Kannada News Now

1.8M Followers

BIGG BREAKING: ರಾಜ್ಯಾಧ್ಯಂತ 'ವೀಕೆಂಡ್ ಕರ್ಪ್ಯೂ' ರದ್ದು, ನೈಟ್ ಕರ್ಪ್ಯೂ ಮುಂದುವರಿಕೆ - ಸಚಿವ ಆರ್ ಅಶೋಕ್ | Weekend Curfew

21 Jan 2022.3:59 PM

ಬೆಂಗಳೂರು: ರಾಜ್ಯದಲ್ಲಿ ಜಾರಿಗೊಳಿಸಿದ್ದಂತ ವೀಕೆಂಡ್ ಕರ್ಪ್ಯೂವನ್ನು ( Weekend Curfew ) ರದ್ಧುಗೊಳಿಸಲಾಗುತ್ತಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ್ರೇ ಮತ್ತೆ ಮುಂದುವರೆಸಲಾಗುತ್ತದೆ. ಆಸ್ಪತ್ರೆಗೆ ಸೇರುವವರ ಸಂಖ್ಯೆಯ ಆಧಾರದ ಮೇಲೆ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ( Minister R Ashok ) ತಿಳಿಸಿದರು.

BIG NEWS : ನೀವು ಎಸ್‌ಬಿಐ ಗ್ರಾಹಕರೇ.. ನಿಮ್ಮ ಖಾತೆಯಲ್ಲಿ ಸಮಸ್ಯೆಯಾಗಿದ್ರೆ ಈ ನಂಬರ್‌ಗೆ ಸಂಪರ್ಕಿಸಿ..!

ಇಂದು ಸಿಎಂ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಸಭೆಯ ನಿರ್ಧಾರಗಳನ್ನು ಸುದ್ದಿಗಾರರೊಂದಿಗೆ ತಿಳಿಸಿದಂತ ಅವರು, ಮುಖ್ಯಮಂತ್ರಿ ಬೊಮ್ಮಾಯಿಯವರ ನೇತೃತ್ವದಲ್ಲಿ 2 ಗಂಟೆಗೂ ಅಧಿಕ ಸಮಯದ ಕೋವಿಡ್ ನಿಯಂತ್ರಣ ಸಭೆಯನ್ನು ನಡೆಸಲಾಗಿಯಿತು. ಎಲ್ಲಾ ತಜ್ಞರ ಅಭಿಪ್ರಾಯವನ್ನು ಸಿಎಂ ಸಭೆಯಲ್ಲಿ ಪಡೆದರು. ಆರೋಗ್ಯ, ಗೃಹ ಸಚಿವರು ಸೇರಿದಂತೆ ವಿವಿಧ ಸಚಿವರಿಂದಲೂ ಅಭಿಪ್ರಾಯವನ್ನು ಪಡೆದರು. ಬಹಳ ದೊಡ್ಡ ನಿರ್ಧಾರವನ್ನು ಸರ್ಕಾರ ಘೋಷಣೆ ಮಾಡುತ್ತಿದೆ. ವೀಕೆಂಡ್ ಕರ್ಪ್ಯೂ ಇತ್ತು ಅದನ್ನು ಇವತ್ತು ರದ್ದುಗೊಳಿಸಲಾಗುತ್ತಿದೆ. ಅದಕ್ಕೆ ತಜ್ಞರ ವರದಿಯೂ ಆಧಾರವಾಗಿದೆ ಎಂದರು.

BIGG NEWS: ರಾಜ್ಯದ ರೈತರಿಗೆ ಗುಡ್ ನ್ಯೂಸ್: ಸುಟ್ಟು ಹೋದ ಟಿ.ಸಿಗಳನ್ನ 24 ಗಂಟೆಯಲ್ಲಿ ರೀಪ್ಲೇಸ್

ಇವತ್ತು ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ.5ರಷ್ಟಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾದ್ರೆ ವೀಕೆಂಡ್ ಕರ್ಪ್ಯೂ ಮಾಡಲಾಗುತ್ತದೆ. ಜನರಲ್ಲಿ ಕೈ ಮುಗಿದು ವಿನಂತಿ ಮಾಡುತ್ತೇನೆ ಕೊರೋನಾ ನಿಯಂತ್ರಣ (Corona Control ) ಕ್ರಮಗಳನ್ನು ಅನುಸರಿಸುವಂತೆ ಹೇಳಿದರು.

ವೀಕೆಂಡ್ ಕರ್ಪ್ಯೂ ರದ್ದುಗೊಳಿಸೋ ಬಗ್ಗೆ ಬೇರೆ ಬೇರೆ ಅನೇಕರು ಮನವಿ ಮಾಡಿದ್ದರು. ನೈಟ್ ಕರ್ಪ್ಯೂ ಮುಂದುವರೆಯಲಿದೆ. ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಮುಂದುವರೆಯಲಿದೆ. ಶೇ.50-50 ನಿಯಮ ಮುಂದುವರೆಯಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದರು.

BIG NEWS: ರಾಜ್ಯದ ಸರ್ಕಾರಿ ಶಾಲೆಯಲ್ಲಿ 'ನ್ಯಾನೊ ಉಪಗ್ರಹ ನಿರ್ಮಾಣ'ಕ್ಕೆ 1.90 ಕೋಟಿ ರೂ ಬಿಡುಗಡೆ - ಸಚಿವ ಡಾ.ಸಿಎನ್.ಅಶ್ವತ್ಥನಾರಾಯಣ

ಈ ಬಳಿಕ ಮಾತನಾಡಿದಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು, ಬೆಂಗಳೂರು ಬಿಟ್ಟು ಶಾಲಾ ಕಾಲೇಜು ಇನ್ನುಳಿದ ಎಲ್ಲಾ ಕಡೆಯಲ್ಲಿ ಇದೆ. ಪಾಸಿಟಿವಿಟಿ ದರ ಆಧರಿಸಿ ಶಾಲೆಗಳನ್ನು ಬಂದ್ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಹೆಚ್ಚಿರುವ ಕಾರಣದಿಂದಾಗಿ ಶಾಲೆಗಳಿಗೆ ರಜೆ ಮುಂದುವರೆಯಲಿದೆ. ಮುಂದಿನ ವಾರ ಸಭೆಯನ್ನು ಸೇರಿ ಜನವರಿ 31ರ ನಂತ್ರ ಶಾಲೆಗಳನ್ನು ತೆರೆಯಬೇಕಾ ಬೇಡವಾ ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags