Kannada News Now

1.8M Followers

Teacher Transfer: 'ವರ್ಗಾವಣೆ ನಿರೀಕ್ಷೆ'ಯಲ್ಲಿದ್ದ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್: ಜ.18ರಿಂದ 'ಕೋರಿಕೆ, ಪರಸ್ಪರ ವರ್ಗಾವಣೆ'ಗಾಗಿ ಕೌನ್ಸಿಲಿಂಗ್ ಆರಂಭ

16 Jan 2022.06:29 AM

ಬೆಂಗಳೂರು: 2020-21ನೇ ಸಾಲಿನ ಅಂತರ್ ಘಟಕ ವಿಭಾಗ ಹೊರಗಿನ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ( High School Teacher ) ಕೋರಿಕೆ, ಪರಸ್ಪರದ ವರ್ಗಾವಣೆಯನ್ನು ( Teacher Transfer ) ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಈ ಮೂಲಕ ಕೋರಿಕೆ ವರ್ಗಾವಣೆ, ಪರಸ್ಪರ ವರ್ಗಾವಣೆ ನಿರೀಕ್ಷೆಯಲ್ಲಿದ್ದಂತ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ ನೀಡಲಾಗಿದೆ.

BIGG NEWS: ಇನ್ಮುಂದೆ 'ಕೊರೊನಾ ಟೆಸ್ಟ್' ಗೆ ಕೊಟ್ಟವರು ಹೊರಗೆ ಅಡ್ಡಾಡುವಂತಿಲ್ಲ, ಕೆಲಸಕ್ಕೂ ಹಾಜರಾಗುವಂತಿಲ್ಲ - ರಾಜ್ಯ ಸರ್ಕಾರ ಖಡಕ್ ಆದೇಶ

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಕೌನ್ಸಿಲಿಂಗ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದಿನಾಂಕ 11-11-2020ರ ಅಧಿಸೂಚನೆಯನುಸಾರ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಅಂತರ್ ಘಟಕ ವಿಭಾಗದ ಹೊರಗಿನ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಕರು, ವಿಶೇಷ ಶಿಕ್ಷಕರುಗಳ ಕೋರಿಕೆ ಹಾಗೂ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ಗಳನ್ನು ದಿನಾಂಕ 18-01-2022 ರಿಂದ ದಿನಾಂಕ 25-01-2022ರವರೆಗೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

BIGG NEWS: 'ಗಣರಾಜ್ಯತ್ಸವ ಪೆರೇಡ್'ಗೆ ಕರ್ನಾಟಕದ ಸ್ಥಬ್ಧ ಚಿತ್ರ ಆಯ್ಕೆ - ಸಿಎಂ ಬೊಮ್ಮಾಯಿ ಸಂತಸ | Karnataka Tablo

ಈ ಕೌನ್ಸಿಲಿಂಕ್ ಅನ್ನು ಬೆಂಗಳೂರಿನ ಕಾವೇರಿ ಭವನದ ಎದುರು ಇರುವಂತೆ ಶಿಕ್ಷಕರ ಸದನದಲ್ಲಿ ನಡೆಸಲಾಗುತ್ತದೆ. ಅಂತಿಮ ಆದ್ಯತಾ ಕೌನ್ಸಿಲಿಂಗ್ ಪಟ್ಟಿಯಲ್ಲಿರುವ ಶಿಕ್ಷಕರು ನಿಗಧಿತ ದಿನಾಂಕ ಹಾಗೂ ಸಮಯಕ್ಕೆ ಮೂಲ ಅರ್ಜಿ ಹಾಗೂ ಕೋರಿರುವ ಆದ್ಯತೆಯ ಮೂಲ ದಾಖಲೆಗಳೊಂದಿಗೆ ಕೌನ್ಸಿಲಿಂಗ್ ನಲ್ಲಿ ಹಾಜರಾಗಿ, ಸ್ಥಳ ಆಯ್ಕೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.

ಹೀಗಿದೆ ಕೋರಿಕೆ, ಪರಸ್ಪರ 'ವರ್ಗಾವಣೆಯ ಕೌನ್ಸಿಲಿಂಗ್' ವೇಳಾಪಟ್ಟಿ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags