News18 ಕನ್ನಡ

400k Followers

HAL Recruitment 2022: ಮಾಸಿಕ ವೇತನ ₹ 23,000, HALನಲ್ಲಿ Part-Time ಹುದ್ದೆ ಖಾಲಿ, ಅರ್ಜಿ ಸಲ್ಲಿಸಲು ಹೀಗೆ ಮಾಡಿ

04 Jan 2022.08:03 AM

HAL Recruitment 2022: ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್ ​(Hindustan Aeronautics Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 Part-Time ಡಾಕ್ಟರ್​ ಹುದ್ದೆ ಖಾಲಿ ಇದ್ದು, ಎಂಬಿಬಿಎಸ್​(MBBS) ಪದವೀಧರರು ಅರ್ಜಿ ಸಲ್ಲಿಸಬಹುದು. ಜನವರಿ 10, 2022 ರಂದು ನೇರ ಸಂದರ್ಶನ ನಡೆಯಲಿದ್ದು, ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ hal-india.co.in ಗೆ ಭೇಟಿ ನೀಡಬಹುದು.

ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿ HAL ಆಸ್ಪತ್ರೆ ನಾಸಿಕ್​​ನಲ್ಲಿ 4 ಗಂಟೆಗಳ ಕರ್ತವ್ಯ ನಿರ್ವಹಿಸಬೇಕು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್​​ ಲಿಮಿಟೆಡ್
ಹುದ್ದೆಯ ಹೆಸರು Part-Time ಡಾಕ್ಟರ್
ಒಟ್ಟು ಹುದ್ದೆ 1
ವಿದ್ಯಾರ್ಹತೆ ಎಂಬಿಬಿಎಸ್​
ವೇತನ ಮಾಸಿಕ ₹23,010
ಉದ್ಯೋಗದ ಸ್ಥಳ ನಾಸಿಕ್​
ಸಂದರ್ಶನ ನಡೆಯುವ ದಿನಾಂಕ 10/01/2022


ವಿದ್ಯಾರ್ಹತೆ:
ಹಿಂದೂಸ್ತಾನ್ ಏರೋನಾಟಿಕ್ಸ್​​ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, Part-Time ಡಾಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು MCI ನೋಂದಣಿಯೊಂದಿಗೆ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಎಂಬಿಬಿಎಸ್​ ಪೂರ್ಣಗೊಳಿಸಿರಬೇಕು. ಮೇಲೆ ಸೂಚಿಸಿದ ನಿಯಮಿತ/ಪೂರ್ಣ ಸಮಯದ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಪಾರ್ಟ್ ಟೈಮ್/ಕರೆಸ್ಪಾಂಡೆನ್ಸ್/ದೂರ ಶಿಕ್ಷಣ/ಇ-ಲರ್ನಿಂಗ್ ಕೋರ್ಸ್ ಮೂಲಕ ಪಡೆದ ವಿದ್ಯಾರ್ಹತೆಗಳು ಅರ್ಜಿ ಸಲ್ಲಿಸಲು ಅರ್ಹವಾಗಿರುವುದಿಲ್ಲ.

: IARI Recruitment 2022: SSLC ಪಾಸಾದವರಿಗೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಬಂಪರ್ ಉದ್ಯೋಗ

ವಯೋಮಿತಿ:
ಹಿಂದೂಸ್ತಾನ್ ಏರೋನಾಟಿಕ್ಸ್​​ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, Part-Time ಡಾಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 65 ವರ್ಷ ಮೀರಿರಬಾರದು.

ವೇತನ:
ಹಿಂದೂಸ್ತಾನ್ ಏರೋನಾಟಿಕ್ಸ್​​ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, Part-Time ಡಾಕ್ಟರ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ 23,010 ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಹಿಂದೂಸ್ತಾನ್ ಏರೋನಾಟಿಕ್ಸ್​​ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ನೇರ ಸಂದರ್ಶನದ ಮೂಲಕ Pacಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

: Railway Jobs: ತಿಂಗಳಿಗೆ ₹ 20,000 ಸಂಬಳ, SSLC, PUC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಈ ಕೆಳಕಂಡ ವಿಳಾಸಕ್ಕೆ ಸಂದರ್ಶನಕ್ಕೆ ಹೋಗಬೇಕು.

HAL ಮುಖ್ಯ ಆಸ್ಪತ್ರೆ
ಓಜರ್ ಟೌನ್‌ಶಿಪ್, ತಾಲ್
ನಿಫಾಡ್
ನಾಸಿಕ್-422207

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ದಿನಾಂಕ 10/01/2021 ರಂದು ಬೆಳಗ್ಗೆ 9 ಗಂಟೆಗೆ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಮತ್ತು ವಯಸ್ಸು, ವಿದ್ಯಾರ್ಹತೆ, ಅನುಭವ, ತರಬೇತಿಯ ಪುರಾವೆಗಳಲ್ಲಿ ಪ್ರಮಾಣಪತ್ರಗಳು/ದಾಖಲೆಗಳ ಸ್ವಯಂ-ದೃಢೀಕರಿಸಿದ ಪೋಟೋಕಾಪಿಗಳನ್ನು ಲಗತ್ತಿಸಬೇಕು.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags