Kannada News Now

1.8M Followers

Good News : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ : 3000 ಸರ್ವೇಯರ್‌ಗಳ ನೇಮಕಾತಿ: ಅರ್ಜಿ ಸಲ್ಲಿಸಲು ಜನವರಿ 21 ಕೊನೆ ದಿನ

01 Jan 2022.07:59 AM

ಬೆಂಗಳೂರು : ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಪರವಾನಗಿ ಭೂಮಾಪಕರುಗಳ ಕೊರತೆ ಇದ್ದು 3000 ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಆನ್ ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ .

BIGG BREAKING NEWS : ಮಾತಾ ವೈಷ್ಣೋದೇವಿ ದೇಗುಲದ ಕಾಲ್ತುಳಿತದಲ್ಲಿ 12 ಮಂದಿ ಸಾವು : ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ

ರಾಜ್ಯದ ವಿವಿಧ ಜಿಲ್ಲೆಗಳಿಗೆ ಸೇರಿದಂತೆ ಒಟ್ಟು 3 ಸಾವಿರ ಲ್ಯಾಂಡ್‌ ಸರ್ವೇಯರ್‌ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆನ್‌ಲೈನ್(Online) ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.

ದಿನಾಂಕ 21-01-2022 ರ ಸಂಜೆ 5 ಗಂಟೆ ಒಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಅರ್ಜಿ ಶುಲ್ಕ : ಅರ್ಜಿ ಶುಲ್ಕ ರೂ.1000 ಆಗಿದ್ದು ಇಲಾಖಾ ವೆಬ್‍ಸೈಟ್ rdservices.karnataka.gov.in ನಲ್ಲಿ ದಾಗ ಆನ್‍ಲೈನ್ ಅರ್ಜಿ ಲಿಂಕ್ ಮೂಡುತ್ತದೆ. ಅಧಿಸೂಚನೆಯನ್ನು ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಳ್ಳುವುದು.

ಹೊಸ ವರ್ಷಕ್ಕೆ ರೈತರಿಗೆ ಪ್ರಧಾನಿ ಮೋದಿ ಉಡುಗೊರೆ : ಪಿಎಂ ಕಿಸಾನ್ ಯೋಜನೆಯ 10 ನೇ ಕಂತು ಇಂದು ಬಿಡುಗಡೆ| Pm Kisan Samman

ವಿದ್ಯಾರ್ಹತೆ : ಕನಿಷ್ಟ ಪದವಿಪೂರ್ವ ಶಿಕ್ಷಣ(ಪಿಯುಸಿ) ಅಥವಾ ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಜರುಗಿಸುವ 12 ನೇ ತರಗತಿ ಸಿಬಿಎಸ್‍ಸಿ ಅಥವಾ ಐಸಿಎಸ್‍ಇ ಇವುಗಳಲ್ಲಿ ವಿಜ್ಞಾನ ವಿಷಯ ಪಡೆದು ಗಣಿತ ವಿಷಯದಲ್ಲಿ ಶೇ.60 ಕ್ಕಿಂತ ಕಡಿಮೆ ಇಲ್ಲದೆಂತೆ ಅಂಕ ಪಡೆದು ಉತ್ತೀರ್ಣರಾಗಿರಬೇಕು. ಅಥವಾ ಕಾನೂನು ರೀತ್ಯಾ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ.ಇ(ಸಿವಿಲ್)/ಅಥವಾ ಬಿ.ಟೆಕ್(ಸಿವಿಲ್)/ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರುವವರೂ ಸಹ ಅರ್ಜಿ ಸಲ್ಲಿಸಬಹುದು. ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ ಲ್ಯಾಂಡ್ ಅಂಡ್ ಸಿಟಿ ಸರ್ವೇಯಲ್ಲಿ ಪದವಿಪೂರ್ವ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರುಬೇಕು.

ವಯೋಮಿತಿ : ವಯೋಮಿತಿ ಕನಿಷ್ಟ 18 ವರ್ಷ, ಗರಿಷ್ಟ 65 ವರ್ಷ ಮೀರಿರಬಾರದು. ಜಿಲ್ಲಾವಾರು ಅವಶ್ಯಕವಿರುವ ಭೂಮಾಪಕರ ಸಂಖ್ಯೆ ನಿಗದಿಪಡಿಸಿದ್ದು ಶಿವಮೊಗ್ಗ ಜಿಲ್ಲೆಗೆ 127 ಸಂಖ್ಯೆ ನಿಗದಿಪಡಿಸಲಾಗಿದೆ. ಅರ್ಹತಾ ಷರತ್ತುಗಳು, ಆಯ್ಕೆಯ ವಿಧಾನ, ತರಬೇತಿ ಸೇರಿದಂತೆ ಇತರೆ ಸೂಚನೆಗಳಿಗೆ ಇಲಾಖಾ ವೆಬ್‍ಸೈಟ್‍ನಲ್ಲಿ ಮಾಹಿತಿ ಪಡೆಯಬಹುದು.

ಜಿಲ್ಲಾವಾರು ಹುದ್ದೆಗಳು :

ಉಡುಪಿ 131, ಉತ್ತರಕನ್ನಡ 101, ಕೊಡಗು 100, ಕೊಪ್ಪಳ 66, ಕೋಲಾರ 137, ಗದಗ 46, ಕಲಬುರಗಿ 12, ಚಿಕ್ಕಬಳ್ಳಾಪುರ 39, ಚಿಕ್ಕಮಗಳೂರು 112, ಚಿತ್ರದುರ್ಗ 93, ಚಾಮರಾಜನಗರ 50, ತುಮಕೂರು 334, ದಕ್ಷಿಣ ಕನ್ನಡ 66, ದಾವಣಗೆರ 183, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು 65, ವಿಜಯಪುರ 76, ಬೆಳಗಾವಿ 112, ಬಳ್ಳಾರಿ 27, ವಿಜಯನಗರ 29, ಬಾಗಲಕೋಟೆ 60, ಬೀದರ್ 13, ಮಂಡ್ಯ 195, ಮೈಸೂರು 136, ಯಾದಗಿರಿ 45, ರಾಮನಗರ 155, ರಾಯಚೂರು 54, ಶಿವಮೊಗ್ಗ 127, ಹಾವೇರಿ 299, ಹಾಸನ 136 ಸೇರಿ ಒಟ್ಟು 3000 ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದೆ.

ರಾಜ್ಯ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ಐಟಿಐ ಇನ್ ಸರ್ವೇ ಟ್ರೇಡ್‍ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರಿ ವಲಯಕ್ಕೆ ಒಳಪಟ್ಟ ಸಂಸ್ಥೆಗಳಲ್ಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಟ 10 ವರ್ಷಗಳ ಭೂಮಾಪನ ಸೇವೆ ಸಲ್ಲಿಸಿ ನಿವೃತ್ತರಾದವರು ಸಹ ಪರವಾನಗಿ ಪಡೆಯಲು ಅರ್ಹರಿರುತ್ತಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags