Kannada News Now

1.8M Followers

Salary Hike : ಸರ್ಕಾರಿ ನೌಕರರಿಗೆ ಡಬಲ್ ಧಮಾಕ : ʼ23.29ʼರಷ್ಟು ವೇತನ ಹೆಚ್ಚಳ, ನಿವೃತ್ತಿ ವಯಸ್ಸು 62ಕ್ಕೆ ಏರಿಕೆ

11 Jan 2022.3:23 PM

ನವದೆಹಲಿ : ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ಸಿಕ್ಕಿದ್ದು, ಹೊಸ ವರ್ಷದಲ್ಲಿ ತನ್ನ ನೌಕರರಿಗೆ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಹೌದು, ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಮತ್ತು ವೇತನ ಎರಡರಲ್ಲೂ ಹೆಚ್ಚಳವಾಗಿದೆ. ಅದ್ರಂತೆ, ಸರ್ಕಾರವು ನೌಕರರ ವೇತನವನ್ನ 23.29% ಹೆಚ್ಚಿಸಿದ್ದು, ನಿವೃತ್ತಿ ವಯಸ್ಸನ್ನ 60 ವರ್ಷದಿಂದ 62 ವರ್ಷಕ್ಕೆ ಹೆಚ್ಚಿಸಲಾಗಿದೆ.

ಆಂಧ್ರಪ್ರದೇಶ ಸರ್ಕಾರ ತನ್ನ ಉದ್ಯೋಗಿಗಳಿಗೆ ಈ ಭರ್ಜರಿ ಸುದ್ದಿ ನೀಡಿದೆ.

ಅಸಲಿಗೆ, ರಾಜ್ಯ ಸರ್ಕಾರ ತನ್ನ ನೌಕರರಿಗೆ ಡಬಲ್ ಉಡುಗೊರೆ ನೀಡಿದೆ. ನೌಕರರ ವೇತನದಲ್ಲಿ ಶೇ.23.29ರಷ್ಟು ಹೆಚ್ಚಳ ಘೋಷಿಸಲಾಗಿದೆ. ಇದರೊಂದಿಗೆ ನೌಕರರ ನಿವೃತ್ತಿ ವಯಸ್ಸು ಕೂಡ 60 ವರ್ಷದಿಂದ 62 ವರ್ಷಕ್ಕೆ ಏರಿಕೆಯಾಗಿದೆ.

ನೌಕರರ ಸಂಘದ ಜೊತೆ ಸಭೆ..!
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರು ನೌಕರರ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ವಿವಿಧ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೀಗ ಹೆಚ್ಚಿಸಿದ ವೇತನದ ಲಾಭವನ್ನ ರಾಜ್ಯದ ನೌಕರರು ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ಘೋಷಿಸಿದರು. ಈ ಸಭೆಯಲ್ಲಿ ನೌಕರರ ಇತರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜೂನ್ 30ರವರೆಗೆ ಕಾಲಾವಕಾಶ ನೀಡಲಾಯಿತು.

ʼ21 ಕೋಟಿʼ ದಾಟಿದ ʼe-SHRAM Cardʼ ನೋಂದಾಣಿ : ಯಾವ ರಾಜ್ಯ ಫಸ್ಟ್?‌ ಇಲ್ಲಿದೆ ಮಾಹಿತಿ..!

ಆದಾಯ ತೆರಿಗೆಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ: ತೆರಿಗೆ ಪ್ರಮಾಣ ಕಡಿತದ ಬಗ್ಗೆ ಬಜೆಟ್ ನಲ್ಲಿ ಘೋಷಣೆ..!?

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags