Kannada News Now

1.8M Followers

ಸಮಗ್ರ ಶಿಕ್ಷಣ ಯೋಜನೆಯ ಶಿಕ್ಷಕರಿಗೆ ಹೊಸವರ್ಷದಂದೇ ಸಿಹಿಸುದ್ದಿ: ಬಾಕಿ 3 ತಿಂಗಳ ವೇತನ ವೆಚ್ಚದ ಅನುದಾನ ಬಿಡುಗಡೆ

01 Jan 2022.3:56 PM

ಬೆಂಗಳೂರು: ರಾಜ್ಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವೇತನ ಬಾಬ್ತಿನಡಿಯಲ್ಲಿನ ಅನುದಾವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಮೂಲಕ ಸಮಗ್ರ ಶಿಕ್ಷಣ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವಂತ ಶಿಕ್ಷಕರಿಗೆ ಸರ್ಕಾರ ಹೊಸ ವರ್ಷದಂದೇ ಸಿಹಿಸುದ್ದಿ ನೀಡಿದೆ.

ಹೂಡಿಕೆದಾರರಿಗೆ ರಾಜ್ಯ ಸರ್ಕಾರದಿಂದ ಹೊಸ ವರ್ಷದ ಬಂಪರ್ ಕೊಡುಗೆ: KIADBಯಿಂದ ಹಂಚಿಕೆಯಾದ ಭೂಮಿಯನ್ನು10 ವರ್ಷಗಳ ಅವಧಿಯ ಲೀಸ್ ಕಂ ಸೇಲ್‌ಗೆ‌ ಗ್ರೀನ್ ಸಿಗ್ನಲ್

ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, ಕರ್ನಾಡಕ ವಿಧಾನ ಮಂಡಲವು ಅನುಮೋದಿಸಿರುವ ಕರ್ನಾಟ ಧನವಿನಿಯೋಗ ವಿಧೇಯಕದನ್ವಯ 2021-22ನೇ ಸಾಲಿನ ವಿವಿಧ ಯೋಜನೆ, ಕಾರ್ಯಕ್ರಮಗಳಿಗೆ ದಿನಾಂಕ 1-04-2021ರಿಂದ ದಿನಾಂಕ 31-03-2022ರವರೆಗಿನ ಅವಧಿಯ ವೆಚ್ಚವನ್ನು ಭಿರಿಸಲು ಇಲಾಖೆ ಮುಖ್ಯಸ್ಥರಿಗೆ ಅಧಿಕಾರ ನೀಡಲಾಗಿದೆ.

BIGG NEWS: ರಾಜ್ಯದ 'ಯುಜಿ-ಪಿಜಿ ವಿದ್ಯಾರ್ಥನಿ'ಯರಿಗೆ ಭರ್ಜರಿ ಗುಡ್ ನ್ಯೂಸ್: ನಿಮಗೂ ಸಿಗಲಿದೆ ಹೆರಿಗೆ, ಶಿಶುಪಾಲನಾ ರಜೆ | UG-PG Student Maternity leave

2021-22ನೇ ಸಾಲಿನ ಆಯವ್ಯಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವೇತನ ಬಾಬ್ತಿಗೆ ನಿಗದಿಪಡಿಸಿರುವ ಒಟ್ಟಾರೆ ಅನುದಾನದ ಮೊದಲನೇ ಕಂತು ಹಾಗೂ 2ನೇ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು.

ಇದೇನ್ ನಿಮ್ಮ ಅಡ್ಡನಾ.? ಶಾಲೆಯ ಅಡುಗೆ ಕೋಣೆಯಲ್ಲೇ ತುಂಡು-ಗುಂಡಿನ ಪಾರ್ಟಿ ಮಾಡಿದ ಪುಂಡರು.!

ಇದೀಗ ಸಮಗ್ರ ಶಿಕ್ಷಣ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವಂತ ಶಿಕ್ಷಕರ ವೇತನದ ಅಂತಿಮ ಕಂತಿನ 3 ತಿಂಗಳ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಒಟ್ಟು ರೂ.40,874.06 ಲಕ್ಷವನ್ನು ಬಿಡುಗಡೆ ಮಾಡಿ ಆದೇಶಿಸಲಾಗಿರೋದಾಗಿ ತಿಳಿಸಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags