Kannada News Now

1.8M Followers

BIG BREAKING NEWS: 'ಅಪ್ಪು'ವಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ ಪ್ರಶಸ್ತಿ' - ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

16 Nov 2021.5:05 PM

ಬೆಂಗಳೂರು: ಪುನೀತ್ ರಾಜ್ ಕುಮಾರ್ ( Puneet Rajkumar ) ನಿಧನರಾದ ದಿನದಂದು ಆ ಸುದ್ದಿ ಕೇಳಿ ನಾನು ಶಾಕ್ ಆಗಿದ್ದೆ. ಅವರ ಸಾವು ಅಕಾಲಿಕವಾಗಿದೆ. ಮುತ್ತಾರಾಜನ ಮುತ್ತು ದೈಹಿಕವಾಗಿ ನಮ್ಮ ಜೊತೆಗೆ ಇಲ್ಲ. ಅವರ ಸಾಧನೆಯ ಮೂಲಕ ನಮ್ಮ ಜೊತೆಗೆ ಇದ್ದಾರೆ.

ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ ನಮ್ಮ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ಘೋಷಣೆ ಮಾಡಿದರು.

ಶಿವಮೊಗ್ಗ: ನಾಳೆ ಜಿಲ್ಲೆಯ ಈ ಪ್ರದೇಶಗಳಲ್ಲಿ 'ವಿದ್ಯುತ್ ವ್ಯತ್ಯಯ'

ಇಂದು ಅರಮನೆ ಮೈದಾನದಲ್ಲಿ ನಡೆಯುತ್ತಿರುವಂತ ಪುನೀತ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದಂತ ಅವರು, ಅಗಲಿದ ಅಪ್ಪುವಿನ ಪಾರ್ಥೀವ ಶರೀರದ ದರ್ಶನ ಸಂದರ್ಭದಲ್ಲಿ ನನ್ನ ಮುತ್ತು ಕೊಟ್ಟ ಬಗ್ಗೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ಅಂದುಕೊಂಡಿದ್ದರು. ಆದ್ರೇ ಆ ಮುತ್ತನ್ನು ಕನ್ನಡಿಗರೆಲ್ಲರ ಪರವಾಗಿ ನೀಡಿದ್ದೇನೆ ಎಂಬುದಾಗಿ ತಿಳಿಸಿದರು.

BIG BREAKING NEWS: ರಾಜ್ಯದ ತಾಲ್ಲೂಕಗಳಲ್ಲಿನ 'ಮಿನಿವಿಧಾನಸೌಧ'ದ ಹೆಸರು ಬದಲು: 'ತಾಲ್ಲೂಕು ಆಡಳಿತ ಸೌಧ'ವೆಂದು ಮರುನಾಮಕರಣ

ನಟ ಪುನೀತ್ ರಾಜ್ ಕುಮಾರ್ ಸಮಾಧಿ ಸ್ಥಳ ಕಂಠೀರವ ಸ್ಟುಡೀಯೋದಲ್ಲಿನ ಪುತ್ಥಳಿ ಸೇರಿದಂತೆ ಅಲ್ಲಿನ ಸಮಾಧಿ ನಿರ್ಮಾಣ ಸೇರಿದಂತೆ ವಿವಿಧ ಕೆಲಸವನ್ನು ಸರ್ಕಾರವೇ ಮುಂದೆ ನಿಂತು ಮಾಡಲಿದೆ. ಪುನೀತ್ ಸಮಾಧಿ ಸ್ಥಳ ಅಭಿವೃದ್ಧಿ ಕಾರ್ಯಕ್ಕೆ ಎಲ್ಲಾ ಸಹಕಾರವನ್ನು ನೀಡಲಾಗುತ್ತದೆ ಎಂದರು.

Grama Vastavya: ನಾನು ಯಾರನ್ನೋ ಮೆಚ್ಚಿಸಲಿಕ್ಕೆ ಗ್ರಾಮ ವಾಸ್ತವ್ಯ ಮಾಡಲಿಲ್ಲ: ಹಂಸಲೇಖಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು

ಪುನೀತ್ ರಾಜ್ ಕುಮಾರ್ ಅವರಿಗೆ ನಾಡಿನ ಜನರ ಅಭಿಲಾಷೆಯಂತೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲು ನಿರ್ಧರಿಸಲಾಗಿದೆ. ಇದಷ್ಟೇ ಅಲ್ಲದೇ ಕೇಂದ್ರ ಸರ್ಕಾರದಿಂದಲೂ ಪ್ರಶಸ್ತಿ ನೀಡೋದಕ್ಕೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಶಿಫಾರಸ್ಸು ಮಾಡಲಾಗುತ್ತದೆ ಎಂಬುದಾಗಿ ಹೇಳಿದರು.

ವರದಿ : ವಸಂತ ಬಿ ಈಶ್ವರಗೆರೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags