ಪ್ರಜಾವಾಣಿ

1.5M Followers

ಬಡ್ತಿ ನಿರಾಕರಿಸುವ ನೌಕರರು ಆರ್ಥಿಕ ಸೌಲಭ್ಯಕ್ಕೆ ಅರ್ಹರು: ಸುಪ್ರೀಂ ಕೋರ್ಟ್‌

04 Jan 2022.06:25 AM

ನವದೆಹಲಿ: ನಿಯಮಿತ ಬಡ್ತಿಯನ್ನು ನಿರಾಕರಿಸಿದ ನೌಕರರು ಕೇಂದ್ರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ 1999ರ ಆಗಸ್ಟ್‌ನಲ್ಲಿ ಹೊರಡಿಸಿದ ಕಚೇರಿ ಮೆಮೊ ಅಡಿಯಲ್ಲಿ ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುತ್ತಾರೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಕೇಂದ್ರದ ಅಶ್ಯೂರ್ಡ್‌ ಕೆರಿಯರ್‌ ಪ್ರೋಗ್ರೇಷನ್‌ ಸ್ಕೀಮ್‌ನ ಪ್ರಯೋಜನ ಒದಗಿಸುವಂತೆ ಉದ್ಯೋಗಿಗಳು ಸಲ್ಲಿಸಿದ್ದ ಕ್ಲೇಮುಗಳ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ಈ ರೀತಿ ಹೇಳಿದೆ.

12 ವರ್ಷಗಳ ಸೇವೆಯ ನಂತರ ಬಡ್ತಿ ಪಡೆಯಲು ಸಾಧ್ಯವಾಗದ ಉದ್ಯೋಗಿಗಳಿಗೆ ಮುಂದಿನ ಉನ್ನತ ಶ್ರೇಣಿಯ ವೇತನಕ್ಕಾಗಿ ಒದಗಿಸಲಾದ ಅಶ್ಯೂರ್ಡ್‌ ಕೆರಿಯರ್‌ ಪ್ರೋಗ್ರೇಷನ್‌ ಸ್ಕೀಮ್‌, ಎರಡನೇ ಉನ್ನತೀಕರಣದ ಪ್ರಯೋಜನ ಪಡೆಯಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಆರ್‌.ಎಸ್.ರೆಡ್ಡಿ, ಹೃಷಿಕೇಶ್ ಪೀಠ ಹೇಳಿತು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Prajavani

#Hashtags