Kannada News Now

1.8M Followers

ರಾಜ್ಯದ 'ವಿಕಲಚೇತನ'ರಿಗೆ ಮಹತ್ವದ ಮಾಹಿತಿ: KSRTCಯಿಂದ 'ರಿಯಾಯಿತಿ ದರದ ಬಸ್ ಪಾಸ್'ಗೆ ಅರ್ಜಿ ಆಹ್ವಾನ

28 Dec 2021.10:44 AM

ಬೆಂಗಳೂರು: ಕೆ ಎಸ್ ಆರ್ ಟಿ ಸಿಯಿಂದ 2022ನೇ ಸಾಲಿಗೆ ವಿಕಲಚೇತನರಿಂದ ( Physically Handicaps ) ರಿಯಾಯಿತಿ ದರದ ಬಸ್ ಪಾಸ್ ಗಾಗಿ ( KSRTC Bus Pass ) ಅರ್ಜಿಯನ್ನು ಆಹ್ವಾನಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ( KSRTC ), 2022ನೇ ಸಾಲಿಗೆಗಾಗಿ ದಿನಾಂಕ 01-01-2022 ರಿಂದ 31-12-2022ರವೆರೆಗೆ ಮಾನ್ಯತೆ ಇರುವಂತೆ ವಿಕಲಚೇತನರಿಗೆ ಬಸ್ ಪಾಸ್ ವಿತರಿಸಬೇಕಿದೆ.

ಹೀಗಾಗಿ ಬಸ್ ಪಾಸ್ ಗಾಗಿ ಅರ್ಜಿಯನ್ನು ಆಹ್ವಾನಿಸಿರೋದಾಗಿ ತಿಳಿಸಿದೆ.

COVID Vaccine Guidelines: 'ಕೇಂದ್ರ ಆರೋಗ್ಯ ಸಚಿವಾಲಯ'ದಿಂದ ಮಕ್ಕಳಿಗೆ ಲಸಿಕೆ, ಬೂಸ್ಟರ್ ಡೋಸ್ ಬಗ್ಗೆ 'ಮಾರ್ಗಸೂಚಿ ಪ್ರಕಟ'

ವಿಕಲಚೇತನರು ರಿಯಾಯಿತಿದರದ ಬಸ್ ಪಾಸ್ ಗಾಗಿ ( KSRTC Bus Pass ) ಸೇವಾಸಿಂಧು ಪೋರ್ಟಲ್ ( Sevasindhu Portal ) ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. 2021ನೇ ಸಾಲಿನಲ್ಲಿ ವಿತರಿಸಲಾಗಿರುವ ಮತ್ತು ದಿನಾಂಕ 31-12-2021ರವರೆಗೆ ಮಾನ್ಯತೆ ಇರೋ ಬಸ್ ಪಾಸ್ ಗಳನ್ನು ದಿನಾಂಕ 28-02-2022ರವರೆಗೆ ಮಾತ್ಯತೆ ಮಾಡಲಾಗುವುದು ಎಂದು ಹೇಳಿದೆ.

ದಿನಾಂಕ 17-01-2022ರಿಂದ ಹೊಸ ಬಸ್ ಪಾಸ್ ವಿತರಿಸಲಾಗುತ್ತದೆ. ನವೀಕರಣ ಮತ್ತು ನೂತನ ಪಾಸುಗಳಿಗೆ ರೂ.660 ಶುಲ್ಕವನ್ನು ನಿಗದಿಪಡಿಸಲಾಗಿದೆ. ಇದನ್ನು ನಗದಾಗಿ ಇಲ್ಲವೇ ಡಿಡಿ ಮೂಲಕ ಪಾವತಿಸಬಹುದಾಗಿದೆ ಎಂದು ತಿಳಿಸಿದೆ.

India Covid19 Report: ದೇಶಾದ್ಯಂತ ಮುಂದುವರೆದೆ ಕೊರೋನಾ ಆರ್ಭಟ: ಇಂದು 6,358 ಜನರಿಗೆ ಕೋವಿಡ್ ದೃಢ

ದಿನಾಂಕ 28-02-2022ರವರೆಗೆ 2021ನೇ ಸಾಲಿನಲ್ಲಿ ವಿತರಿಸಲಾಗಿರುವ ವಿಕಲಚೇತನರ ಪಾಸುಗಳ ನವೀಕರಣಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಅದರಕ್ಕೂ ಮುನ್ನವೇ ವಿಕಲಚೇತನರು ಸೇವಾ ಸಿಂಧು ಪೋರ್ಟಲ್ ನಲ್ಲಿ ಹೊಸ ಹಾಗೂ ನವೀಕೃತ ರಿಯಾಯಿತಿ ದರದ ಬಸ್ ಪಾಸ್ ಗೆ ಅರ್ಜಿ ಸಲ್ಲಿಸಿ ಪಡೆಯುವಂತೆ ಕೆ ಎಸ್ ಆರ್ ಟಿ ಸಿ ತಿಳಿಸಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags