Kannada News Now

1.8M Followers

ಮನೆಯಲ್ಲೇ ಕುಳಿತು ʼe-SHRAM Cardʼ ಮಾಡೋದ್ಹೇಗೆ ಗೊತ್ತಾ? ಈ ಸುಲಭ ಹಂತಗಳನ್ನ ಅನುಸರಿಸಿ | e-SHRAM Card Registration

11 Jan 2022.1:59 PM

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಈ ಯೋಜನೆಯನ್ನ ಕೇಂದ್ರ ಸರ್ಕಾರ (Central Government) ನಡೆಸಿದ್ದು, ಅಸಂಘಟಿತ ವಲಯ(Unorganized Sector)ದಲ್ಲಿ ಕೆಲಸ ಮಾಡುವ ಜನರಿಗಾಗಿ ಇದನ್ನು ನಡೆಸಲಾಗುತ್ತದೆ. ಇದಕ್ಕಾಗಿ ಸರ್ಕಾರ, ಇ-ಶ್ರಮ್ ಪೋರ್ಟಲ್ (E-Shram Portal) ಅನ್ನು ಸಹ ಪ್ರಾರಂಭಿಸಿದ್ದು, ಈ ಮೂಲಕ ನಿಮ್ಮನ್ನ ನೀವು ಅದಕ್ಕಾಗಿ (Auto-Registration) ನೋಂದಾಯಿಸಿಕೊಳ್ಳಬಹುದು.

ಪ್ರಯೋಜನಗಳು ಇಲ್ಲಿವೆ..!
* ದೊಡ್ಡ ಪ್ರಯೋಜನವೆಂದ್ರೆ, ಯಾವುದೇ ಕಾರ್ಮಿಕನಿಗೆ ಯಾವುದೇ ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ.
* ಈ ಇ-ಶ್ರಮ್ ಕಾರ್ಡ್ʼನಲ್ಲಿ ನೀವು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (Pradhan Mantri Suraksha Bima Yojana) ಅಡಿಯಲ್ಲಿ 2 ಲಕ್ಷ ರೂ.ಗಳವರೆಗೆ ವಿಮಾ ರಕ್ಷಣೆಯನ್ನ ಪಡೆಯುತ್ತೀರಿ.
* ಇನ್ನೊಂದೆಡೆ ಅಪಘಾತದಲ್ಲಿ ಕಾರ್ಮಿಕನೊಬ್ಬ ಸಾವನ್ನಪ್ಪಿದ್ರೆ, 2 ಲಕ್ಷ ರೂ. ಅಂಗವೈಕಲ್ಯವಾದ್ರೆ 1 ಲಕ್ಷ ರೂ. ನೀಡಲಾಗುತ್ತೆ.

ಇ-ಲೇಬರ್ (E-Labour Registration)ನಲ್ಲಿ ನೀವು ಮೂರು ರೀತಿಯಲ್ಲಿ ನೋಂದಾಯಿಸಬಹುದು. ಮೊದಲ ಮಾರ್ಗವೆಂದರೆ, ಸ್ವಯಂ ನೋಂದಣಿ (Auto Registration) : ನೀವೇ ಅಧಿಕೃತ ವೆಬ್ ಸೈಟ್ʼಗೆ ಭೇಟಿ ನೀಡುವ ಮೂಲಕ ಆನ್ ಲೈನ್ʼನಲ್ಲಿ ನೋಂದಾಯಿಸಿಕೊಳ್ಳಬಹುದು.ಎರಡನೆಯ ಮಾರ್ಗವೆಂದ್ರೆ, ಸಾಮಾನ್ಯ ಸೇವಾ ಕೇಂದ್ರ (CSC) ಮತ್ತು ಮೂರನೇ ಮಾರ್ಗವೆಂದರೆ ರಾಜ್ಯ ಸೇವಾ ಕೇಂದ್ರ.

ನೋಂದಣಿ ಮಾಡುವುದು ಹೇಗೆ..!?
* ನೀವು ಮೊದಲು ಅಧಿಕೃತ ವೆಬ್ ಸೈಟ್ eshram.gov.in ಹೋಗಬೇಕು, ಮತ್ತು ಇಲ್ಲಿ ಇ-ಲೇಬರ್ ಆಯ್ಕೆಯ ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಬೇಕು.
* ನಂತರ ನೀವು ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಭರ್ತಿ ಮಾಡಬೇಕು.
* ನಂತರ ನಿಮ್ಮ ಮೊಬೈಲ್ ನಂಬರ್ʼನಲ್ಲಿ ಒಟಿಪಿ ಯನ್ನು ನಮೂದಿಸಿ.
* ನಂತರ ನೀವು ಉಳಿದ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು, ಮತ್ತು ನಿಮ್ಮ ಫೋಟೋವನ್ನು ಅಪ್ ಲೋಡ್ ಮಾಡಬೇಕು. ಅದರ ನಂತರ, ನಿಮ್ಮ ಇ-ಶ್ರಮ ಕಾರ್ಡ್ ನೋಂದಣಿ ಪೂರ್ಣಗೊಳ್ಳುತ್ತದೆ.

BIGG BREAKING NEWS: ಸಿಎಂ ಬಸವರಾಜ ಬೊಮ್ಮಾಯಿ ಆಸ್ಪತ್ರೆಯಿಂದ ಡಿಸ್ಚಾರ್ಜ್, 1 ವಾರ ಹೋಂ ಕ್ವಾರಂಟೈನ್ | CM Basavaraj Bommai

7th pay Commission : CTG ನಿಯಮದಲ್ಲಿ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ | CTG rules Change

BIGG NEWS : ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಉಲ್ಬಣವಾದರೆ ಕಾಂಗ್ರೆಸ್ ತಬ್ಲಿಘಿಗಳೇ ನೇರ ಹೊಣೆ : ರಾಜ್ಯ ಬಿಜೆಪಿ ಟ್ವೀಟ್

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags