Kannada News Now

1.8M Followers

ಮುಂಬಡ್ತಿ ನಿರೀಕ್ಷೆಯ 'ಪ್ರಾಥಮಿಕ ಶಾಲಾ ಶಿಕ್ಷಕ'ರಿಗೆ ಭರ್ಜರಿ ಸಿಹಿಸುದ್ದಿ : ಶೀಘ್ರವೇ '6 ರಿಂದ 8ನೇ ತರಗತಿಗೆ ಮುಂಬಡ್ತಿ'

22 Oct 2021.12:03 PM

ಬೆಂಗಳೂರು: ರಾಜ್ಯದಲ್ಲಿ 6 ರಿಂದ 8ನೇ ತರಗತಿ ಮಕ್ಕಳ ಬೋಧನೆಗಾಗಿ ಶಿಕ್ಷಕರ ಕೊರತೆ ಇರೋದು ನಿಜ. ಈ ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಂಬಡ್ತಿ ನೀಡುವ ಮೂಲಕ, ಯಾವುದೇ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಈ ಮೂಲಕ ಮುಂಬಡ್ತಿಯ ನಿರೀಕ್ಷೆಯಲ್ಲಿದ್ದಂತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ.

ರಾಜ್ಯದಲ್ಲಿ ಅಕ್ಟೋಬರ್ 25ರ ಸೋಮವಾರದಿಂದ 1 ರಿಂದ 5ನೇ ತರಗತಿಗಳ ಶಾಲೆಗಳು ( 1 to 5th School Reopen ) ಪುನರಾರಂಭಗೊಳ್ಳುತ್ತಿವೆ. ಅಕ್ಟೋಬರ್ 30ರವರೆಗೆ ಅರ್ಧ ಪ್ರಮಾಣದಲ್ಲಿ ಶಾಲಾ ತರಗತಿ ಓಪನ್ ನಿಂದ ಬಿಸಿಯೂಟ ( Bisiyuta ) ನೀಡುತ್ತಿಲ್ಲ ಎಂಬುದಾಗಿ ಶಿಕ್ಷಣ ಇಲಾಖೆ ನಿನ್ನೆ ಮಾರ್ಗಸೂಚಿಯಲ್ಲಿ ತಿಳಿಸಿತ್ತು. ಆದ್ರೇ ಸೋಮವಾರದಿಂದ ಎಲ್ಲಾ ಮಕ್ಕಳಿಗೂ ಬಿಸಿಯೂಟ ವ್ಯವಸ್ಥೆ ( Mid Day Meals ) ಮಾಡಲಾಗುತ್ತದೆ ಎಂಬುದಾಗಿ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಈ ಮೂಲಕ 1ರಿಂದ 5ನೇ ತರಗತಿ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಈ ಕುರಿತಂತೆ ವಿಧಾನಸೌಧದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ( Education Minister B.C.Nagesh ) ಅಕ್ಟೋಬರ್ 25ರಿಂದ 1 ರಿಂದ 5ನೇ ತರಗತಿ ಶಾಲೆಗಳು ಪುನರಾರಂಭಗೊಳ್ಳುತ್ತಿವೆ. ಅರ್ಧ ಪ್ರಮಾಣದಲ್ಲಿ ಶಾಲೆಗಳು ಆರಂಭಗೊಳ್ಳುತ್ತಿರೋದ್ರಿಂದ ಬಿಸಿಯೂಟ ನೀಡೋದು ಬೇಡವೆಂದು ತೀರ್ಮಾನಿಸಲಾಗಿತ್ತು. ಆದ್ರೇ ಮಕ್ಕಳು ಶಾಲೆಗೆ ಆಗಮಿಸುತ್ತಿರೋ ಕಾರಣ, ಸೋಮವಾರದಿಂದಲೇ ಎಲ್ಲಾ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಊಟ ನೀಡಲಾಗುತ್ತದೆ ಎಂದರು.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags