Kannada News Now

1.8M Followers

ರಾಜ್ಯದ 'ಸರ್ಕಾರಿ ನೌಕರ'ರಿಗೆ ಭರ್ಜರಿ ಗುಡ್ ನ್ಯೂಸ್: ಮುಂಬಡ್ತಿಯ ಮಿತಿ ಶೇ.25 ರಿಂದ 30ರಷ್ಟು ಹೆಚ್ಚಿಸಿ ಸರ್ಕಾರ ಆದೇಶ

11 Dec 2021.10:29 AM

ಬೆಂಗಳೂರು: ರಾಜ್ಯ ಸರ್ಕಾರದಿಂದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ಭರ್ತಿಗೆ ಸಂಬಂಧ ಇದ್ದಂತ ರಿಕ್ತ ಸ್ಥಾನ ಆಧಾರಿತ ವರ್ಗೀಕರಣವನ್ನು ರದ್ದು ಪಡಿಸಿದ್ದು, ಇದರ ಬದಲಾಗಿ ಹುದ್ದೆ ಆಧಾರಿತ ( ಪೋಸ್ಟ್ ಬೇಸ್ಡ್ ) ವರ್ಗೀಕರಣಕ್ಕೆ ಅವಕಾಶ ನೀಡಲಾಗಿದೆ.

ಅಲ್ಲದೇ ಮುಂಬಡ್ತಿಗೆ ಇದ್ದಂತ ಶೇ.25ರ ಮಿತಿಯನ್ನು ಶೇ.30ಕ್ಕೆ ಹೆಚ್ಚಳ ಮಾಡಿ ಆದೇಶಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.

ವಿದ್ಯಾರ್ಥಿಗಳೇ ಗಮನಿಸಿ: ಡಿ.ಫಾರ್ಮ್ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಿ.ಹೇಮಲತ ಅಧಿಕೃತ ಜ್ಞಾಪನೆಯಲ್ಲಿ ಮಾಹಿತಿ ನೀಡಿದ್ದು, ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವಾಗ ರಿಕ್ತ ಸ್ಥಾನ ಆಧಾರಿತ ವರ್ಗೀಕರಣದ ಬದಲಾಗಿ ಹುದ್ದೆ ಆಧಾರಿತ ವರ್ಗೀಕರಣ ಮಾಡುವಂತೆ ಸೂಚಿಸಿದ್ದಾರೆ.

ವಿದ್ಯಾರ್ಥಿಗಳೇ ಗಮನಿಸಿ: KEAಯಿಂದ 'ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್' ದಾಖಲಾತಿಗೆ ಅರ್ಜಿ ಆಹ್ವಾನ

ರಾಜ್ಯ ಸರ್ಕಾರದ ಈ ಆದೇಶದಿಂದಾಗಿ ಸರ್ಕಾರಿ ನೌಕರರ ಬಡ್ತಿ ಸಮಸ್ಯೆಗೆ ಇದ್ದಂತ ದೊಡ್ಡ ಸಮಸ್ಯೆಗೆ ಪರಿಹಾರ ಸಿಕ್ಕಂತೆ ಆಗಿದೆ. ಇದರಿಂದಾಗಿ ನೌಕರರಿಗೆ ಮುಂಬಡ್ತಿ ಅವಕಾಶಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವಂತೆ ಆಗಿದೆ.

BIG BREAKING NEWS: ಚಿಕ್ಕಮಗಳೂರಿನ ಮತ್ತೊಂದು ಶಾಲೆಯಲ್ಲಿ ಕೊರೋನಾ ಸ್ಪೋಟ: ಶಿಕ್ಷಕರು, ವಿದ್ಯಾರ್ಥಿಗಳು ಸೇರಿ 11 ಮಂದಿಗೆ ಕೋವಿಡ್ ದೃಢ

ಅಂದಾಹಗೇ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಈ ಸಂಬಂಧ ಮನವಿ ಮಾಡಲಾಗಿತ್ತು. ಈ ಮನವಿ ಪರಿಶೀಲಿಸಿದಂತ ಸಿಎಂ, ಸಿವಿಲ್ ಸೇವೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವಾಗ ರಿಕ್ತ ಸ್ಥಾನ ಆಧಾರಿತ ವರ್ಗೀಕರಣದ ಬದಲಾಗಿ ಹುದ್ದೆ ವರ್ಗೀಕರಣವನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಸೂಚನೆಯ ಹಿನ್ನಲೆಯಲ್ಲಿ ರಿಕ್ತ ಸ್ಥಆನದ ಹುದ್ದೆಗಳನ್ನು ಪೋಸ್ಟ್ ಬೇಸ್ಡ್ ಹುದ್ದೆಗಳನ್ನಾಗಿ ವರ್ಗೀಕರಿಸಿ, ಮುಂಬಡ್ತಿಗೆ ಪರಿಗಣಿಸಲಾಗಿದೆ.

BIG NEWS: ರಾಜ್ಯ ಸರ್ಕಾರದಿಂದ 'ನೇರನೇಮಕಾತಿ ಮತ್ತು ಮುಂಬಡ್ತಿ'ಯ ಈ ಕ್ರಮ ರದ್ದು: ನೂತನ ಮಾರ್ಗಸೂಚಿ ಪ್ರಕಟ

ಈ ಆದೇಶದಿಂದಾಗಿ ರಾಜ್ಯದ ಎಲ್ಲಾ ಇಲಾಖೆಗಳಲ್ಲಿನ ಸರ್ಕಾರಿ ನೌಕರರಿಗೆ ಶೇ.25 ರಿಂದ 30ರವೆರೆಗ ಮುಂಬಡ್ತಿಗೆ ಅವಕಾಶಗಳು ಹೆಚ್ಚಾಗಲಿವೆ. ಪ್ರತಿ ಇಲಾಖೆಯ ಸಾವಿರಾರೂ ನೌಕರರಿಗೆ ಮುಂಬಡ್ತಿ ಅವಕಾಶ ದೊರೆಯುವಂತೆ ಆಗಲಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags