Zee News ಕನ್ನಡ

352k Followers

Good News: ಶೀಘ್ರದಲ್ಲಿಯೇ ನೌಕರರಿಗೆ ಸಿಗಲಿದೆ ಹಳೆ ಪೆನ್ಷನ್ ಯೋಜನೆಯ ಲಾಭ! ಸರ್ಕಾರ ನಡೆಸುತ್ತಿದೆ ಈ ಸಿದ್ಧತೆ

13 Dec 2021.7:11 PM

7th Pay Commission Updates: ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಶೀಘ್ರದಲ್ಲೇ ಅವರು ಹಳೆಯ ಪಿಂಚಣಿ (Old Pension) ಯೋಜನೆ ಅಂದರೆ ಓಲ್ಡ್ ಪೆನ್ಷನ್ ಸ್ಕೀಮ್ ಪ್ರಯೋಜನವನ್ನು ಪಡೆಯುವ ಸಾಧ್ಯತೆ ಇದೆ.

ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನೌಕರರ ಬಹುದಿನಗಳ ಬೇಡಿಕೆಯನ್ನು ಪರಿಗಣಿಸುತ್ತಿದೆ. ಹಳೆಯ ಪಿಂಚಣಿ ಯೋಜನೆ (OPS) ಕುರಿತು ಕೇಂದ್ರದ ಕಾನೂನು ಸಚಿವಾಲಯದಿಂದ ಅಭಿಪ್ರಾಯಗಳನ್ನು ಕೇಳಲಾಗಿದ್ದು, ಪ್ರಸ್ತುತ ಸಚಿವಾಲಯದ ಉತ್ತರಕ್ಕಾಗಿ ಕಾಯಲಾಗುತ್ತಿದೆ.

ಕಾನೂನು ಸಚಿವಾಲಯದ ಉತ್ತರದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು
ಡಿಸೆಂಬರ್ 31, 2003 ರಂದು ಅಥವಾ ಅದಕ್ಕೂ ಮೊದಲು ನೇಮಕಾತಿ ಜಾಹೀರಾತುಗಳನ್ನು ಅನುಸರಿಸಿರುವ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (OPS) ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ರಾಜ್ಯ ಸಚಿವ ಮತ್ತು ಪ್ರಧಾನ ಮಂತ್ರಿ ಕಚೇರಿಯ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಪ್ರಕಾರ, ಈ ವಿಷಯದ ಬಗ್ಗೆ ಕಾನೂನು ಸಚಿವಾಲಯದಿಂದ ಅಭಿಪ್ರಾಯ ಕೇಳಲಾಗಿದೆ. ಇಲಾಖೆಯ ಉತ್ತರ ಬಂದ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ. .

ಯಾವ ಉದ್ಯೋಗಿಗಳು ಪ್ರಯೋಜನಗಳನ್ನು ಪಡೆಯಬಹುದು?
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕೇಂದ್ರ ಸರ್ಕಾರವು ಈ ವಿಷಯವನ್ನು ಕಾನೂನು ಸಚಿವಾಲಯದ ಮುಂದೆ ಪ್ರಸ್ತುತ ಪಡಿಸಿದೆ ಎಂದು ಕೇಂದ್ರ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ಹಣಕಾಸು ಸೇವೆಗಳ ಇಲಾಖೆ, ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoP&PW) ಜನವರಿ 01, 2004 ರಂದು ಅಥವಾ ಮೊದಲು ಯಾರ ನೇಮಕಾತಿಗಾಗಿ ಜಾಹೀರಾತನ್ನು ಹೊರಡಿಸಲಾಗಿದೆಯೋ ಆ ಉದ್ಯೋಗಿಗಳನ್ನು NPS ವ್ಯಾಪ್ತಿಯಿಂದ ಹೊರಗಿಡುವ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಅವರು ಹೇಳಿದ್ದರೆ. ವೃದ್ಧಾಪ್ಯ ಮಿತಿಯನ್ನು ನೀಡಲಾಗುತ್ತದೆ. ಪಿಂಚಣಿ ಯೋಜನೆ (OPS) ಅಡಿಯಲ್ಲಿ ರಕ್ಷಣೆ ಪಡೆಯಬಹುದು. ಈ ಸಮಸ್ಯೆ ಒಂದು ವೇಳೆ ಬಗೆಹರಿದರೆ, ಪಿಂಚಣಿಯಲ್ಲಿ ದೊಡ್ಡ ಲಾಭವನ್ನು ಅವರು ಕಾಣಬಹುದು.

ಸಂಸತ್ತಿನಲ್ಲಿ ಈ ಕುರಿತು ಪ್ರಶ್ನಿಸಲಾಗಿದೆ
ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ಸಚಿವರು ಈ ಉತ್ತರ ನೀಡಿದ್ದಾರೆ. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಸುಪ್ರೀಂ ಕೋರ್ಟ್‌ನ ತೀರ್ಪಿನ ದೃಷ್ಟಿಯಿಂದ ಆ ನೌಕರರನ್ನು ಎನ್‌ಪಿಎಸ್‌ನಿಂದ ಹೊರಗಿಟ್ಟು, ಹಳೆಯ ಪಿಂಚಣಿ ಯೋಜನೆಗೆ ಸೇರಿಸಲು ಹಣಕಾಸು ಸೇವೆಗಳ ಇಲಾಖೆ (DFS) ಮತ್ತು ಕಾನೂನು ಸಚಿವಾಲಯದ ಅಭಿಪ್ರಾಯಗಳನ್ನು ಕೇಳಿದೆಯೇ ಎಂದು ಅವರನ್ನು ಪ್ರಶ್ನಿಸಲಾಗಿತ್ತು. 31 ಡಿಸೆಂಬರ್ 2003 ರಂದು ಅಥವಾ ಮೊದಲು ಈ ನೌಕರರ ನೇಮಕಾತಿ ಜಾಹೀರಾತುಗಳನ್ನು ನೀಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೆ ಸಂಬಂಧಿಸಿದ ಒಂದು ಮಹತ್ವದ ಅಪ್ಡೇಟ್ ಪ್ರಕಟ, ನೀವೂ ತಿಳಿದುಕೊಳ್ಳಿ

ಹಳೆಯ ಪಿಂಚಣಿಯ ಪ್ರಯೋಜನಗಳು CAPF ನಲ್ಲಿ ಲಭ್ಯವಿರುವುದಿಲ್ಲ
ಇತ್ತೀಚೆಗಷ್ಟೇ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಹಳೆಯ ಪಿಂಚಣಿ ಯೋಜನೆಯ ಲಾಭವನ್ನು ನೀಡುವ ಆಲೋಚನೆ ಇಲ್ಲ ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು. ಜನವರಿ 1, 2004 ರ ನಂತರ ಅರೆಸೇನಾಪಡೆಗೆ ಬಂದ ಸೈನಿಕರಿಗೆ OPS (Old Pension Scheme) ಲಾಭ ಸಿಗುತ್ತದೆಯೇ ಅಥವಾ ಇಲ್ಲವೇ ಎಂದು ಅವರನ್ನು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು, ಕೇಂದ್ರ ನಾಗರಿಕ ಸೇವೆಗಳ ಪಿಂಚಣಿ ನಿಯಮಗಳು 1972 ರ ಅಡಿಯಲ್ಲಿ, ಅರೆಸೇನಾ ಸಿಬ್ಬಂದಿ ಪಿಂಚಣಿ ಮತ್ತು ಇತರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಆದರೆ, ಅವರು ಹೊಸ ಪಿಂಚಣಿ ಯೋಜನೆಯಲ್ಲಿ (New Pension Scheme) ಉಳಿಯಬೇಕಾಗುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ-ಸರ್ಕಾರದ ಗಿಫ್ಟ್: 86 ಲಕ್ಷ ಪಿಂಚಣಿದಾರರ ಖಾತೆಗೆ 3 ತಿಂಗಳ ಪಿಂಚಣಿ

ಹೊಸ ಪಿಂಚಣಿ ಯೋಜನೆಯಲ್ಲಿ ಕಡಿಮೆ ಪ್ರಯೋಜನಗಳಿವೆ
ಹಳೆಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದಲ್ಲಿ ಆಂದೋಲನಗಳು ನಡೆಯುತ್ತಿವೆ. ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲು ಸರ್ಕಾರಿ ನೌಕರರು ಒಂದೇ ವೇದಿಕೆಯಲ್ಲಿ ಒಗ್ಗೂಡಲು ಆರಂಭಿಸಿದ್ದಾರೆ. ಭಾನುವಾರ ವಿವಿಧ ಇಲಾಖೆಗಳ ನೌಕರರ ಸಂಘಟನೆಗಳು ಸಭೆ ನಡೆಸಿ ಕಾರ್ಯತಂತ್ರ ರೂಪಿಸಿದ್ದವು. 2010ರ ನಂತರ ಸರ್ಕಾರ ಹೊಸ ಪಿಂಚಣಿ ಯೋಜನೆಯಡಿ (NPS) ನೌಕರರನ್ನು ನೇಮಿಸಿದೆ. ಈ ಯೋಜನೆಯಲ್ಲಿ, ಹಳೆಯ ಯೋಜನೆಗೆ ಹೋಲಿಸಿದರೆ ನೌಕರರು ಕಡಿಮೆ ಪ್ರಯೋಜನಗಳಿವೆ ಎನ್ನಲಾಗುತ್ತಿದೆ. ಇದರಿಂದ ಅವರ ಭವಿಷ್ಯ ಭದ್ರವಾಗಿಲ್ಲ. ನಿವೃತ್ತಿಯ ನಂತರ ಸಿಗುವ ಹಣಕ್ಕೆ ಸರ್ಕಾರ ತೆರಿಗೆ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ-EXCLUSIVE: ಸರ್ಕಾರಿ ನೌಕರರಿಗೆ ದೊಡ್ಡ ಉಡುಗೊರೆ ನೀಡಿದ ಕೇಂದ್ರ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Zee News Kannada

#Hashtags