Kannada News Now

1.8M Followers

CORONA INCREASE :15 ದಿನಗಳ ಕಾಲ ಶಾಲಾ‌-ಕಾಲೇಜುಗಳನ್ನು ಬಂದ್​ ಮಾಡಿ: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ

20 Jan 2022.2:27 PM

ರಾಮನಗರ : ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ದೊಡ್ಡ ಮಟ್ಟದಲ್ಲಿ ಪಾಸಿಟಿವ್ ಬರ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರ 15 ದಿನ ಶಾಲಾ‌-ಕಾಲೇಜುಗಳನ್ನು ಬಂದ್​ ಮಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, ಶಾಲಾ-ಕಾಲೇಜು ಹಾಗೂ ವಸತಿ ಶಾಲೆಗಳಲ್ಲಿ ಕರೊನಾ ಪ್ರಕರಣ ಹೆಚ್ಚಾಗ್ತಿದೆ.

ಚೆನ್ನೈನಲ್ಲಿರುವ ನಟಿ ʻನಿಕ್ಕಿ ಗಲ್ರಾನಿʼ ನಿವಾಸದಲ್ಲಿ ಕಳ್ಳತನ… ಆರೋಪಿ ಪೊಲೀಸರ ಬಲೆಗೆ!

ರಜೆ ಕೊಟ್ಟು ವಸತಿ ಶಾಲೆಗಳನ್ನು ಬಂದ್ ಮಾಡಬೇಕು. ನಿಮ್ಮ ಮುಂದೆ ವಾಸ್ತವಾಂಶದ ವರದಿ ಇದೆ. ಆ ಮಾಹಿತಿಗಳ ಆಧಾರದ ಮೇಲೆ ನೀವು ನಿರ್ಣಯ ತೆಗೆದುಕೊಳ್ಳಬೇಕು. ಈಗಾಗಲೇ ಅನೇಕ ಶಾಲಾ-ಕಾಲೇಜುಗಳಲ್ಲಿ ಪಾಸಿಟಿವ್ ರೇಟ್ ಜಾಸ್ತಿಯಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮತ್ತು ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜೀವಕ್ಕೆ ತೊಂದರೆ ಇಲ್ಲದಿದ್ರೂ ಪ್ಯಾನಿಕ್ ಆಗ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನ ಬಂದ್ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

BIGG NEWS : ಧನುಷ್-ಐಶ್ವರ್ಯಾ ದಂಪತಿ ವಿಚ್ಛೇದನಕ್ಕೆ ಕಾರಣ ಏನು ಗೊತ್ತಾ..? ಇಲ್ಲಿದೆ ಸ್ಟೋಟಕ ಮಾಹಿತಿ

ಲಾಕ್​ಡೌನ್ ವಿಚಾರದಲ್ಲಿ ಬಿಜೆಪಿ ನಾಯಕರಲ್ಲೇ ಸಮನ್ವಯತೆ ಇಲ್ಲ. ಸಾರ್ವಜನಿಕರ ಒಂದು ವರ್ಗ ಪ್ರತಿನಿತ್ಯ ವ್ಯಾಪಾರ ಹಾಗೂ ಕೂಲಿ ಕೆಲಸ ಮಾಡುತ್ತಾರೆ. ಅಂತಹವರ ಕುಟುಂಬದ ನಿರ್ವಹಣೆ ಅವರ ಒಂದು ದಿನದ ಆದಾಯದ ಮೇಲೆ ನಿಂತ್ತಿರುತ್ತೆ. ವಿಕೇಂಡ್ ಕರ್ಫ್ಯೂ ಇಲ್ಲ, ವಿಕೇಂಡ್ ಲಾಕ್​ಡೌನ್ ಮಾಡುವುದರಿಂದ ಅಂತಹವರಿಗೆ ಕಷ್ಟ ಆಗುತ್ತೆ. ಅವರಿಗೆಲ್ಲ ಬದುಕು ಕಟ್ಟುವುದು ಸರ್ಕಾರದ ಜವಬ್ದಾರಿ. ಈ ಮಾತನ್ನ ವಿರೋಧ ಪಕ್ಷದ ನಾವು ಹೇಳಿದ್ರೆ ಅವರಿಗೇನು ಮಾತನಾಡುತ್ತಾರೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಾರೆ. ನಾವು ಕೂಡ ಸರ್ಕಾರ ನಡೆಸಿದವರೇ. ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಬೇಕೆಂಬುದು ನಮ್ಮ ಉದ್ದೇಶ ಅಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

BIGG NEWS : ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಮುಂದುವರಿಕೆ ಕುರಿತಂತೆ ಸಚಿವ ಡಾ.ಸುಧಾಕರ್ ಹೇಳಿದ್ದೇನು?

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags