ಕನ್ನಡದುನಿಯಾ

1.6M Followers

16 ಸಾರ್ವತ್ರಿಕ ರಜೆ ಸೇರಿ 38 ಸರ್ಕಾರಿ ರಜೆ ದಿನಗಳ ಪಟ್ಟಿಗೆ ಸಂಪುಟ ಒಪ್ಪಿಗೆ: ಇಲ್ಲಿದೆ ಡಿಟೇಲ್ಸ್

26 Nov 2021.08:02 AM

ಬೆಂಗಳೂರು: ಮುಂದಿನ ವರ್ಷ 16 ದಿನ ಸಾರ್ವತ್ರಿಕ ರಜೆ, 22 ದಿನ ನಿರ್ಬಂಧಿತ ರಜೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

2022 ರಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ 16 ದಿನ ಸಾರ್ವತ್ರಿಕ ರಜೆ ಮತ್ತು 22 ದಿನ ನಿರ್ಬಂಧಿತ ರಜೆ ಸಿಗಲಿದ್ದು, ಸರ್ಕಾರಿ ರಜಾದಿನಗಳ ಪಟ್ಟಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಮೇ 1 ಕಾರ್ಮಿಕರ ದಿನಾಚರಣೆ, ಜುಲೈ 10 ಬಕ್ರಿದ್, ಸೆಪ್ಟೆಂಬರ್ 25 ಮಹಾಲಯ ಅಮಾವಾಸ್ಯೆ, ಅಕ್ಟೋಬರ್ 2 ಗಾಂಧಿ ಜಯಂತಿ, ಅಕ್ಟೋಬರ್ 9 ವಾಲ್ಮೀಕಿ ಜಯಂತಿ/ಈದ್ ಮಿಲಾದ್, ಡಿಸೆಂಬರ್ 25 ಕ್ರಿಸ್ಮಸ್ ಭಾನುವಾರ ಬರುವುದರಿಂದ ಇವುಗಳು ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಇರುವುದಿಲ್ಲ.

ಏಪ್ರಿಲ್ 10 ರಂದು ಭಾನುವಾರ ಶ್ರೀರಾಮನವಮಿ ಇದೆ. ಸೆಪ್ಟೆಂಬರ್ 10 ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಎರಡನೇ ಶನಿವಾರ, ಡಿಸೆಂಬರ್ 24 ರಂದು ಕ್ರಿಸ್ ಮಸ್ ಈವ್ 4ನೇ ಶನಿವಾರ ಬರಲಿದ್ದು, ಇವುಗಳನ್ನು ನಿರ್ಬಂಧಿತ ರಜೆ ಪಟ್ಟಿಯಿಂದ ಹೊರಗಿಡಲಾಗಿದೆ.

ಸಾರ್ವತ್ರಿಕ ರಜೆ:

ಜನವರಿ 15 ಸಂಕ್ರಾಂತಿ

ಜನವರಿ 26 ಗಣರಾಜ್ಯೋತ್ಸವ

ಮಾರ್ಚ್ 1 ಮಹಾಶಿವರಾತ್ರಿ

ಏಪ್ರಿಲ್ 2 ಯುಗಾದಿ

ಏಪ್ರಿಲ್ 14 ಅಂಬೇಡ್ಕರ್/ಮಹಾವೀರ ಜಯಂತಿ

ಏಪ್ರಿಲ್ 15 ಗುಡ್ ಫ್ರೈಡೇ

ಮೇ 3 ಬಸವಜಯಂತಿ/ ಅಕ್ಷಯ ತೃತೀಯ/ ರಂಜಾನ್

ಆಗಸ್ಟ್ 9 ಮೊಹರಂ ಕೊನೆ ದಿನ

ಆಗಸ್ಟ್ 15 ಸ್ವಾತಂತ್ರ್ಯ ದಿನ

ಆಗಸ್ಟ್ 31 ಗಣೇಶ ಚತುರ್ಥಿ

ಅಕ್ಟೋಬರ್ 4 ಆಯುಧಪೂಜೆ

ಅಕ್ಟೋಬರ್ 5 ವಿಜಯದಶಮಿ ಅ

ಅಕ್ಟೋಬರ್ 24 ನರಕ ಚತುರ್ಥಿ

ಅಕ್ಟೋಬರ್ 26 ಬಲಿಪಾಡ್ಯಮಿ

ನವೆಂಬರ್ 1 ಕನ್ನಡ ರಾಜ್ಯೋತ್ಸವ

ನವೆಂಬರ್ 11 ಕನಕದಾಸ ಜಯಂತಿ

ಭಾನುವಾರದ ರಜೆಗಳು:

ಮೇ 1 ಕಾರ್ಮಿಕ ದಿನಾಚರಣೆ

ಜುಲೈ 10 ಬಕ್ರಿದ್

ಸೆಪ್ಟೆಂಬರ್ 25 ಮಹಾಲಯ ಅಮಾವಾಸ್ಯೆ

ಅಕ್ಟೋಬರ್ 2 ಗಾಂಧಿ ಜಯಂತಿ

ಅಕ್ಟೋಬರ್ 9 ವಾಲ್ಮೀಕಿ ಜಯಂತಿ/ ಈದ್ ಮಿಲಾದ್

ಡಿಸೆಂಬರ್ 25 ಕ್ರಿಸ್ಮಸ್

ನಿರ್ಬಂಧಿತ ರಜೆ ದಿನಗಳು:

ಜನವರಿ 1 ಹೊಸ ವರ್ಷ

ಫೆಬ್ರವರಿ 10 ಮಧ್ವನವಮಿ

ಮಾರ್ಚ್ 17 ಹೋಳಿ

ಮಾರ್ಚ್ 19 ಶಬ್ ಎ ಬರಾತ್

ಏಪ್ರಿಲ್ 6 ದೇವರ ದಾಸಿಮಯ್ಯ ಜಯಂತಿ

ಏಪ್ರಿಲ್ 28 ಶಬ್ ಎ ಕ್ವಾದರ್

ಏಪ್ರಿಲ್ 29 ಜಮಾತ್ ಅಲ್ ವಿದಾ

ಮೇ 5 ರಾಮಾನುಜಾಚಾರ್ಯ ಜಯಂತಿ

ಮೇ 6 ಶಂಕರಾಚಾರ್ಯ ಜಯಂತಿ

ಮೇ 16 ಬುದ್ಧ ಪೂರ್ಣಿಮೆ

ಆಗಸ್ಟ್ 2 ಋಗ್ ಉಪಾಕರ್ಮ

ಆಗಸ್ಟ್ 5 ವರಮಹಾಲಕ್ಷ್ಮಿ ವ್ರತ

ಆಗಸ್ಟ್ 11 ಯಜುರ್ ಉಪಾಕರ್ಮ

ಆಗಸ್ಟ್ 19 ಕೃಷ್ಣ ಜನ್ಮಾಷ್ಟಮಿ

ಆಗಸ್ಟ್ 30 ಸ್ವರ್ಣಗೌರಿ ವ್ರತ

ಆಗಸ್ಟ್ ಸೆಪ್ಟೆಂಬರ್ 8 ಓಣಂ

ಸಪ್ಟೆಂಬರ್ 9 ಅನಂತಪದ್ಮನಾಭ ವ್ರತ

ಸೆಪ್ಟೆಂಬರ್ 17 ವಿಶ್ವಕರ್ಮ ಜಯಂತಿ

ಅಕ್ಟೋಬರ್ 18 ತುಲಾಸಂಕ್ರಮಣ

ನವೆಂಬರ್ 8 ಗುರುನಾನಕ ಜಯಂತಿ

ಡಿಸೆಂಬರ್ 8 ಹುತ್ತರಿ ಹಬ್ಬ

ಭಾನುವಾರದ ನಿರ್ಬಂಧಿತ ರಜೆ

ಏಪ್ರಿಲ್ 10 ರಂದು ಭಾನುವಾರ ರಾಮನವಮಿ

ಸೆಪ್ಟೆಂಬರ್ 10 ರಂದು ಎರಡನೇ ಶನಿವಾರ ನಾರಾಯಣಗುರು ಜಯಂತಿ

ಡಿಸೆಂಬರ್ 24ರಂದು 4ನೇ ಶನಿವಾರ ಕ್ರಿಸ್ಮಸ್ ಈವ್ ನಿರ್ಬಂಧಿತ ರಜೆ ಇದೆ

ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿಗೆ ಸಾರ್ವತ್ರಿಕ ರಜೆ ಇದ್ದು ಇದೇ ದಿನ ಸೌರಮಾನ ಯುಗಾದಿ ಇದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags