Kannada News Now

1.8M Followers

BIG NEWS: ರಾಜ್ಯದಲ್ಲಿ 1-5ನೇ ತರಗತಿ ಆರಂಭಕ್ಕೆ ಮುಹೂರ್ತ ಫಿಕ್ಸ್ : ಮಂಗಳವಾರ ಫೈನಲ್ ಆಗಲಿದೆ ಶಾಲೆ ಓಪನ್ ನಿರ್ಧಾರ | 1 to 5th School Reopen

16 Oct 2021.3:36 PM

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಕೊರೋನಾ ಆತಂಕದ ನಡುವೆಯೂ 6 ರಿಂದ 12ನೇ ತರಗತಿಗಳ ಶಾಲಾ - ಕಾಲೇಜುಗಳು ಆರಂಭಗೊಂಡಿವೆ. ಇನ್ನೂ ಬಾಕಿ ಇರುವಂತ 1 ರಿಂದ 5ನೇ ತರಗತಿ ಶಾಲೆಗಳ ( 1 to 5th School Re Open ) ಆರಂಭಕ್ಕೂ ಮುಹೂರ್ತ ಫಿಕ್ ಆಗಿದೆ.

ಮಂಗಳವಾರ ಸಿಎ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಆ ಸಭೆಯ ಬಳಿಕ ನಿರ್ಧಾರ ಪ್ರಕಟಗೊಳ್ಳಲಿದೆ.

ಪಡಿತರದಾರರಿಗೆ ಭರ್ಜರಿ ಗುಡ್ ನ್ಯೂಸ್ : ರಾಜ್ಯದಲ್ಲಿ ನ.26ರಿಂದ ಮನೆ ಬಾಗಿಲಿಗೆ ತಲುಪಲಿದೆ 'ಪಡಿತರ ಧಾನ್ಯ'

ಒಂದರಿಂದ 5ನೇ ತರಗತಿ ಶಾಲೆಗಳ ಪುನರಾರಂಭ ಹಾಗೂ ಕೋವಿಡ್ 19 ಮಾರ್ಗಸೂಚಿಗಳನ್ನು ಇನ್ನಷ್ಟು ಸರಳೀಕರಣಗೊಳಿಸುವ ಸಂಬಂಧ, ದಿನಾಂಕ 19-10-2021ರ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಯಲಿದೆ.

ಶಿವಮೊಗ್ಗ : ಶಿಕಾರಿಪುರದ 'ಸರ್ಕಾರಿ ಕೈಗಾರಿಕಾ ತರಬೇತಿ'ಗಾಗಿ ಅರ್ಜಿ ಆಹ್ವಾನ

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುವಂತ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಾರಿಗೆ ಸಚಿವ ಶ್ರೀರಾಮುಲು, ಇಲಾಖೆಯ ಅಧಿಕಾರಿಗಳು ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಭಾಗಿಯಾಗಲಿದ್ದಾರೆ. ಇಂತಹ ಸಭೆಯಲ್ಲಿ 1 ರಿಂದ 5ನೇ ತರಗತಿ ಶಾಲೆಗಳ ಆರಂಭ ಕುರಿತಂತೆ ಮಹತ್ವದ ನಿರ್ಧಾರ ಹೊರ ಬೀಳಲಿದೆ.

ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ : ಜ.26ರಿಂದ 'ನಿಮ್ಮ ಮನೆ ಬಾಗಿಲಿಗೆ' ತಲುಪಲಿವೆ ಸರ್ಕಾರದ ಯೋಜನೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags