TV9 ಕನ್ನಡ

371k Followers

Aadhaar status: ಆಧಾರ್​ ಸ್ಥಿತಿಯನ್ನು ಆನ್​ಲೈನ್​ನಲ್ಲಿ ತಿಳಿಯುವುದು ಹೇಗೆ? ಇಲ್ಲಿದೆ ಹಂತಹಂತವಾದ ವಿವರಣೆ

10 Jan 2022.2:33 PM

ಆಧಾರ್​ಗೆ ಅರ್ಜಿ ಸಲ್ಲಿಸಿದ್ದರೆ ಅಥವಾ ಮಾಹಿತಿ ಅಪ್​ಡೇಟ್ ಮಾಡಲು ಅರ್ಜಿ ಹಾಕಿದ್ದಲ್ಲಿ ಅದರ ಸ್ಥಿತಿಯನ್ನು ಆನ್​ಲೈನ್​ನಲ್ಲಿ ಪರಿಶೀಲಿಸುವುದು ಹೇಗೆ ಎಂಬುದರ ಹಂತಹಂತವಾದ ವಿವರಣೆ ಇಲ್ಲಿದೆ.

ಆಧಾರ್​ ಕಾರ್ಡ್​ಗಾಗಿ ಅರ್ಜಿ ಹಾಕಿದ್ದೀರಾ ಅಥವಾ ಅದರಲ್ಲಿ ಕೆಲವು ಮಾಹಿತಿ ಅಪ್​ಡೇಟ್​ ಮಾಡಬೇಕು ಅಂತೇನಾದರೂ ಅಪ್ಲೈ ಮಾಡಿದ್ದೀರಾ?

ನಿಮಗೆ ಆ ಅರ್ಜಿಯ ಸ್ಥಿತಿ ಏನು ಎಂದು ತಿಳಿದುಕೊಳ್ಳಬೇಕಿದೆಯಾ? ನಿಮ್ಮ ಮನೆಯಲ್ಲೇ ಸ್ಮಾರ್ಟ್​ಫೋನ್ ಅಥವಾ ಕಂಪ್ಯೂಟರ್​ ಮೂಲಕ ಕೆಲವೇ ಸರಳ ಹಂತಗಳಲ್ಲಿ ಆ ಅರ್ಜಿಯ ಸ್ಥಿತಿಯನ್ನು ನೀವು ತಿಳಿಯಬಹುದು. ಆಧಾರ್​ ಸಂಖ್ಯೆಯು 12 ಅಂಕಿಯ ವಿಶಿಷ್ಟ ಗುರುತಾಗಿದ್ದು, ಅದನ್ನು ಭಾರತ ಸರ್ಕಾರ ತನ್ನ ಪ್ರತಿ ನಾಗರಿಕರಿಗೆ ನೀಡುತ್ತದೆ. ಎಲ್ಲ ಕಡೆಯೂ ಗುರುತಿನ ಸಲುವಾಗಿ ಇದನ್ನು ಬಳಸಲಾಗುತ್ತದೆ. ಅದು ಬ್ಯಾಂಕ್ ಖಾತೆ ತೆರೆಯುವುದರಿಂದ ಮೊದಲುಗೊಂಡು ಸಾಮಾಜಿಕ ಯೋಜನೆಗಳ ತನಕ ಹಾಗೂ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರೆಗೆ ಬಳಕೆ ಆಗುತ್ತದೆ. ಆದರೆ ಆಧಾರ್​ ಅನ್ನು ಅಧಿಕೃತ ಉದ್ದೇಶಗಳಿಗಾಗಿ ಬಳಸಬೇಕು ಅಂತಾದಾಗ ಅದನ್ನು ಸರಿಯಾದ ಮಾಹಿತಿಯೊಂದಿಗೆ ಅಪ್​ಡೇಟ್ ಮಾಡಬೇಕು.

ಹೊಸ ಆಧಾರ್​ಗಾಗಿ ಆಧಾರ್ ಸೇವಾ ಕೇಂದ್ರದಲ್ಲಿ ನೋಂದಣಿ ಮಾಡಿದ ನಂತರ ಯುಐಡಿಎಐ ವೆಬ್​ಸೈಟ್​ನಲ್ಲಿ ಅದರ ಸ್ಥಿತಿಗತಿ ಪರಿಶೀಲಿಸಬಹುದು. ಅದಕ್ಕಾಗಿ ಎನ್​ರೋಲ್​ಮೆಂಟ್ ಐಡಿ ಮತ್ತು ದಿನಾಂಕವನ್ನು ನಮೂದಿಬೇಕಾಗುತ್ತದೆ. ಆನ್​ಲೈನ್​ನಲ್ಲಿ ಅರ್ಜಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ ಎಂಬ ಹಂತಹಂತವಾದ ಮಾಹಿತಿ ಹೀಗಿದೆ.

– ಆಧಾರ್ ಅರ್ಜಿ ಸ್ಥಿತಿಯನ್ನು ತಿಳಿಯಲು ಮೊದಲಿಗೆ ಯುಐಎಡಿಐ ಅಧಿಕೃತ ವೆಬ್​ಸೈಟ್​ ಲಿಂಕ್- https://resident.uidai.gov.inಗೆ ತೆರಳಬೇಕು.
– “My Aadhaar” ಎಂಬುದರ ಮೇಲೆ ಒತ್ತಬೇಕು.
– ಆ ಮೂಲಕ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ “Get Aadhaar” ವಿಭಾಗದ ಅಡಿಯಲ್ಲಿ Check Aadhaar Status ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
– ಈಗ ಎನ್​ರೋಲ್​ಮೆಂಟ್ ಐಡಿ ಮತ್ತು ದಿನಾಂಕವನ್ನು ನಮೂದಿಸಬೇಕು.
– “Captcha” ವೆರಿಫೈ ಮಾಡಿ ಖಾತ್ರಿ ಪಡಿಸಬೇಕು
– ಅಂತಿಮವಾಗಿ “Check Status” ಎಂಬುದನ್ನು ಒತ್ತಬೇಕು.

ಎನ್​ರೋಲ್​ಮೆಂಟ್ ಐಡಿ ಕಳೆದುಕೊಂಡಿದ್ದಲ್ಲಿ ಆಧಾರ್ ಅರ್ಜಿಯ ಸ್ಥಿತಿ ಪರಿಶೀಲನೆ ಹೇಗೆ?
ಆಧಾರ್ ಸ್ಥಿತಿಯನ್ನು ಆನ್​ಲೈನ್​ನಲ್ಲಿ ಪರೀಕ್ಷಿಸುವುದಕ್ಕೆ ಇರುವ ಏಕೈಕ ಆಯ್ಕೆ ಎನ್​ರೋಲ್​ಮೆಂಟ್ ಐಡಿ. ಒಂದು ವೇಳೆ ಅದನ್ನು ಕಳೆದುಕೊಂಡರೆ ಏನು ಮಾಡುವುದು? ಯೋಚಿಸುವ ಅಗತ್ಯ ಇಲ್ಲ. ಯುಐಡಿಎಐ ಅಧಿಕೃತ ವೆಬ್​ಸೈಟ್​ಗೆ ತೆರಳಿ ಇಐಡಿ ಪಡೆಯಬಹುದು.

ಇಐಡಿ ಪಡೆಯುವುದು ಹೇಗೆ?
ಹಂತ 1: ಯುಐಎಡಿಐ ಅಧಿಕೃತ ವೆಬ್​ಸೈಟ್​ ಲಿಂಕ್- https://resident.uidai.gov.inಗೆ ತೆರಳಬೇಕು.
ಹಂತ 2: “My Aadhaar” ಎಂಬುದರ ಮೇಲೆ ಒತ್ತಬೇಕು.
ಹಂತ 3: “Get Aadhaar” ಎಂಬುದರ ಅಡಿಯಲ್ಲಿ “Retrieve Lost or Forgotten EID/UID” ಕ್ಲಿಕ್ ಮಾಡಬೇಕು.
ಹಂತ 4: ಆ ಮೂಲಕ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ಆಧಾರ್ ಸಂಖ್ಯೆಯನ್ನು, ಪೂರ್ತಿ ಹೆಸರು, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ ನಮೂದಿಸಬೇಕು.
ಹಂತ 5: Captcha ಖಾತ್ರಿಪಡಿಸಬೇಕು ಮತ್ತು Send OTP ಎಂಬುದರ ಮೇಲೆ ಒತ್ತಬೇಕು.
ಹಂತ 6: ಇಐಡಿ ಪಡೆಯುವುದಕ್ಕೆ ಒಟಿಪಿ ನಮೂದಿಸಬೇಕು.
ಹಂತ 7: ಒಂದು ಸಲ ಇಐಡಿ ಪಡೆದ ಮೇಲೆ ಮೇಲ್ಕಂಡ ಹಂತಗಳನ್ನು ಅನುಸರಿಸಿ ಆನ್​ಲೈನ್​ನಲ್ಲಿ ಆಧಾರ್ ಸ್ಥಿತಿಯನ್ನು ತಿಳಿಯಬಹುದು.

ಇದನ್ನೂ ಓದಿ: PAN- Aadhaar Linking: ನಿಗದಿತ ಗಡುವಿನೊಳಗೆ ಆಧಾರ್- ಪ್ಯಾನ್ ಜೋಡಣೆ ಆಗದಿದ್ದಲ್ಲಿ ರೂ. 10 ಸಾವಿರ ದಂಡ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: TV9 Kannada