ವಿಜಯವಾಣಿ

505k Followers

ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಿವರು; ಯಾವ ಜಿಲ್ಲೆಗೆ ಯಾರು? ಇಲ್ಲಿದೆ ಮಾಹಿತಿ.

21 Nov 2021.9:46 PM

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಅಧಿಕಾರಾವಧಿ ಮೂರರಿಂದ ಐದು ವರ್ಷಗಳಿಗೆ ವಿಸ್ತರಣೆಗೊಂಡ ಬಳಿಕ ನಡೆದ ಮೊದಲ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಈ ಚುನಾವಣೆಯಲ್ಲಿ ಜಿಲ್ಲಾಮಟ್ಟದ ಅಧ್ಯಕ್ಷರ ಫಲಿತಾಂಶ ಮೊದಲಿಗೆ ಒಂದೊಂದಾಗಿ ಹೊರಹೊಮ್ಮುತ್ತಿದ್ದು, ಯಾವ ಜಿಲ್ಲೆಯಲ್ಲಿ ಯಾರು ನೂತನ ಅಧ್ಯಕ್ಷರು ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು: ಎಂ.ಪ್ರಕಾಶ ಮೂರ್ತಿ

ರಾಜ್ಯದಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ರಾಜಧಾನಿ ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಎಂ. ಪ್ರಕಾಶ ಮೂರ್ತಿ ಆಯ್ಕೆಯಾಗಿದ್ದಾರೆ.
ಬಹುತೇಕ ಎಂ. ಪ್ರಕಾಶ ಮೂರ್ತಿ ಹಾಗೂ ಎಂ. ತಿಮ್ಮಯ್ಯ ನಡುವೆಯೇ ನೇರ ಹಣಾಹಣಿ ಎಂಬಂತಿದ್ದ ಈ ಚುನಾವಣೆಯಲ್ಲಿ ಮತದಾನದಲ್ಲೂ ಅದೇ ಫಲಿತಾಂಶ ಹೊರಬಿದ್ದಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 10,538 ಮತಗಳು ಚಲಾವಣೆ ಆಗಿವೆ. ಈ ಹಿಂದೆ ಎರಡು ಸಲ ಸ್ಪರ್ಧಿಸಿದ್ದ ಪ್ರಕಾಶ ಮೂರ್ತಿ ತಮ್ಮ ಮೂರನೇ ಪ್ರಯತ್ನದಲ್ಲಿ ಜಯ ಗಳಿಸಿದ್ದಾರೆ. ಈ ಹಿಂದೆ ಎರಡು ಬಾರಿ ಸ್ಪರ್ಧಿಸಿದ್ದ ಎಂ. ತಿಮ್ಮಯ್ಯ ಇದೇ ಕೊನೆಯ ಸೆಣಸಾಟ ಎಂದಿದ್ದರು. ಮತದಾರರು ಅಂತಿಮವಾಗಿ ಪ್ರಕಾಶ ಮೂರ್ತಿ ಅವರಿಗೆ ಮಣೆ ಹಾಕಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳ ನೂತನ ಅಧ್ಯಕ್ಷರ ವಿವರ

  1. ಬೆಂಗಳೂರು ಗ್ರಾಮಾಂತರ: ಬಿ.ಎಂ. ಕೃಷ್ಣಪ್ಪ
  2. ಮೈಸೂರು: ಮಡ್ಡೀಕೆರೆ ಗೋಪಾಲ್​
  3. ಶಿವಮೊಗ್ಗ: ಡಿ.ಮಂಜುನಾಥ
  4. ಮಂಡ್ಯ: ಸಿ.ಕೆ.ರವಿಕುಮಾರ ಚಾಮಲಾಪುರ
  5. ತುಮಕೂರು: ಕೆ.ಎಸ್.ಸಿದ್ದಲಿಂಗಪ್ಪ, ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ
  6. ಬಾಗಲಕೋಟೆ: ಶಿವಾನಂದ ಶೆಲ್ಲಿಕೇರಿ
  7. ಧಾರವಾಡ: ಡಾ.ಲಿಂಗರಾಜ ಅಂಗಡಿ
  8. ಉತ್ತರಕನ್ನಡ: ಬಿ.ಎನ್​. ವಾಸರೆ
  9. ರಾಯಚೂರು: ರಂಗಣ್ಣ ಪಾಟೀಲ್ ಹಳ್ಳುಂಡಿ
  10. ಕೊಡಗು: ಕೇಶವ ಕಾಮತ್
  11. ಹಾಸನ: ಡಾ.ಎಚ್.ಎಲ್. ಮಲ್ಲೇಶ ಗೌಡ
  12. ಬೀದರ್: ಸುರೇಶ ಚನ್ನಶೆಟ್ಟಿ
  13. ದಾವಣಗೆರೆ: ಬಿ.ವಾಮದೇವಪ್ಪ

(ಉಳಿದ ಜಿಲ್ಲೆಗಳ ಮಾಹಿತಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದ್ದು, ನಂತರ ಅಪ್​ಡೇಟ್ ಮಾಡಲಾಗುವುದು. ಕಸಾಪ ನೂತನ ರಾಜ್ಯಾಧ್ಯಕ್ಷರ ಮಾಹಿತಿ ಕೆಲವೇ ನಿಮಿಷಗಳಲ್ಲಿ ಪ್ರಕಟಗೊಳ್ಳಲಿದೆ)

ಹುಲಿ ಗಣತಿಗೆ ಹೋಗಿದ್ದ ಅರಣ್ಯ ರಕ್ಷಕಿ, ಹೆಣ್ಣು ಹುಲಿಗೆ ಬಲಿ; ಕರ್ತವ್ಯದಲ್ಲಿದ್ದಾಗಲೇ ಸಾವಿಗೀಡಾದ ಫಾರೆಸ್ಟ್ ಗಾರ್ಡ್​ ಸ್ನಾನ ಮಾಡ್ತ ಮಾಡ್ತ ಸಾವಿಗೀಡಾದ ಯುವತಿ; ಅಸಹಜ ಸಾವು ಎಂದು ಪಾಲಕರಿಗೆ ಅನುಮಾನ?! ಲಗ್ನವಾಗಲು ಹೊರಟ ಯುವತಿ, ವಜ್ರದೇಹಿ ಸ್ವಾಮೀಜಿಯ ಮಧ್ಯಪ್ರವೇಶ: ಈ ಮದ್ವೆ ಬೇಡ ಎಂದು ಆಕೆಯ ಮನವೊಲಿಕೆ; ಕಾರಣ… ನಮ್​ ಕಾರು ತೇಲ್ತಿತ್ತು, ಇಂಜಿನ್ನೇ ಆಫ್​ ಆಯ್ತು..; ತಿರುಪತಿಯಲ್ಲಿ ಭಯಂಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದನ್ನು ವಿವರಿಸಿದ ನಟಿ ತಾರಾ
Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags