Kannada News Now

1.8M Followers

BIGG NEWS : ವಸತಿ ಶಾಲೆಗಳನ್ನು "ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ" ಎಂದು ಮರು ನಾಮಕರಣ : ರಾಜ್ಯ ಸರ್ಕಾರ ಆದೇಶ

02 Jan 2022.09:11 AM

ಬೆಂಗಳೂರು : ಕನಾ೯ಟಕ ರಾಜ್ಯಪಾಲರ ಆದೇಶಾನುಸಾರ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾಯ೯ ನಿವ೯ಹಿಸುತ್ತಿರುವ ವಸತಿ ಶಾಲೆಗಳನ್ನು 'ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ' (Dr. B.R. Ambedkar Residential School)ಎಂದು ಮರು ನಾಮಕರಣ ಮಾಡಲು ಸಕಾ೯ರ ಆದೇಶಿಸಿದೆ.

BIGG NEWS : ರಾಜ್ಯದಲ್ಲಿ `ಮತಾಂತರ ನಿಷೇಧಕ್ಕೆ ಸುಗ್ರೀವಾಜ್ಞೆ' : ಗೃಹ ಸಚಿವ ಆರಗ ಜ್ಞಾನೇಂದ್ರ

ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಪರಿಶಿಷ್ಟ ಜಾತಿ ಮಕ್ಕಳಿಗೆ ಪ್ರಾಥಮಿಕ ಹಂತದ 1 ರಿಂದ 5 ನೇ ತರಗತಿವರೆಗಿನ ಶಿಕ್ಷಣವನ್ನು ನೀಡಲು ರಾಜ್ಯಾದ್ಯಂತ 68 ವಸತಿ ಶಾಲೆಗಳನ್ನು ನಿರ್ವಹಿಸಲಾಗುತ್ತಿದೆ. ಪ್ರತಿ ತರಗತಿಗೆ 25 ವಿದ್ಯಾರ್ಥಿಗಳಂತೆ 5 ನೇ ತರಗತಿಗಳಿಗೆ 125 ವಿದ್ಯಾರ್ಥಿಗಳು, ಒಟ್ಟು 68 ವಸತಿ ಶಾಲೆಗಳಿಗೆ 8,500 ವಿದ್ಯಾರ್ಥಿಗಳ ಸಂಖ್ಯೆ ಮಂಜೂರಾಗಿದ್ದು, ವಸತಿ ಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ, ಬೋಜನ, ಸಮವಸ್ತ್ರ ಸೇರಿ ಹಲವು ಸವಲತ್ತುಗಳನ್ನು ನೀಡಲಾಗುತ್ತಿದೆ.

Pm kisan Scheme: ಪಿಎಂ ಕಿಸಾನ್ ಯೋಜನೆಯ 10 ನೇ ಕಂತು ಬಿಡುಗಡೆ: ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹೇಗೆ ಪರಿಶೀಲಿಸುವುದು ?

ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ಪ್ರಥಮ ಕಾನೂನು ಸಚಿವರಾಗಿದ್ದು, ಭಾರತದ ಸಶಕ್ತ ಸಂವಿಧಾನ ನೀಡಿದ ಶಿಲ್ಪಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ನಡೆಸಲಾಗುತ್ತಿರುವ ವಸತಿ ಶಾಲೆಗಳನ್ನು ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಎಂದು ಪುನರ್ ನಾಮಕರಣ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags