖಲೆಯ ಇಳಿಕೆ ಕಂಡಿದೆ. ರಾಜ್ಯಾಧ್ಯಂತ 188 ಜನರಿಗೆ ಕೊರೋನಾ ಸೋಂಕು ತಗುಲಿದ್ದರೇ, ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬಾಗಲಕೋಟೆ, ಬೀದರ್, ಚಾಮರಾಜನಗರ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ರಾಮನಗರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ಪತ್ತೆಯಾಗಿವೆ ಎಂದು ತಿಳಿಸಿದೆ.

ಬೆಂಗಳೂರು ನಗರ 95, ದಕ್ಷಿಣ ಕನ್ನಡ 12, ಹಾಸನ 11, ಕೊಡಗು 10, ಮೈಸೂರು 16 ಸೇರಿದಂತೆ ರಾಜ್ಯಾಧ್ಯಂತ 24 ಗಂಟೆಯಲ್ಲಿ 188 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 29,88,521ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 318 ಸೇರಿದಂತೆ ಇದುವರೆಗೆ 29,41,896 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಇದೀಗ 8,512 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.

ಇನ್ನೂ ಕೊರೋನಾ ಸಾವಿನ ಸಂಖ್ಯೆಯಲ್ಲಿ ದಾಖಲೆಯ ಇಳಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ ಕೊರೋನಾ ಸೋಂಕಿತರಾದಂತ ಮೈಸೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹೀಗಾಗಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 38,084ಕ್ಕೆ ಏರಿಕೆಯಾಗಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags