Kannada News Now

1.8M Followers

ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಸಿಹಿಸುದ್ದಿ : ಇಂದು ಆನ್ ಲೈನ್ ಕೌನ್ಸೆಲಿಂಗ್|Transfer of Teachers

03 Feb 2022.05:44 AM

ಕೊಪ್ಪಳ : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ (Transfer of teachers) ಸಿಹಿಸುದ್ದಿಯೊಂದು ಸಿಕ್ಕಿದ್ದು, 2020-21 ಸಾಲಿನ ಅಂತರ ಘಟಕ ವಿಭಾಗ ಹೊರಗಿನ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವರ್ಗವಣೆಯು ಜೂಮ್ ಸಭೆ (Online) ವರ್ಚುವಲ್‌ನ ಗಣಕಿಕೃತ ಕೌನ್ಸಲಿಂಗ್‌ನ್ನು ಫೆಬ್ರವರಿ 03 ರಂದು ಅಪರಾಹ್ನ 12 ಗಂಟೆಗೆ ಜಿಲ್ಲಾಡಳಿತ ಭವನದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಲಾಗಿದೆ.

ಅಂತಿಮ ಆದ್ಯತಾ ಕೌನ್ಸಲಿಂಗ್ ಪಟ್ಟಿಯಲ್ಲಿರುವ ಶಿಕ್ಷಕರು ಪರಸ್ಪರ ವರ್ಗಾವಣಾ ಮೂಲ ಅರ್ಜಿ ಹಾಗೂ ಆದ್ಯತೆಯ ಮೂಲ ದಾಖಲೆಗಳೊಂದಿಗೆ ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಇಬ್ಬರು ಶಿಕ್ಷಕರುಗಳು ಯಾವ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಸುತ್ತಿರುವರೋ ಆಯಾ ಜಿಲ್ಲೆಯ ವರ್ಚುವಲ್ (ಆನ್‌ಲೈನ್) ಕೌನ್ಸಲಿಂಗ್‌ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಲು ತಿಳಿಸಲಾಗಿದೆ.

ಇಬ್ಬರು ಶಿಕ್ಷಕರು ಏಕಕಾಲದಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಹಾಜರಾಗಿ ವರ್ಗವಣಾ ಕೌನ್ಸಲಿಂಗ್ ತಂತ್ರಾಂಶದಲ್ಲಿ ಒಪ್ಪಿಗೆ ಸೂಚಿಸಿದಲ್ಲಿ ಮಾತ್ರ ವರ್ಗವಣಾ ಆದೇಶ ಜಾರಿಗೊಳಿಸಲಾಗುವದು. ಇಬ್ಬರು ಶಿಕ್ಷಕರಲ್ಲಿ ಒಬ್ಬರು ಯಾರಾದರು ಗೈರು ಹಾಜರಾದಲ್ಲಿ ಅಂತಹ ಪ್ರಕರಣವನ್ನು ಗೈರು ಹಾಜರಿ ಪ್ರಕರಣ ಎಂದು ಪರಿಗಣಿಸಲಾಗುವದು. ನಂತರ ಯಾವುದೇ ಅಹವಾಲು ಅಸ್ಪದವಿರುವದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೆರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags