Zee News ಕನ್ನಡ

352k Followers

Navodaya Vidyalaya Recruitment 2022: ನವೋದಯ ವಿದ್ಯಾಲಯದಲ್ಲಿ ಖಾಲಿ ಇರುವ 1925 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

16 Jan 2022.8:09 PM

Navodaya Vidyalaya NVS Recruitment Notification 2022: ನವೋದಯ ವಿದ್ಯಾಲಯ ಸಮಿತಿ (Navoday Vidyalaya Samiti) ಅಥವಾ ಎನ್‌ವಿಎಸ್, ಆನ್‌ಲೈನ್ ಮೋಡ್ ಮೂಲಕ 1925 ಗ್ರೂಪ್ ಎ, ಗ್ರೂಪ್ ಬಿ ಮತ್ತು ಗ್ರೂಪ್ ಸಿ ವರ್ಗದ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನವೋದಯ ವಿದ್ಯಾಲಯ ನೇಮಕಾತಿ 2022ಕ್ಕಾಗಿ 10 ಫೆಬ್ರವರಿ 2022 ರಂದು ಅಥವಾ ಅದರ ಮೊದಲು ಅರ್ಜಿ ಸಲ್ಲಿಸಬಹುದು. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ (CBT) ಕರೆಯಲಾಗುವುದು, ಇದು 01 ರಿಂದ 11 ಮಾರ್ಚ್ 2022 ರವರೆಗೆ ನಡೆಯಲಿದೆ.

ನವೋದಯ ವಿದ್ಯಾಲಯ ಸಮಿತಿಯು ಸಹಾಯಕ ಆಯುಕ್ತರು, ಮಹಿಳಾ ಸಿಬ್ಬಂದಿ ನರ್ಸ್, ಸಹಾಯಕ ವಿಭಾಗ ಅಧಿಕಾರಿ, ಆಡಿಟ್ ಸಹಾಯಕ, ಜೂನಿಯರ್ ಅನುವಾದ ಅಧಿಕಾರಿ, ಜೂನಿಯರ್ ಇಂಜಿನಿಯರ್ (ಸಿವಿಲ್), ಸ್ಟೆನೋಗ್ರಾಫರ್, ಕಂಪ್ಯೂಟರ್ ಆಪರೇಟರ್, ಅಡುಗೆ ಸಹಾಯಕ, ಜೂನಿಯರ್ ಸೆಕ್ರೆಟರಿಯಟ್ ಸಹಾಯಕ (ಜೆಎನ್‌ವಿ ಕೇಡರ್), ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್, ಲ್ಯಾಬ್ ಅಟೆಂಡೆಂಟ್ಸ್, ಮೆಸ್ ಹೆಲ್ಪರ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್), ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (ಆರ್‌ಒ ಕೇಡರ್) ಹುದ್ದೆಗಳಿಗೆ navodaya.gov.in ವೆಬ್‌ಸೈಟ್ ಮೂಲಕ ನೇಮಕಾತಿ ನಡೆಸಲಾಗುವುದು ಎಂದಿದೆ.

ಭರ್ತಿ ಪ್ರಕ್ರಿಯೆಯ ಸಂಕ್ಷಿಪ್ತ ವಿವರ (NVC Job Summary)

ನೋಟಿಫಿಕೆಶನ್ NVS Recruitment 2022 ಅಧಿಸೂಚನೆ: 1900 ಕ್ಕೂ ಅಧಿಕ ಜೆಇ, ಎಂಟಿಎಸ್, ಸ್ಟೆನೋ ಹಾಗೂ ಇತರ ಖಾಲಿ ಇರುವ ಹುದ್ದೆಗಳಿಗೆ @navodaya.gov.in ಮಾಧ್ಯಮದ ಮೂಲಕ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ.
ಕೊನೆಯ ದಿನಾಂಕ ಫೆಬ್ರವರಿ 10, 2022.
ಪರೀಕ್ಷೆಯ ದಿನಾಂಕ ಮಾರ್ಚ್ 1, 2022.
ಪಟ್ಟಣ ನವದೆಹಲಿ
ಆರ್ಗನೈಸೆಷನ್ ನವೋದಯ ವಿದ್ಯಾಲಯ ಸಮಿತಿ
ವಿದ್ಯಾರ್ಹತೆ ಸೆಕೆಂಡರಿ, ಸಿನಿಯರ್ ಸೆಕೆಂಡರಿ, ಪದವಿ

Pink Egg:ಮೊಟ್ಟೆಯ ಒಳಭಾಗದಲ್ಲಿ ಗುಲಾಬಿ ಬಣ್ಣದ ಮೊಟ್ಟೆ ಕಂಡು ಬೆಚ್ಚಿಬಿದ್ದ ಮಹಿಳೆ, ಕಾರಣ ಗೊತ್ತಾ?

Navodaya Vidyalaya Recruitment Important Dates (ಮಹತ್ವದ ದಿನಾಂಕಗಳು)
ಆನ್ಲೈನ್ ಅರ್ಜಿಗಾಗಿ ಆರಂಭಿಕ ತಿಥಿ: ಶೀಘ್ರದಲ್ಲಿಯೇ ಜಾರಿಯಾಗಲಿದೆ.
ಆನ್ಲೈನ್ ಅರ್ಜಿಗಾಗಿ ಕೊನೆಯ ದಿನಾಂಕ : ಫೆಬ್ರವರಿ 10, 2022
NVS CBT: 09 ಮಾರ್ಚ್ ನಿಂದ 11 ಮಾರ್ಚ್ 2022.

Corona ಸೋಂಕಿತನಾಗಲು ಬಯಸುತ್ತಿದ್ದಾನೆ ಓರ್ವ ವ್ಯಕ್ತಿ! ಅದಕ್ಕಾಗಿ ಹಣ ಕೂಡ ಖರ್ಚು ಮಾಡಲು ಸಿದ್ಧ

NVS-ಶಿಕ್ಷಣೆತರ ಹುದ್ದೆಗಳ ಭಾರ್ತಿ 2022ಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜನವರಿ 12, 2022 ರಿಂದ ಫೆಬ್ರವರಿ 10, 2022 ರವರೆಗೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದು. ಈ ಕುರಿತಾದ ಅಧಿಕ ವಿವರಗಳಾದ ಅರ್ಹತೆ, ವಯೋಮಿತಿ ಹಾಗೂ ಇತರೆ ಮಾಹಿತಿಗಳಿಗಾಗಿ ಅಧಿಕೃತ ನೋಟಿಸ್ ಅನ್ನು ನೋಡಬಹುದಾಗಿದೆ.

ಇದನ್ನೂ ಓದಿ - ಜ್ವಾಲಾಮುಖಿ ಹೇಗೆ ಸಿಡಿಯುತ್ತದೆ ಗೊತ್ತಾ? ಕ್ಯಾಮೇರಾ ಕಣ್ಣಲ್ಲಿ ಸೆರೆಯಾದ ಭೀಕರ ದೃಶ್ಯ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Zee News Kannada

#Hashtags