Kannada News Now

1.8M Followers

BIGG NEWS: 'ಶಿಕ್ಷಕರ ಹುದ್ದೆ ನಿರೀಕ್ಷೆ'ಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: '15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕ'ರ ಹುದ್ದೆಗೆ ಅರ್ಜಿ, ವಯೋಮಿತಿಯೂ ಹೆಚ್ಚಳ | Primary School Teacher Recruitment

21 Jan 2022.4:45 PM

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ( Government Primary School ) ಖಾಲಿ ಇರುವಂತ 15 ಸಾವಿರ 6 ರಿಂದ 8ನೇ ತರಗತಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ( Primary School Teacher Recruitment ) ಶಿಕ್ಷಣ ಇಲಾಖೆ ( Education Department ) ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ.

ಅಲ್ಲದೇ ವಯೋಮಿತಿಯನ್ನು ಕೂಡ ಹೆಚ್ಚಿಸಿ ಆದೇಶಿಸಿದೆ.

ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ( Primary and High School ) ಸರ್ಕಾರದ ಅಧೀನ ಕಾರ್ಯದರ್ಶಿ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ಶಿಕ್ಷಣ ಇಲಾಖೆಯ ಸೇವಾ ನಿಯಮ ( ನೇಮಕಾತಿ ) ( ವಿಶೇಷ)ಕ್ಕೆ ತಿದ್ದುಪಡಿ 2022ರ ಕಾಯ್ದೆಯನ್ನು ಹೊರಡಿಸಿದ್ದು, ನೇಮಕಾತಿಯ ನಿಯಮಗಳಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿರೋದಾಗಿ ತಿಳಿಸಿದ್ದಾರೆ.

ಎಣ್ಣೆಪ್ರಿಯರಿಗೆ ಗುಡ್ ನ್ಯೂಸ್: ನಾಳೆಯಿಂದ ಶನಿವಾರ, ಭಾನುವಾರವೂ ಸಿಗಲಿದೆ ಮದ್ಯ

ಈ ತಿದ್ದುಪಡಿ ನಿಯಮದ ಅನುಸಾರವಾಗಿ ವಯೋಮಿತಿಯನ್ನು 21ವರ್ಷಕ್ಕೆ ಮೀರದಂತೆ ನಿಗದಿ ಪಡಿಸಲಾಗಿದೆ. ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 47 ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ. ಓಬಿಸಿ ಅಭ್ಯರ್ಥಿಗಳಿಗೆ 45 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.

ಪರಿಷ್ಕೃತ ನೇಮಕಾತಿ ತಿದ್ದುಪಡಿ ನಿಯಮದಂತೆ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ( Teacher Recruitment ) ಶೇ.50ರಷ್ಟು ಸ್ಪರ್ಧಾತ್ಮಕ ಪರೀಕ್ಷೆಯಿಂದ ಗಳಿಸಿದ ಅಂಕಗಳನ್ನು ಪರಿಗಣಿಸಲಾಗಿದೆ. ಶೇ.20ರಷ್ಟು ಟಿಇಟಿ, ಶೇ.20ರಷ್ಟು ಪದವಿ, ಶೇ.10ರಷ್ಟು ಶಿಕ್ಷಣ ಕೋರ್ಸ್ ನಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುತ್ತಿದೆ.

BIG NEWS: ರಾಜ್ಯದ ಸರ್ಕಾರಿ ಶಾಲೆಯಲ್ಲಿ 'ನ್ಯಾನೊ ಉಪಗ್ರಹ ನಿರ್ಮಾಣ'ಕ್ಕೆ 1.90 ಕೋಟಿ ರೂ ಬಿಡುಗಡೆ - ಸಚಿವ ಡಾ.ಸಿಎನ್.ಅಶ್ವತ್ಥನಾರಾಯಣ

ಹುದ್ದೆಗಳ ವಿವರ - 15,000 ಹುದ್ದೆಗಳು

ವೇತನ ಶ್ರೇಣಿ - 14,550 ರಿಂದ 26,700 ಆಗಿದೆ.

ವಿದ್ಯಾರ್ಹತೆ - ಶೇ.50ರಷ್ಟು ಅಂಕಗಳೊಂದಿಗೆ ಪದವಿ ಮತ್ತು ಎರಡು ವರ್ಷದ ಡಿಪ್ಲೋಮೋ ಎಲಿಮೆಂಟರಿ ಎಜುಕೇಷನ್. ಶೇ.50ರಷ್ಟು ಅಂಕಗಳೊಂದಿಗೆ ಬ್ಯಾಟುಲರ್ ಇನ್ ಎಜುಕೇಷನ್.

ಈ ಹುದ್ದೆಗಳಿಗೆ ಈಗ ಸದ್ಯ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಈ ಬಗ್ಗೆ ಶೀಘ್ರವೇ ಸಾರ್ವಜನಿಕ ಶಿಕ್ಷಣ ಇಲಾಖೆಯ ನೇಮಕಾತಿ ವಿಭಾಗದಿಂದ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗುತ್ತದೆ. ಹುದ್ದೆಗಳ ವಿವರ, ನೇಮಕಾತಿ ವಿಧಾನ ಸೇರಿದಂತೆ ವಿವಿಧ ಮಾಹಿತಿಯನ್ನು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags