Kannada News Now

1.8M Followers

BIGG BREAKING : 2 ಹಂತಗಳಲ್ಲಿ ಶಾಲಾ-ಕಾಲೇಜು ಆರಂಭ, ಸೋಮವಾರದಿಂದ ಹೈಸ್ಕೂಲ್ ಶುರು : ಸಿಎಂ ಬೊಮ್ಮಾಯಿ ಘೋಷಣೆ

10 Feb 2022.7:26 PM

ಬೆಂಗಳೂರು : ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್‌-ಕೇಸರಿ ಶಾಲು ವಿವಾದದ ಕುರಿತಾಗಿ ಹೈಕೋರ್ಟ್ ತ್ರಿ ಸದಸ್ಯ ಪೀಠ ಮಧ್ಯಂತರ ಆದೇಶ ಪ್ರಕಟಿಸಿದ್ದು, ವಿಚಾರಣೆ ಮುಗಿಯುವವರೆಗೂ ಧಾರ್ಮಿಕ ಗುರುತುಗಳನ್ನ ಬಳಸಬಾರದು. ಶೀಘ್ರವೇ ಕಾಲಾ-ಕಾಲೇಜು ಆರಂಭಿಸಿ ಎಂದು ಸೂಚಿಸಿದೆ.

ಹೈಕೋರ್ಟ್‌ ಆದೇಶದ ಬೆನ್ನೆಲ್ಲೇ ಮುಖ್ಯಮಂತ್ರಿಗಳು ಮಹತ್ವದ ಸಭೆ ನಡೆಸಿದ್ದು, ರಾಜ್ಯದಲ್ಲಿ 2 ಹಂತಗಳಲ್ಲಿ ಶಾಲೆ ಆರಂಭಿಸಲಾಗುವುದು. ಮೊದಲ ಹಂತದಲ್ಲಿ ಹೈಸ್ಕೂಲ್‌ ಅಂದ್ರೆ 10ನೇ ತರಗತಿವರೆಗೆ ತರಗತಿಗಳನ್ನ ಆರಂಭಿಸಲಾಗುದು. ನಂತ್ರ ಪಿಯುಸಿ ಪ್ರಾರಂಭಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅಂದ್ಹಾಗೆ, ಹೈಕೋರ್ಟ್ ತ್ರಿಸದಸ್ಯ ಪೀಠ, ' ಮುಂದಿನ ವಿಚಾರಣೆಯನ್ನ ಸೋಮವಾರ ಮಧ್ಯಹ್ನ 2.30ರವರೆಗೆ ಮುಂದೂಡಲಾಗಿದೆ. ಈಗ ಈಗ ಮಧ್ಯಂತರ ಆದೇಶ ನೀಡಲು ಬಯಸುತ್ತೇವೆ. ಅದ್ರಂತೆ, ವಿಚಾರಣೆ ಮುಗಿಯುವವರೆಗೂ ಧಾರ್ಮಿಕ ಗುರುತುಗಳನ್ನ ಬಳಸಬಾರದು. ವಿಚಾರಣೆ ಮುಗಿಯುವವರೆಗೂ ಶಾಲಾ-ಕಾಲೇಜುಗಳಲ್ಲಿ ಹಿಜಾಬ್-ಶಾಲು ಧರಿಸುವಂತಿಲ್ಲ' ಎಂದಿದೆ.

'ರಾಜ್ಯದಲ್ಲಿ ಶಾಂತಿ ನೆಮ್ಮದಿ ಮರಳಬೇಕು.ಕೆಲವು ದಿನಗಳ ಕಾಲ ನೀವು ನಿಮ್ಮ ನಂಬಿಕೆ ಬಿಡುವುದು ಒಳ್ಳೆಯದು. ಕೆಲವೇ ದಿನಗಳಲ್ಲಿ ಅಂತಿಮ ತೀರ್ಪು ಪ್ರಕಟಿಸುತ್ತೇವೆ. ಅಲ್ಲಿಯವರೆಗೆ ಧಾರ್ಮಿಕ ಗುರುತುಗಳನ್ನ ಬಳಸಬಾರದು' ಎಂದಿದ್ದಾರೆ. ಇನ್ನು ಶೀಘ್ರದಲ್ಲಿಯೇ ರಾಜ್ಯದಲ್ಲಿ ಶಾಲಾ ಕಾಲೇಜುಗಳನ್ನ ಪ್ರಾರಂಭಿಸಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.

BIG BREAKING NEWS: ಸೋಮವಾರದಿಂದ ಹೈಸ್ಕೂಲ್‌ ತರಗತಿ ಶುರು, ಸದ್ಯಕ್ಕಿಲ್ಲ ಕಾಲೇಜು ಓಪನ್‌: ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

'ದೇಶ ಮುಖ್ಯವೊ ? ಧರ್ಮ ಮುಖ್ಯವೋ ?' ಡ್ರೆಸ್ ಕೋಡ್‌ಗೆ ಸಂಬಂಧಿಸಿದ ಧಾರ್ಮಿಕ ಅಸಂಗತತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags