Kannadavahini

73k Followers

6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ ಮುಖ್ಯಶಿಕ್ಷಕ

01 Jan 2022.08:23 AM

ತುಮಕೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಶಿರಾ ನಗರದ ಬೇಗಂ ಮೊಹಲ್ಲಾದ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಮಹಮ್ಮದ್​ ಇಕ್ಬಾಲ್​ ಅವಟಿ ಪೊಲೀಸರು ಬಂಧಿಸಿದ್ದಾರೆ.

2 ತಿಂಗಳ ಹಿಂದೆ ಶಾಲೆ ಬಿಟ್ಟ ಬಳಿಕ ವಿಶೇಷ ತರಗತಿ ನೆಪದಲ್ಲಿ 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ತನ್ನ ಕಚೇರಿಗೆ ಕರೆಸಿಕೊಂಡ ಮುಖ್ಯಶಿಕ್ಷಕ, 50 ರೂಪಾಯಿ ಕೊಡುವುದಾಗಿ ಲೈಂಗಿಕ ಕಿರುಕುಳ ನೀಡಿದ್ದ.

ಈ ಕುರಿತು ನೊಂದ ವಿದ್ಯಾರ್ಥಿನಿ ಪಾಲಕರ ಬಳಿ ಅಳಲು ತೋಡಿಕೊಂಡಿದ್ದಳು. ವಿದ್ಯಾರ್ಥಿನಿಯ ಮಾಹಿತಿ ಹಿನ್ನೆಲೆ ಪಾಲಕರು ಶಿರಾ ಠಾಣೆಯಲ್ಲಿ ಡಿ.21ರಂದು ದೂರು ದಾಖಲಿಸಿದ್ದರು.

ಕಳೆದ ಐದಾರು ತಿಂಗಳಿಂದ ಆರೋಪಿ ಮಹಮ್ಮದ್​ ಇಕ್ಬಾಲ್​ ಅವಟಿ ಶಾಲೆಯಲ್ಲಿ ಅನುಚಿತ ವರ್ತನೆ, ಅಶ್ಲೀಲ ಆವಭಾವ ಮಾಡುತಿದ್ದ. ವಿನಾಕಾರಣ ವಿದ್ಯಾರ್ಥಿನಿಯರ ಮೈಮುಟ್ಟುತಿದ್ದ ಎಂದು ಆರೋಪಿ ಕೇಳಿಬಂದಿದೆ. ಓರ್ವ ವಿದ್ಯಾರ್ಥಿನಿಯ ಪೋಷಕರು ಶಿರಾ ಠಾಣೆಗೆ ದೂರು ಕೊಟ್ಟ‌ ಹಿನ್ನೆಲೆ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅತ್ತ ಆರೋಪ ಕೇಳಿಬರುತ್ತಿದ್ದಂತೆ ಮಹಮ್ಮದ್​ ಇಕ್ಬಾಲ್​ ಅವಟಿಯನ್ನು ಕೆಲಸದಿಂದ ಅಮಾನತು ಮಾಡಿ ಮಧುಗಿರಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕರು ಆದೇಶಿಸಿದ್ದರು. ಆರೋಪಿ ಶಿಕ್ಷಕನನ್ನು ತುಮಕೂರು ವಿಶೇಷ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಡಿಡಿಪಿಐ ಕೃಷ್ಣಮೂರ್ತಿ ಆದೇಶಿಸಿದ್ದಾರೆ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannadavahini

#Hashtags