News18 ಕನ್ನಡ

399k Followers

Karnataka Jobs: ರಾಜ್ಯ ಕಂದಾಯ ಇಲಾಖೆಯಲ್ಲಿ 3000 ಹುದ್ದೆಗಳಿಗೆ ಅರ್ಜಿ ಆಹ್ವಾನ; ಈಗಲೇ ಅಪ್ಲೈ ಮಾಡಿ

22 Dec 2021.2:45 PM

SSLR Recruitment 2021: ಸರ್ವೇ ಸೆಟಲ್​ಮೆಂಟ್​ & ಲ್ಯಾಂಡ್​ ರೆಕಾರ್ಡ್ಸ್​ ಕರ್ನಾಟಕ (Survey Settlement and Land Records Karnataka) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3000 ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್​ (Licensed Landlords) ಹುದ್ದೆಗಳು ಖಾಲಿ ಇದ್ದು, ಪಿಯುಸಿ, ಡಿಪ್ಲೋಮಾ, ಬಿಇ, ಬಿ.ಟೆಕ್​ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆಸಕ್ತರು ಆನ್​ಲೈನ್​ (Online)​ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಸರ್ವೇ ಸೆಟಲ್​ಮೆಂಟ್​ & ಲ್ಯಾಂಡ್​ ರೆಕಾರ್ಡ್ಸ್​ ಕರ್ನಾಟಕ
ಹುದ್ದೆಯ ಹೆಸರು ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್
ಒಟ್ಟು ಹುದ್ದೆಗಳು 3000
ಉದ್ಯೋಗದ ಸ್ಥಳ ಕರ್ನಾಟಕ
ವೇತನ ನಿಯಮಾನುಸಾರ
ಅರ್ಜಿ ಸಲ್ಲಿಕೆ ವಿಧಾನ ಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 1/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/12/2021

ಹುದ್ದೆಯ ಮಾಹಿತಿ:

ಬಾಗಲಕೋಟೆ- 60
ಬಳ್ಳಾರಿ-27
ಬೆಳಗಾವಿ-112
ಬೆಂಗಳೂರು-65
ಬೆಂಗಳೂರು ನಗರ-12
ಬೀದರ್-13
ಚಾಮರಾಜನಗರ-50
ಚಿಕ್ಕಮಗಳೂರು-112
ಚಿತ್ರದುರ್ಗ-93
ದಕ್ಷಿಣ ಕನ್ನಡ-66
ದಾವಣಗೆರೆ-183
ಧಾರವಾಡ-59
ಗದಗ-46
ಗುಲ್ಬರ್ಗಾ-12
ಹಾಸನ-136
ಹಾವೇರಿ-229
ಕೊಡಗು-100
ಕೋಲಾರ-137
ಕೊಪ್ಪಳ-66
ಮಂಡ್ಯ-195
ಮೈಸೂರು-136
ರಾಯಚೂರು-54
ರಾಮನಗರ-155
ತುಮಕೂರು-334
ಶಿವಮೊಗ್ಗ-137
ಉಡುಪಿ-131
ಉತ್ತರ ಕನ್ನಡ-101
ಬಿಜಾಪುರ-76
ಯಾದಗಿರಿ-45
ಚಿಕ್ಕಬಳ್ಳಾಪುರ-39
ವಿಜಯನಗರ-29

: SSLC, ITI ಪಾಸಾದವರಿಗೆ ಭಾರತೀಯ ವಾಯುಪಡೆಯಲ್ಲಿ ಬಂಪರ್ ಉದ್ಯೋಗ, ಮಾಸಿಕ ವೇತನ ₹ 32,600

ವಿದ್ಯಾರ್ಹತೆ:
ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪಿಯುಸಿ, ಡಿಪ್ಲೋಮಾ, ಬಿಇ/ಬಿ.ಟೆಕ್​, ಐಟಿಐ ಪೂರ್ಣಗೊಳಿಸಿರಬೇಕು.

ಅನುಭವ:
ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಾಜ್ಯ ಸರ್ಕಾರದ ಭೂ ಮಾಪನ ಕಂದಾಯ ವ್ಯವಸ್ಥೆಯಲ್ಲಿ ಮತ್ತು ಭೂ ದಾಖಲೆಗಳ ಇಲಾಖೆಗಳಲ್ಲಿ ಅಥವಾ ಭಾರತೀಯ ಸಮೀಕ್ಷೆ ಅಥವಾ ಸರ್ಕಾರಿ ಮಾನ್ಯತೆ ಪಡೆದ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ 10 ವರ್ಷಗಳ ಅನುಭವವನ್ನು ಹೊಂದಿರಬೇಕು.

ಇತರೆ ಶುಲ್ಕ:
ಟ್ರೇನಿಂಗ್​ ಶುಲ್ಕ-5,000 ರೂ.
ಲೈಸೆನ್ಸ್​ ಶುಲ್ಕ-3,000 ರೂ.

ವಯೋಮಿತಿ:
ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-65 ವರ್ಷದೊಳಗಿರಬೇಕು.

:PSI Recruitment: ತೃತೀಯ ಲಿಂಗಿಗಳಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ; ಸಬ್​​ ಇನ್ಸ್​ಪೆಕ್ಟರ್​​ ಹುದ್ದೆಗೆ ಅರ್ಜಿ ಹಾಕಲು ಹೀಗೆ ಮಾಡಿ

ವೇತನ:
ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:
ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1,000 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಕೆಲಸ ಹುಡುಕುತ್ತಿದ್ದಾರಾ? ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ಆನ್​ಲೈನ್ ಟೆಸ್ಟ್​
ಲಿಖಿತ ಪರೀಕ್ಷೆ
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags