ವಿಜಯವಾಣಿ

505k Followers

ವಿದ್ಯಾರ್ಥಿನಿಯರ ಮುಂದೆ ಡಬ್ಬಲ್​ ಮೀನಿಂಗ್​ ಡೈಲಾಗ್: ಸರ್ಕಾರಿ ಶಾಲಾ ಶಿಕ್ಷಕ ಅರೆಸ್ಟ್​, ಮತ್ತೊಬ್ಬ ಪರಾರಿ

25 Dec 2021.11:34 AM

ಚೆನ್ನೈ: ಸರ್ಕಾರಿ ಶಾಲಾ ಶಿಕ್ಷಕರೊಬ್ಬರ ವಿರುದ್ಧ 15 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಆರೋಪ ಮಾಡಿದ ಬೆನ್ನಲ್ಲೇ ಶಿಕ್ಷಕನನ್ನು ಬಂಧಿಸಿರುವ ಘಟನೆ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರ ಪ್ರಕಾರ 9 ಮತ್ತು 10ನೇ ತರಗತಿಯ 15 ವಿದ್ಯಾರ್ಥಿನಿಯರು ಅವರ ಶಾಲೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಕ್ಕಳ ರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಿದ ಬಳಿಕ ಶಿಕ್ಷಕರ ದೌರ್ಜನ್ಯವನ್ನು ಬಹಿರಂಗಪಡಿಸಿದ್ದಾರೆ.

ಗಣಿತ ಹಾಗೂ ಸಮಾಜ ವಿಜ್ಞಾನ ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ. ತರಗತಿಯ ವೇಳೆ ಡಬ್ಬಲ್​ ಮೀನಿಂಗ್​ ಬಳಸುವುದು, ಅನುಚಿತವಾಗಿ ಸ್ಪರ್ಶಿಸುವುದು ಮತ್ತು ಶಾಲೆಯ ನಂತರದ ಅವಧಿಯಲ್ಲೂ ದೂರವಾಣಿ ಕರೆ ಮಾಡುವುದು ಸೇರಿದಂತೆ ಅನೇಕ ಆರೋಪಗಳನ್ನು ಮಾಡಿದ್ದಾರೆ.

ವಿದ್ಯಾರ್ಥಿನಿಯರು ನೀಡಿದ ದೂರಿನ ಮೇಲೆ ಪೊಲೀಸರು ಸಮಾಜ ವಿಜ್ಞಾನ ಶಿಕ್ಷಕನನ್ನು ಬಂಧಿಸಿದ್ದು, ಆರೋಪಿ ಗಣಿತ ಶಿಕ್ಷಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಜಿಲ್ಲಾ ಶಿಕ್ಷಣ ಅಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮತ್ತು ಮಹಿಳಾ ಪೊಲೀಸ್​ ಇನ್ಸ್​ಪೆಕ್ಟರ್​ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ತೆಲಂಗಾಣದ ಥಿಯೇಟರ್​ ಪಾರ್ಕಿಂಗ್​ ದರಕ್ಕಿಂತ ಕಡಿಮೆ ಆಂಧ್ರದ ಸಿನಿಮಾ ಟಿಕೆಟ್​ ಬೆಲೆ: ಬಾಲ್ಕನಿಗೆ 20 ರೂ.

ರಾಕಿ ಭಾಯ್ ಗಡ್ಡಕ್ಕೆ ಮುಕ್ತಿ ಯಾವಾಗ? ಕೆಜಿಎಫ್-2 ಬಗ್ಗೆ ಯಶ್ ಹೇಳಿದ್ದೇನು….?

ಡಿಸೆಂಬರ್​ 31ರಂದು ಬಂದ್​ಗೆ ಕರೆ ನೀಡಿರುವುದು ಕನ್ನಡಕ್ಕೆ ಮಾಡಿದ ದ್ರೋಹ: ನಟ ಶಿವರಾಜ್​ಕುಮಾರ್​

ಸಾರ್ವಜನಿಕರ ಕ್ಷಮೆಯಾಚಿಸದಿದ್ರೆ ಭಾರತದಲ್ಲಿ ಉಳಿಯಲು ಬಿಡುವುದಿಲ್ಲ: ಸನ್ನಿ ಲಿಯೋನ್​ಗೆ ಅರ್ಚಕರ ಎಚ್ಚರಿಕೆ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags