News18 ಕನ್ನಡ

399k Followers

Omicron Variant; ರಾಜ್ಯದಲ್ಲಿ ಶುರುವಾದ 3ನೇ ಅಲೆಯ ಆತಂಕ; ಸರ್ಕಾರಕ್ಕೆ ತಜ್ಞರು ಮಾಡಿರುವ ಶಿಫಾರಸ್ಸುಗಳೇನು?

09 Dec 2021.12:38 PM

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಯ (Coronavirus Third Wave) ಆತಂಕ ಶುರುವಾಗಿದೆ. ಈ ಹಿಂದೆ ಡಿಸೆಂಬರ್ ಕೊನೆಯಲ್ಲಿ ಮೂರನೇ ಅಲೆಯ ಬರಬಹುದು ಎಂದು ತಜ್ಞರು (Experts) ಸೂಚನೆ ನೀಡಿದ್ದಾರೆ. ಡಿಸೆಂಬರ್ ಕೊನೆ ಅಥವಾ ಜನವರಿ ಆರಂಭದಲ್ಲಿ ಮೂರನೇ ಅಲೆಯ ಎಚ್ಚರಿಕೆಯನ್ನು ತಜ್ಞರು ನೀಡಿದ್ದರು.ಕೊರೋನಾ ರೂಪಾಂತರಿಯಿಂದಲೇ (Corona Variant Omicron) ಕೊರೋನಾ ಮೂರನೇ ಅಲೆ ಎದುರಾಗಲಿದೆ ಎಂದು ಸಹ ಹೇಳಿದ್ದರು. ತಜ್ಞರ ಸೂಚನೆಯಂತೆ ಇದೀಗ ರಾಜ್ಯಕ್ಕೆ ಮೂರನೇ ಅಲೆಯ ಆತಂಕ ಎದುರಾಗಿದೆ. ಒಮಿಕ್ರಾನ್ ಹೊಸ ತಳಿಯಿಂದ ರಾಜ್ಯಕ್ಕೆ ಮೂರನೇ ಅಲೆಯ ಆತಂಕ ಮನೆ ಮಾಡಿದೆ. ಕಳೆದ ಒಂದು ವಾರದಿಂದ 250 -280 ಅಸುಪಾಸಿನಲ್ಲಿದ್ದ ಕೇಸ್ ಗಳ ಸಂಖ್ಯೆ ಇದೀಗ ಏರಿಕೆ ಆಗಿದೆ. ನಿತ್ಯ 320-330 ಅಸುಪಾಸಿನಲ್ಲಿ ಕೊರೋನಾ ಕೇಸ್ ಗಳು ವರದಿಯಾಗುತ್ತಿವೆ. ಪ್ರತಿದಿನಕ್ಕೆ ಸಾವಿರಕ್ಕಿಂತ ಹೆಚ್ಚು ಕೇಸ್ ಗಳು ಏರಿಕೆಯಾದ್ರೆ ಮೂರನೇ ಅಲೆ ಆರಂಭ ಅಂತಿದ್ದಾರೆ ತಜ್ಞರು. ರಾಜ್ಯದಲ್ಲಿ ನಿರಂತರ ಕೋವಿಡ್ ಕೇಸ್ 1000 ದ ಅಸುಪಾಸು ಬಂದ್ರೆ ಕೊರೋನಾ ಮೂರನೇ ಅಲೆ ಆರಂಭ ಅಂತಿದ್ದಾರೆ ತಜ್ಞರು. ಸದ್ಯ ಕೊರೋನಾ ನಿಯಂತ್ರಣದಲ್ಲಿದೆ. ಕೇಸ್ ಏರಿಕೆಯತ್ತ ಸಾಗಿದ್ರೆ ಕರುನಾಡಿಗೆ ಅಪತ್ತು ಎದುರಾಗಲಿದೆ ಎಂದು ಸಹ ತಜ್ಞರು ಹೇಳಿದ್ದಾರೆ.

ಸರ್ಕಾರಕ್ಕೆ ತಜ್ಞರ ಶಿಫಾರಸ್ಸು ಏನು?

ದಿನನಿತ್ಯ ಪ್ರಕರಣಗಳ ಸಂಖ್ಯೆ ಇದೀಗ ತುಸು ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಹೊಸ ತಳಿಯಿಂದ ರಾಜ್ಯಕ್ಕೆ ಟೆನ್ಷನ್ ಶುರುವಾಗಿದೆ. ಆರಂಭದಲ್ಲಿಯೇ ಹೊಸ ತಳಿ ನಿಯಂತ್ರಣಕ್ಕೆ ಸರ್ಕಾರಕ್ಕೆ ತಜ್ಞರು ಹಲವು ಶಿಫಾರಸ್ಸು (Experts Suggestions) ಮಾಡಿದ್ದಾರೆ.

  • ಹೊಸ ತಳಿ ರಾಜ್ಯಕ್ಕೆ ಎಂಟ್ರಿಯಾಗದಂತೆ ಕಟ್ಟೆಚ್ಚರ

  • ರಾಜ್ಯದ ಗಡಿಭಾಗದ ಮೇಲೆ ಹೈ ಅಲರ್ಟ್ ನೀಡಬೇಕು

  • ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯ ಕೋವಿಡ್ ಟೆಸ್ಟ್

  • ನೆಗಟಿವ್ ಬಂದ ಪ್ರಯಾಣಿಕರಿಗೆ ಸ್ಥಳದಲ್ಲಿಯೇ ಮೊತ್ತೊಮ್ಮೆ ಟೆಸ್ಟ್ ಮಾಡುವುದು

  • ಕಡ್ಡಾಯವಾಗಿ ವಿದೇಶದಿಂದ ಬರುವ ಪ್ರಯಾಣಿಕರಿಗೆ ಸ್ರ್ಕಿನಿಂಗ್ ಟೆಸ್ಟ್ ಮಾಡಬೇಕು

  • ದಿನಕ್ಕೆ ರಾಜ್ಯದಲ್ಲಿ 60,000 ರಿಂದ 80,000 ಕ್ಕೆ ಟೆಸ್ಟಿಂಗ್ ಹೆಚ್ಚಿಸಬೇಕು

  • ಸಾರ್ವಜನಿಕ ಸಭೆ ಹಾಗೂ ಸಮಾರಂಭಕ್ಕೆ ಕಡ್ಡಾಯ ಕೊವಿಡ್ ರೂಲ್ಸ್ ಪಾಲನೆಯಾಗಬೇಕು

  • ವಿದೇಶಗಳಿಂದ ಬಂದವರಲ್ಲಿ ಪಾಸಿಟಿವ್ ಕಾಣಿಸಿಕೊಂಡ್ರೆ ನೆಗಟಿವ್ ವರದಿ ಬರುವರೆಗೂ ಕ್ವಾರಟೈಂನ್ ಮಾಡಬೇಕು

  • ದಕ್ಷಿಣ ಆಫ್ರಿಕಾ, ಹಾಂಕಾಂಗ್, ಬೋಟ್ಸ್ವಾನ ದೇಶದಿಂದ 15 ದಿನಗಳ ಕೆಳಗೆ ರಾಜ್ಯಕ್ಕೆ ಎಂಟ್ರಿ ಕೊಟ್ಟವರನ್ನ ಪತ್ತೆ ಮಾಡಿ ಕೋವಿಡ್ ಟೆಸ್ಟ್ ಮಾಡಿಸಬೇಕು

  • ರಾಜ್ಯದಲ್ಲಿ ಸದ್ಯ ಇರುವ ಸಕ್ರಿಯ ಪ್ರಕರಣಗಳ ಕಂಟ್ರೋಲ್ ಮಾಡಬೇಕು

  • ವಿಶೇಷ ಗುಂಪುಗಳನ್ನ ಮಾಡಿ ಮಾರ್ಕೆಟ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ
    ಕೋವಿಡ್ ಟೆಸ್ಟ್ ಮಾಡಬೇಕು

  • ಟೆಸ್ಟಿಂಗ್ ಸಂಖ್ಯೆ ಹೆಚ್ಚಿಸಿ ರ್ಯಾಂಡಮ್ ಚೆಕ್ ಮಾಡಬೇಕು

  • ಮನೆ ಮನೆಗೆ ಲಸಿಕೆ ನೀಡುವಕಾರ್ಯಕ್ರಮ ಮಾಡಬೇಕು

  • ಎರಡನೇ ಡೋಸ್ ಪಡೆಯದವರನ್ನು ಪತ್ತೆ ಮಾಡಿ ವ್ಯಾಕ್ಸಿನ್ ಹಾಕಬೇಕು

  • ಕೋವಿಡ್ ರೂಲ್ಸ್ ಪಾಲನೇಯನ್ನು ಮತ್ತೆ ಕಠಿಣವಾಗಿ ಅನುಷ್ಠಾನ ಮಾಡಬೇಕು

  • ಕೇರಳ ಹಾಗೂ ಮಹಾರಾಷ್ಟ್ರದಿಂದ ಬರೊ ಪ್ರಯಾಣಿಕರ ಮೇಲೆ ಹಚ್ಚು ಗಮನ ವಹಿಸಬೇಕು


ಇದನ್ನು : Second PU Exam: ಇಂದಿನಿಂದ ಪಿಯು ವಿದ್ಯಾರ್ಥಿಗಳಿಗೆ ಮಧ್ಯ ವಾರ್ಷಿಕ ಪರೀಕ್ಷೆ, ಈ ನಿಯಮಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ

ಕೊರೋನಾ ಆತಂಕದ ನಡುವೆ ಇಂದು ಪಿಯು ಪರೀಕ್ಷೆ

ಕೊರೋನಾ ರೂಪಾಂತರ ಹೊಸ ಓಮಿಕ್ರಾನ್ ಆತಂಕದ ನಡುವೆಯೇ ಇಂದು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಮಧ್ಯ ವಾರ್ಷಿಕ ಪರೀಕ್ಷೆ ನಡೆಯುತ್ತಿದೆ. ಕೋವಿಡ್ ಸೋಂಕು ತಗುಲಿದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗುವಂತೆ ಒತ್ತಡ ಹೇರಬಾರದು ಎಂದು ಪಿಯು ಬೋರ್ಡ್​ ಎಲ್ಲಾ ಕಾಲೇಜುಗಳಿಗೆ ಸೂಚನೆ ನೀಡಿದೆ. ಈ ನಿಯಮ ಉಲ್ಲಂಘಿಸಿ ಸೋಂಕಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವಂತೆ ಒತ್ತಡ ಹಾಕಿದರೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದೆ.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags