Kannada News Now

1.8M Followers

Teacher Transfer: ಶಿಕ್ಷಕರಿಗೆ ಗುಡ್ ನ್ಯೂಸ್: ವರ್ಗಾವಣೆಗಾಗಿ ನೂತನ ಕೌನ್ಸಿಲಿಂಗ್ ವೇಳಾಪಟ್ಟಿ ಪ್ರಕಟ

14 Jan 2022.06:55 AM

ಬೆಂಗಳೂರು: 2020-21ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ, ಪ್ರಾಥಮಿಕ ಶಾಲಾ ಶಿಕ್ಷಕರು ( Primary School Teacher ) ಮತ್ತು ಪ್ರೌಢ ಶಾಲಾ ಶಿಕ್ಷಕರು ( High School Teacher ), ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗೆ ( Teacher Transfer ) ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

BIGG NEWS: ಕೊರೋನಾ ಹೆಚ್ಚಾದ್ರೆ ಬಿಬಿಎಂಪಿ ವ್ಯಾಪ್ತಿಯ ನರ್ಸಿಂಗ್, ಇನ್ನಿತರ ಕಾಲೇಜು, ಹಾಸ್ಟೆಲ್, ಪಿಜಿ ಬಂದ್ ಮಾಡಿ - ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶ

ಈ ಸಂಬಂಧ ಪರಿಷ್ಕೃತ ವರ್ಗಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿರುವಂತ ಸಾರ್ವಜನಿಕ ಶಿಕ್ಷಣ ಇಲಾಖೆಯು, ನ್ಯಾಯಾಲಾಯ ಪ್ರಕರಣದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಿದ್ದರಿಂದಾಗಿ ಪ್ರೌಢ ಶಾಲಾ ಶಿಕ್ಷಕರ ವೃಂದದ ವಿಭಾಗದೊಳಗಿನ ಮತ್ತು ಹೊರಗಿನ ವರ್ಗಾವಣೆ ಕೌನ್ಸಿಲಿಂಗ್ ಕ್ರಮಗಳನ್ನು ತತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.

Voter ID: ನೀವು ಒಂದೆಡೆಯಿಂದ ಮತ್ತೊಂದು ಸ್ಥಳಕ್ಕೆ ತೆರಳಿದ್ದೀರಾ.? ಹಾಗಾದ್ರೇ ಕುಳಿತಲ್ಲೇ ಆನ್ ಲೈನ್ ಮೂಲಕ 'ವೋಟರ್ ಐಡಿ'ಯಲ್ಲಿ 'ವಿಳಾಸ' ಬದಲಿಸಲು ಈ ಕ್ರಮ ಅನುಸರಿಸಿ

ಈಗ ವರ್ಗಾವಣೆಗೆ ನ್ಯಾಯಾಲಯವು ಅನುಮತಿಸಿರೋ ಕಾರಣ, ಮುಂದಿನ ಹಂತದ ವರ್ಗಾವಣಾ ಕೌನ್ಸಿಲಿಂಗ್ ಕ್ರಮಗಳನ್ನು ದಿನಾಂಕ 26-01-2022 ರಿಂದ 29-01-2022ರವರೆಗೆ ಖಾಲಿ ಹುದ್ದೆಗಳ ಇಂದೀಕರಣದ ಮೂಲಕ ದಿನಾಂಕ 04-02-2022ರಿಂದ ಆರಂಭಗೊಳ್ಳುವಂತೆ ಈ ಕೆಳಗಿನಂತೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.

ಹೀಗಿದೆ ಶಿಕ್ಷಕರ ವರ್ಗಾವಣೆಯ ಕೌನ್ಸಿಲಿಂಗ್ ಪರಿಷ್ಕೃತ ವೇಳಾಪಟ್ಟಿ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags