ಉದಯವಾಣಿ

1.4M Followers

ಕೋವಿಡ್ ಪ್ರಕರಣ ಏರಿಕೆ: ದ.ಕ. ಜಿಲ್ಲೆಯ 5 ಶಾಲೆಗಳಿಗೆ ರಜೆ

21 Jan 2022.06:45 AM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ 5 ಶಾಲೆಗೆ ನಿರ್ದಿಷ್ಟ ಕಾಲಾವಧಿಯವರೆಗೆ ರಜೆ ಸಾರಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 10 ಶಾಲೆಗಳು ಕೊರೊನಾ ಕಾರಣದಿಂದ ಮುಚ್ಚಲಾಗಿದೆ.

ಮಂಗಳೂರು ಉತ್ತರದ 1 ಶಾಲೆಯ 10ನೇ ತರಗತಿಯ ಓರ್ವ ವಿದ್ಯಾರ್ಥಿಗೆ ಕೊರೊನಾ ಕಾರಣದಿಂದ ಆ ತರಗತಿಯನ್ನು ಮಾತ್ರ ಮುಚ್ಚಲಾಗಿದೆ. ಮಂಗಳೂರು ದಕ್ಷಿಣದ 1 ಶಾಲೆ ಹಾಗೂ ಪುತ್ತೂರು ತಾಲೂಕಿನ 3 ಶಾಲೆಗಳನ್ನು ಮುಚ್ಚಲಾಗಿದೆ.

288 ಮಕ್ಕಳಿಗೆ ಕೊರೊನಾ :

ದ.ಕ. ಜಿಲ್ಲೆಯಲ್ಲಿ ಗುರುವಾರ ಒಟ್ಟು 32 ವಿದ್ಯಾರ್ಥಿಗಳು ಹಾಗೂ 7 ಶಿಕ್ಷಕರಿಗೆ ಕೊರೊನಾ ದಾಖಲಾಗಿದೆ. ಈ ಮೂಲಕ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 288 ವಿದ್ಯಾರ್ಥಿಗಳು ಹಾಗೂ 43 ಶಿಕ್ಷಕರಿಗೆ ಕೊರೊನಾ ವರದಿಯಾಗಿದೆ.

9,616 ಮಕ್ಕಳಿಗೆ ಲಸಿಕೆ ಬಾಕಿ :

ದ.ಕ. ಜಿಲ್ಲೆಯಲ್ಲಿ 9ನೇ ಹಾಗೂ 10ನೇ ತರಗತಿಯಲ್ಲಿ ಒಟ್ಟು 66,497 ವಿದ್ಯಾರ್ಥಿಗಳಿದ್ದು ಈ ಪೈಕಿ 55,298 ಮಕ್ಕಳು ಲಸಿಕೆ ಪಡೆಯಲು ಅರ್ಹತೆ ಹೊಂದಿದ್ದಾರೆ. ಇದರಲ್ಲಿ 45,682 ಮಕ್ಕಳು ಲಸಿಕೆ ಪಡೆದಿದ್ದಾರೆ. 9,616 ಮಕ್ಕಳು ಲಸಿಕೆ ಪಡೆಯಲು ಬಾಕಿಯಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Udayavani

#Hashtags