ಬಿಸಿ ಸುದ್ದಿ

169k Followers

'ಅಂಗನವಾಡಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ, ಯುಕೆಜಿ ಪ್ರಾರಂಭ' - ಬಿ ಸಿ ನಾಗೇಶ್‌

17 Dec 2021.12:11 PM

ಬೆಳಗಾವಿ: "ಅಂಗನವಾಡಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ, ಯುಕೆಜಿ ಪರಿಚಯಿಸಲು ಯೋಜನೆ ಮಾಡಿದ್ದೇವೆ" ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್‌‌ ತಿಳಿಸಿದ್ದಾರೆ.

ಈ ಬಗ್ಗೆ ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಅವರು, "ಅಂಗನವಾಡಿಯಲ್ಲಿ ಎಲ್‌ಕೆಜಿ, ಯುಕೆಜಿ ಪರಿಚಯಿಸಲು ಯೋಜನೆ ಮಾಡಿದ್ದೇವೆ.

ಅಲ್ಲಿರುವ ಸಿಬ್ಬಂದಿಗೆ ತರಬೇತಿ ನೀಡಿ ಬಳಸಿಕೊಳ್ಳಲಾಗುವುದು" ಎಂದಿದ್ದಾರೆ

"ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಹಂತ ಹಂತವಾಗಿ ಎನ್‌ಇಪಿ ಜಾರಿ ಮಾಡಲಾಗುತ್ತದೆ. 26 ಪೊಸಿಶನ್‌ ಪೇಪರ್‌ ಸಲ್ಲಿಕೆಯಾಗುತ್ತಿದೆ. ತಜ್ಞರ ತಂಡ ರಚಿಸಿದ್ದು, 3-4 ಸಭೆಗಳು ನಡೆದಿವೆ" ಎಂದು ಮಾಹಿತಿ ನೀಡಿದ್ದಾರೆ.

Post navigation

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಶತಾಯುಷಿ ಅಜ್ಜಿ ನಿಂಗಮ್ಮ ಇನ್ನಿಲ್ಲ 'ಅತ್ಯಾಚಾರ ಅನಿವಾರ್ಯವಾದರೆ ಆನಂದಿಸಿ': ಕ್ಷಮೆಯಾಚಿಸಿದ ಮಾಜಿ ಸ್ಪೀಕರ್
Disclaimer

Disclaimer

This story is auto-aggregated by a computer program and has not been created or edited by Dailyhunt Publisher: BC Suddi

#Hashtags